ಚಿಕ್ಕಮಗಳೂರು :
ಮುಳ್ಳಯ್ಯನಗಿರಿ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪ್ರಪಾತಕ್ಕೆ ಉರುಳಿ ಐವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಸಿನಿಮೀಯ ರೀತಿಯಲ್ಲಿ ಅರಣ್ಯದ ಮಧ್ಯೆ 250 ಅಡಿಗಳಷ್ಟು ಕೆಳಗೆ ಬಿದ್ದಿದೆ.
ಮುಳ್ಳಯ್ಯನಗಿರಿಯಲ್ಲಿ ತಪ್ಪಲಿನಲ್ಲಿ ಸುಮಾರು 250 ಅಡಿ ಎತ್ತರದ ಪ್ರದೇಶದಿಂದ ಕಾರೊಂದು ಕೆಳಗೆ ಬಿದ್ದಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದು ಹೈದರಾಬಾದ್ ಮೂಲದ ಕಾರು ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರಿಗೂ ಗಂಭೀರ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬರೋಬ್ಬರಿ 250 ಅಡಿ ಎತ್ತರದಿಂದ ಬೀಳುವಾಗ ಮರಗಳು ಹಾಗೂ ರೆಂಬೆ ಕೊಂಬೆಗಳಿಗೆ ಸಿಲುಕಿದ ಕಾರು ಸಿನಿಮೀಯ ರೀತಿಯಲ್ಲಿ ಕೆಳಗೆ ಬಿದ್ದಿದ್ದು ಇದರಿಂದಾಗಿ ಕಾರು ಬೀಳುವ ವೇಗ ಕಡಿಮೆಯಾಗಿದೆ, ಪ್ರಾಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮರದ ರೆಂಬೆ-,ಕೊಂಬೆಗಳಿಗೆ ಸಿಲುಕಿ ಅಲ್ಲೇ ನಿಂತ ಕಾರು ಸಂಪೂರ್ಣ ಜಖಂ ಗೊಂಡಿದೆ. ಸದ್ಯ ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ಹಾಗೂ ಸ್ಥಳೀಯರು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಿರುವು ರಸ್ತೆಯಲ್ಲಿ ಅಪಘಾತಗಳು ನಿತ್ಯ ಹೆಚ್ಚುತ್ತಿವೆ
Leave a comment