ಚಿಕ್ಕಮಗಳೂರು : ಕನ್ನಡ ನೆಲ ಜಲ ಭಾಷೆ ಅಂದ್ರೆ ವೇದಿಕೆಯ ಮೇಲೆ ಪುಂಕಾನು ಪುಂಕವಾಗಿ ಅಬ್ಬರದ ಭಾಷಣಕಷ್ಟೆ ಸೀಮಿತ ಅನ್ನುವಂತಾಗಿದೆ. ವರ್ಷಕ್ಕೊಮ್ಮೆ ಜರುಗೋ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಕೇವಲ ತೋರಿಕೆ ಪ್ರೀತಿಯಷ್ಟೇ ಅನ್ನುವಂತೆ ಕಾಣುತ್ತಿದೆ. ಆದರೆ ಇಲ್ಲೊಂದು ತಂಡ ರಾಜ್ಯವೇ ಮೆಚ್ಚುವಂತ ಕೆಲಸ ಮಾಡಿ ಕನ್ನಡ ತನವನ್ನ ವಿಚಾರಗಳನ್ನ ಮೇಳೈಸುತ್ತೆ ಮಾಡಿದೆ. ಆ ಕಾರ್ಯಕ್ಕೆ ಕೈ ಹಾಕಿರೋದು ಅದುವೇ “ಕನ್ನಡ ಮನಸುಗಳು ಕರ್ನಾಟಕ ಎಂಬ ಎನ್‌ಜಿಒ ತಂಡ” ಮಾಡಿರೋ ಕಾರ್ಯ ನಿಜಕ್ಕೂ ಶ್ಲಾಘನೀಯ..!. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಬೆಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. 1885ರಲ್ಲಿ ಆರಂಭವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ.
ಕೆಲವೇ ದಿನಗಳ ಹಿಂದೆ ಅಳುವಿನ ಹಂಚಿನಲ್ಲಿತ್ತು. ಈ ಶಾಲೆಗೆ ಹಾಜರಾತಿ ಕೊರತೆಯೂ ಕಾಡುತ್ತಿತ್ತು. ಸರಿಯಾದ ಸಲಕರಣೆ ಪೀಠೋಪಕರಣ ಹಾಗೂ ಕೊಠಡಿ ದುರಸ್ತಿಯಲ್ಲಿದ್ದ ಕಾರಣ ಶತಮಾನದ ಈ ಕನ್ನಡ ಶಾಲೆ ಸರ್ಕಾರದ ಕಣ್ಣಿಗೆ ಕಾಣಲೇ ಇಲ್ಲವೇನೋ. ಆದರೆ ಈ ಕನ್ನಡ ಮನಸುಗಳ ತಂಡ ಗ್ರಾಮಕ್ಕೆ ಆಗಮಿಸಿ ಇಲ್ಲಿ ಒಂದು ರೀತಿಯ ಅಭಿಯಾನ ನಡೆಸಿ ಇದೀಗ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಈ ಎನ್‌ಜಿಓ ತಂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಲೆಯ ಶಾಲೆಯ ಕಟ್ಟಡ ಮೇಲ್ಚಾವಣಿಯನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿಯುವ ಮೂಲಕ ಗಮನ ಸೆಳೆದಿದೆ. ಅಷ್ಟೇ ಅಲ್ಲದೆ ಶಾಲೆಯ ಕಾಂಪೌಂಡ್ ಹಾಗೂ ಗೋಡೆಗಳ ಮೇಲೆ ಕನ್ನಡ ಹಾಗೂ ಕನ್ನಡದ ಗಣ್ಯರ ಭಾವಚಿತ್ರಗಳನ್ನು ಅದ್ಭುತವಾಗಿ ಮೂಡಿಸುವ ಮೂಲಕ ಕನ್ನಡತನ ಎದ್ದು ಕಾಣುವಂತೆ ಮಾಡಿದೆ. ಬಗೆಬಗೆಯ ಚಿತ್ತಾಕರ್ಷಕ ಕಾರ್ಟೂನ್ ಚಿತ್ರಗಳನ್ನು ಬರೆದು ಮಕ್ಕಳ ಗಮನ ಶಾಲೆಯ ಮೇಲೆ ಬೀಳುವಂತೆ ಮಾಡಿರುವುದು ನಿಜಕ್ಕೂ ಸಂತಸದ ವಿಚಾರ.
ಸರ್ಕಾರೇತರ ಈ ಸಂಸ್ಥೆಯ ಕಿರಣ್ ಶಾಲೆಯ ಸಹಶಿಕ್ಷಕಿ ಸುಮಲತಾ, ಎಸ್ ಡಿ ಎಂ ಸಿ ಅಧ್ಯಕ್ಷರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಕಾರ್ಯಕ್ಕೆ ಕೈಜೋಡಿಸಿದ್ದರಿಂದ ಮತ್ತಷ್ಟು ಪ್ರೇರೇಪಿತಗೊಂಡಿರುವ ಈ ಕನ್ನಡ ಮನಸುಗಳ ತಂಡ ಶಾಲೆಗೆ ಬೇಕಾದ ಫ್ಯಾನ್, ವಿದ್ಯುತ್, ಕುಡಿಯುವ ನೀರು ಸೇರಿ ಅನೇಕ ವ್ಯವಸ್ಥೆಗಳನ್ನು ಮಾಡಿರುವುದು ಗಮನಾರ್ಹ..!. ಇನ್ನೇನು ಶಾಲೆಯ ಕಥೆ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ಶತಮಾನದ ಶಾಲೆ, ಫೋಟೋದ ಹೇಳುವಂತೆ ಮಾಡಿರುವ ಕನ್ನಡ ಮನಸುಗಳ ಸರ್ಕಾರಿಯೇತರ ತಂಡದ ಕಾರ್ಯಕ್ಕೆ ಸೆಲ್ಯೂಟ್ ಹಿನ್ನೆಲೆ ಬೇಕು…
Leave a comment