Home namma chikmagalur chikamagalur ಕ್ಷೇತ್ರ ಪುನರ್ ವಿಂಗಡಣೆ ಪಿಸು-ಪಿಸು, ಗುಸು-ಗುಸು !
chikamagalurHomeLatest Newsnamma chikmagalur

ಕ್ಷೇತ್ರ ಪುನರ್ ವಿಂಗಡಣೆ ಪಿಸು-ಪಿಸು, ಗುಸು-ಗುಸು !

Share
Share

ಚಿಕ್ಕಮಗಳೂರು: ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡಿಸಿ ಹೊಸ ಕ್ಷೇತ್ರಗಳನ್ನು ರಚಿಸುವುದರ ಜೊತೆಗೆ ಮಹಿಳಾ ಮೀಸಲಾತಿ ನೀಡಲು ಏಪ್ರಿಲ್ ತಿಂಗಳ16 ರಂದು ಲೋಕಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ

ಲೋಕಸಭಾ ಕ್ಷೇತ್ರಗಳು ಮುನ್ನೂರಕ್ಕೂ ಹೆಚ್ಚು ಹೊಸ ಕ್ಷೇತ್ರಗಳು ರಚನೆಯಾಗುವುದು ಖಚಿತ. ಇದೇ ರೀತಿ ಕರ್ನಾಟಕ ರಾಜ್ಯದಲ್ಲಿ ಈಗಿರುವ 28 ಕ್ಷೇತ್ರಗಳ ಜೊತೆಗೆ 14 ಕ್ಷೇತ್ರಗಳು ಹೆಚ್ಚಾಗುವುದು ಕೂಡ ಖಚಿತ.ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು ಹೆಚ್ಚಾಗುತ್ತವೆ.

ಇದರ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತಕ್ಕೆ ಹೊಸದಾಗಿ ಸೃಷ್ಟಿಯಾಗುವ ಸಂಖ್ಯೆ ಕಡಿಮೆ ಆಗುತ್ತವೆ ಎಂದು ಸರ್ಕಾರಗಳು ವಿರೋಧ ವ್ಯಕ್ತಪಡಿಸಿದರೂ ಕೂಡಾ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಿಸುವುದು ಖಚಿತ ಎನ್ನಲಾಗುತ್ತಿದೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳನ್ನು ನಿಗದಿ ಪಡಿಸುವುದು ಬಹುತೇಕ ಖಚಿತ. ಆದರೆ ಎಷ್ಟು ವಿಧಾನ ಸಭಾ ಕ್ಷೇತ್ರಗಳು ಹೆಚ್ಚಾಗುತ್ತವೆ ಎಂಬದರ ಬಗ್ಗೆ ರಾಜಕಾರಣಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಪಿಸು_ಪಿಸು,ಗುಸು_ಗುಸು ಎನ್ನುತ್ತಾ ಅವರವರ ಮೂಗಿನ ನೇರ ಕ್ಕೆ ಚರ್ಚೆಗಳು ನಡೆಯುತ್ತಿವೆ.

ಜಿಲ್ಲಾಧಿಕಾರಿ ಅಥವಾ ಚುನಾವಣಾ ಶಾಖೆಗೂ ಕೂಡ ಯಾವುದೇ ಮಾಹಿತಿ ಬಂದಿಲ್ಲ. ನಮ್ಮಿಂದ ಸಹ ಯಾವುದೇ ಮಾಹಿತಿ ಕೋರಿಲ್ಲಾ ಹೀಗಾಗಿ ಯಾರ ಮಾತು ಕೂಡ ಅಧಿಕೃತವಲ್ಲ .
ಹೊಸದಾಗಿ ಒಂದು ಕ್ಷೇತ್ರ ಸೃಷ್ಟಿಯಾಗಬುಹುದು ಅಥವಾ ಮಲೆನಾಡು ಭಾಗದ ಎಂದು ಇನ್ನೂ ಹೆಚ್ಚು ಕ್ಷೇತ್ರಗಳು ರಚನೆಯಾದರು ಆಶ್ಚರ್ಯಪಡುವಂತಿಲ್ಲಾ.

ಮಹಿಳೆಯರ ಸಂಖ್ಯೆ ಹೆಚ್ಚಿರುವ ಕ್ಷೇತ್ರ ಮಾತ್ರ ಪಕ್ಕ ಮಹಿಳಾ ಮೀಸಲು ಕ್ಷೇತ್ರವಾಗುವುದು ಖಚಿತ. ಇದೇ ರೀತಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರ ಇದುವರೆಗೆ ಮೂಡಿಗೆರೆಗೆ ನಿಗದಿಯಾಗಿತ್ತು ಈಗ ಪರಿಶಿಷ್ಟರು ಹೆಚ್ಚಿರುವ ಕ್ಷೇತ್ರಕ್ಕೆ ಬದಲಾವಣೆ ಆಗುತ್ತದೆ.

ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಎದೆ ಬಡಿತ ಹೆಚ್ಚಿಸಿ ನಿದ್ರೆ ಬರದಂತೆ ಆಗಿದೆ. ಈಗ ಜನಗಣತಿ ನಡೆಯುತ್ತಿರುವುದರಿಂದ ಸದ್ಯಕ್ಕೆ ಮೀಸಲಾತಿ ಬದಲಾವಣೆ ಆಗುವುದಿಲ್ಲ ಎಂದು ವಾದ ಮಂಡಿಸುತ್ತಾರೆ.

ಆದರೆ 2011 ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಿಸಲು ಕಾನೂನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬೀರೂರು ಕ್ಷೇತ್ರ ಮತ್ತೆ ರಚನೆಯಾಗಬಹುದು ಎಂದು ಆ ಭಾಗದ ಜನ ಮಾತನಾಡುತ್ತಿದ್ದಾರೆ. ಹೊಸದಾಗಿ ಅಜ್ಜಂಪುರ ತಾಲ್ಲೂಕು ರಚನೆಯಾಗಿರುವುದರಿಂದ ಆ ಭಾಗದಲ್ಲಿ ಅಜ್ಜಂಪುರ ಹೊಸ ವಿಧಾನ ಸಭಾ ಕ್ಷೇತ್ರವಾಗ ಬಹುದು ಎಂದು ವಾದ ಮಾಡುವವರು ಇದ್ದಾರೆ.

ಮಲೆನಾಡು ಪ್ರದೇಶದ ಶೃಂಗೇರಿ ಎನ್.ಆರ್.ಪುರ ಮತ್ತು ಕೊಪ್ಪ ತಾಲ್ಲೂಕು ಸೇರಿ ಒಂದು ವಿಧಾನ ಕ್ಷೇತ್ರ ಪುನರ್ ವಿಂಗಡಣೆ ಮಾಡಬಹುದು ಹೊಸದಾಗಿ ಕೊಪ್ಪ ವಿಧಾನ ಕ್ಷೇತ್ರವಾಗಿಸ ಬಹುದು ಇದರ ಜೊತೆಗೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ಮತ್ತು ಚಿಕ್ಕಮಗಳೂರು ಗ್ರಾಮಾಂತರ ವಿಧಾನ ಸಭಾ ಸೃಷ್ಟಿಯಾಗುತ್ತದೆ ಎನ್ನುವವರು ಇದ್ದಾರೆ.ಅಧಿಕೃತವಾಗಿ ಕೇಂದ್ರ ಸರ್ಕಾರ ಗೆಜೆಟಿಯರ್ ಹೊರ ಬಂದ ಮೇಲೆ ಅಧಿಕೃತವಾಗಿ ಹೇಳಲು ಸಾಧ್ಯ. ಅಲ್ಲಿಯವರೆಗೆ ಅಂತೆ,ಕಂತೆಯ ಸಂತೆ ಸುದ್ದಿಗಳು ಹರಿದಾಡುವುದು ಖಚಿತ.

Constituency redistribution whisper-whisper whisper-whisper!

Share

Leave a comment

Leave a Reply

Your email address will not be published. Required fields are marked *

Don't Miss

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ. ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ...

Related Articles

ಮೆಡಿಕಲ್ ಅಂಗಡಿಗೆ ಕನ್ನ : ₹2.66 ಲಕ್ಷ ನಗದು ದೋಚಿ ಪರಾರಿ

ಚಿಕ್ಕಮಗಳೂರು;  ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ...

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು...