ಚಿಕ್ಕಮಗಳೂರು: ಜಯನಗರ ಬಡಾವಣೆಯ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸ ಂಘದ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿವೃತ್ತ ವೀರಯೋಧರು, ರೈತರು ಮತ್ತು ವಿದ್ಯಾರ್ಥಿ ಗಳಿಗೆ ಗೌರವಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಈಚೆಗೆ ಆಚರಿಸಿಕೊಂಡರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ದೇಶದ ರಕ್ಷಣೆಗಾಗಿ ಪ್ರಾಣವನ್ನು ಲೆಕ್ಕಿಸದೇ ಗಡಿಯಲ್ಲಿ ನಮ್ಮ ಕಾಪಾಡುತ್ತಿರುವ ಯೋಧರಿಗೆ ದೊಡ್ಡ ನಮನ. ಅವರಿಂದಲೇ ಜನಸಾಮಾನ್ಯರು ನೆಮ್ಮದಿ, ಸಂತೋಷದಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ದೇಶದ ಬೆನ್ನಲುಬು ರೈತರಿಂದಾಗಿ ಜನತೆ ಹಸಿನಿಂದ ಬಳಲದೇ ಹೊಟ್ಟೆತುಂಬಾ ಆಹಾರ ಸೇವಿಸಲು ಕಾರಣವಾಗಿದೆ. ರೈತರು ಮತ್ತು ಯೋಧರು ರಾಷ್ಟ್ರದ ಬಹುದೊಡ್ಡ ಸಂಪತ್ತು. ಈ ಮಹಾನೀಯರಿಂದಲೇ ದೇಶವು ಸುಭೀಕ್ಷವಾಗಿ ಮುಂದುವರೆಯಲು ಸಾಧ್ಯವಾಗಿದೆ ಎಂದರು.
ಆ ನಿಟ್ಟಿನಲ್ಲಿ ವೀರ ಯೋಧರು, ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಭವಿಷ್ಯದ ಸತ್ಪ್ರಜೆಗಳಾದ ವಿ ದ್ಯಾರ್ಥಿಗಳಿಗೆ ಗೌರವಿಸಲಾಗಿದೆ ಎಂದರು. ಇದೇ ವೇಳೆ ಸಂಘದ ಕಟ್ಟಡದಲ್ಲಿ ಅಧ್ಯಕ್ಷರು ೭೯ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆ ಜಂಟಿ ಕೃಷಿ ನಿರ್ದೇಶಕಿ ಹೆಚ್.ಎಲ್. ಸುಜಾತ ಸಂಘದ ಹಿರಿಯ ಉಪಾ ಧ್ಯಕ್ಷರಾದ ಉದಯ್ ಪೈ, ಟಿ.ಡಿ.ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಮನುಪ, ಖಜಾಂಚಿ ಶ್ರೀಕಾಂತ್ ಶೆಟ್ಟಿ, ತಾಲ್ಲೂಕು ಸಂಘದ ಕಾರ್ಯದರ್ಶಿಗಳಾದ ಶಂಕರ್‌ಮೂರ್ತಿ, ಗೌತಮ್‌ಪ್ರಭು, ಆನಂದ್, ಅಜ್ಜಂಪುರ ಆಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Agricultural Equipment Association felicitates soldiers farmers and students
Leave a comment