ಚಿಕ್ಕಮಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಬಿಡುಗಡೆ ಹಾಗೂ ಅವರ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಕಾಫಿನಾಡಿನ ಅಭಿಮಾನಿಯೊಬ್ಬರು ವಿಶಿಷ್ಟ ಹರಕೆ ಹೊತ್ತು ಪಾದಯಾತ್ರೆ ಆರಂಭಿಸಿದ್ದಾರೆ.
ಚಿಕ್ಕಮಗಳೂರು ನಗರದ ಹಿರೇಮಗಳೂರು ನಿವಾಸಿ ಸುದೀಪ್ ಎಂಬುವವರು ಈ ಸಾಹಸಕ್ಕೆ ಮುಂದಾದ ಅಭಿಮಾನಿ. ದರ್ಶನ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ಹಿರೇಮಗಳೂರಿನಿಂದ ಧರ್ಮಸ್ಥಳದವರೆಗೆ ಸುಮಾರು 100 ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಲು ಸುದೀಪ್ ನಿರ್ಧರಿಸಿದ್ದಾರೆ.
ದರ್ಶನ್ ಅವರು ಶೀಘ್ರದಲ್ಲೇ ಕಾನೂನು ಸಂಕೋಲೆಯಿಂದ ಮುಕ್ತರಾಗಿ ಹೊರಬರಲಿ ಎಂಬ ಆಶಾವಾದದೊಂದಿಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಇವರು ಪಾದಯಾತ್ರೆ ಹೊರಟಿದ್ದಾರೆ.
ಭಾನುವಾರ ಬೆಳಗ್ಗೆ ಸುದೀಪ್ ಅವರು ಧರ್ಮಸ್ಥಳ ತಲುಪುವ ನಿರೀಕ್ಷೆಯಿದ್ದು, ನಟನ ಮೇಲಿರುವ ಈ ಅಪಾರ ಅಭಿಮಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Actor Darshan walks holding a photo in his hand
Leave a comment