ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಭದ್ರ ಡ್ಯಾಮ್ ನಿಂದ ಚಿತ್ರದುರ್ಗ ಮತ್ತು ತುಮಕೂರು ಹಾಗೂ ಕೋಲಾರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸಲು ಕಳೆದ ಇಪ್ಪತ್ತು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಪದೇ,ಪದೇ ಕಾಮಗಾರಿಯಿಂದ ಜನರಿಗೆ ತೊಂದರೆ ಆಗುತ್ತಿದೆ ಎಂಬ ದೂರುಗಳು ಬಂದರು ಎಚ್ಚರಿಕೆ ವಹಿಸದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಜಾವಬ್ದಾರಿ ತೋರಿಸುತ್ತಿದ್ದಾರೆ ಎಂದು ಜನ ದೂರುತ್ತಿದ್ದಾರೆ.
ಕಳೆದ ತಿಂಗಳು ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಗ್ರಾಮದ ಸಮೀಪ ಭದ್ರ ನೀರು ಹರಿಸಿದ್ದರಿಂದ ರಾತ್ರಿ ವೇಳೆಯಲ್ಲಿ ಸೇತುವೆ ಕುಸಿದು ಅನಾಹುತ ಆಗಿತ್ತು .ಇದರಿಂದ ಬೆಳಗ್ಗೆ ಎಂ.ಹೊಸಳ್ಳಿ ಗ್ರಾಮದ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಡವಾಗಿದ್ದರಿಂದ ಆತನ ಪ್ರಾಣವೇ ಹೋಗಿತ್ತು ಅಧಿಕಾರಿಗಳು ಬಂದು ತಿಪ್ಪೇ ಸಾರಿಸಿ ಹೋದರು.
ನಿನ್ನೆ ರಾತ್ರಿ ಎನ್.ಆರ್.ಪುರದ ಸಮೀಪದ ಸಾತ್ಕೊಳ ಗ್ರಾಮದಲ್ಲಿ ಮತ್ತೊಂದು ಅನಾಹುತ ಸಂಭವಿಸಿದೆ.ಭದ್ರ ನಾಲೆ ತೆಗೆಯುವಾಗ ಬಂಡೆ ಸ್ಪೋಟಗೊಳಿಸಿದ್ದರಿಂದ ಹತ್ತಕ್ಕೂ ಹೆಚ್ಚು ಮನೆಗಳ ಮೇಲೆ ಕಲ್ಲಿನ ರಾಶಿ ಬಿದ್ದು ಸ್ವಲ್ಪದರಲ್ಲಿ ಪ್ರಾಣಪಾಯದಿಂದ ಜನ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೃಷ್ಣಮೂರ್ತಿ, ಚನ್ನಪ್ಪ, ಗಣೇಶ ಮತ್ತು ಶ್ರೀನಿವಾಸ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಮನೆಗಳ ಮೇಲೆ ಬಂಡೆ ಸಿಡಿದು ಮನೆಗಳ ಮೇಲೆ ಬಿದ್ದಿದ್ದು ಬಾಣಂತಿ ಮತ್ತು ಮಗು ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇನ್ನಾದರು ಅಧಿಕಾರಿಗಳು ಎಚ್ಚರಿಕೆ ವಹಿಸ ಬೇಕಾಗಿದೆ.
A rockfall on a solid bank a pile of stones on top of houses
Leave a comment