Home namma chikmagalur chikamagalur ಖಾಸಗಿ ಬ್ಯಾಂಕ್ ಗಳಿಂದ ವಾಹನ ಮಾಲೀಕನಿಗೆ ವಂಚನೆ
chikamagalurCrime NewsHomeLatest Newsnamma chikmagalur

ಖಾಸಗಿ ಬ್ಯಾಂಕ್ ಗಳಿಂದ ವಾಹನ ಮಾಲೀಕನಿಗೆ ವಂಚನೆ

Share
Share

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕ್ ಗಳು ಹಾಗೂ ಫೈನಾನ್ಸ್ ಕಂಪನಿಗಳು ಗ್ರಾಹಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಖಾಸಗಿ ಫೈನಾನ್ಸ್ ಸಂಸ್ಥೆಯ ಜೊತೆಗೆ ಆರ್‌ಟಿಒ ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಚಾರದ ಆರೋಪ ಕೇಳಿಬಂದಿದೆ. ವಾಹನದ ಮೂಲ ಮಾಲೀಕರಿಗೆ ಯಾವುದೇ ಮುನ್ಸೂಚನೆ ನೀಡದೆ ದಾಖಲೆಗಳನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪ ಚಿಕ್ಕಮಗಳೂರಿನಲ್ಲಿ ಕೇಳಿ ಬಂದಿದೆ.

ನಗರದ ಇಮ್ತಿಯಾಜ್ ಎಂಬುವರು ೨೦೨೨ರಲ್ಲಿ ಖಾಸಗಿ ಫೈನಾನ್ಸ್ ನಿಂದ ಸರಕು ಸಾಗಣೆ ವಾಹನ ಖರೀದಿಸಲು ೧೨ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದರಲ್ಲಿ ಈಗಾಗಲೇ ೬ ಲಕ್ಷ ರೂಪಾಯಿಗಳನ್ನು ಪ್ರಾಮಾಣಿಕವಾಗಿ ಮರುಪಾವತಿಯನ್ನು ಮಾಡಿದ್ದಾರೆ. ಆದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಎದುರಾದ ಆರ್ಥಿಕ ಸಂಕ?ದಿಂದಾಗಿ ಸಾಲದ ಕಂತುಗಳನ್ನು ಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಸಂದರ್ಭವನ್ನೇ ಬಳಸಿಕೊಂಡ ಫೈನಾನ್ಸ್ ಸಿಬ್ಬಂದಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಹರಾಜನ್ನು ಮಾಡಿದ್ದಾರೆ.

ನಿಯಮಗಳ ಪ್ರಕಾರ ವಾಹನವನ್ನು ಹರಾಜು ಮಾಡುವ ಮುನ್ನ ಅಥವಾ ವರ್ಗಾಯಿಸುವ ಮುನ್ನ ಮೂಲ ಮಾಲೀಕರಿಗೆ ಅಧಿಕೃತ ನೋಟಿಸ್ ನೀಡಬೇಕಾಗುತ್ತದೆ. ಆದರೆ ಇಮ್ತಿಯಾಜ್ ಅವರ ಗಮನಕ್ಕೆ ತರದೆ ಫೈನಾನ್ಸ್ ಕಂಪನಿಯವರು ನಿಯಮಗಳನ್ನು ಗಾಳಿಗೆ ತೂರಿ ವಾಹನವನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಈ ಅಕ್ರಮಕ್ಕೆ ಆರ್‌ಟಿಒ ಅಧಿಕಾರಿಗಳು ಸಾಥ್ ನೀಡಿದ್ದು, ಫೈನಾನ್ಸ್ ಕಂಪನಿ ಸೂಚಿಸಿದ ವ್ಯಕ್ತಿಯ ಹೆಸರಿಗೆ ವಾಹನದ ದಾಖಲೆಗಳನ್ನು ಕಾನೂನುಬಾಹಿರವಾಗಿ ಬದಲಿಸಿಕೊಟ್ಟಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ತಮ್ಮ ಮನೆಯಲ್ಲಿದ್ದ ಅಲ್ಪಸ್ವಲ್ಪ ಚಿನ್ನಾಭರಣಗಳನ್ನು ಅಡಮಾನವಿಟ್ಟು ಕ?ಪಟ್ಟು ಸಾಲ ತೀರಿಸುತ್ತಿದ್ದ ಇಮ್ಮಿಯಾಜ್, ಈಗ ಕೈಯಲ್ಲಿದ್ದ ವಾಹನವೂ ಇಲ್ಲದೆ ಜೀವನ ನಿರ್ವಹಣೆಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ನ್ಯಾಯಕ್ಕಾಗಿ ಉಪ ಲೋಕಾಯುಕ್ತರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿರುವ ಅವರು, ಭ್ರ? ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Vehicle owner cheated by private banks

Share

Leave a comment

Leave a Reply

Your email address will not be published. Required fields are marked *

Don't Miss

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೌರಿ ಹಬ್ಬದ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶಪಡಿಸಿರುವ ಆಘಾತಕಾರಿ ಘಟನೆಯೊಂದು ತರೀಕೆರೆ ತಾಲೂಕಿನ...

Related Articles

ಮೂಡಿಗೆರೆಯಲ್ಲಿ ಮುಸುಕುಧಾರಿ ಖದೀಮರಿಂದ ಸರಗಳ್ಳತನ

ಮೂಡಿಗೆರೆ: ಮುಂಜಾನೆಯ ತಂಪಾದ ವಾತಾವರಣದಲ್ಲಿ ರಸ್ತೆ ಬದಿಯಲ್ಲಿ ನಿರಾತಂಕವಾಗಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರನ್ನು...

ಅರಸನ ನಾಲೆ ಪುನಶ್ಚೇತನ‌ಕ್ಕೆ ಆಗ್ರಹಿಸಿ ಇಂದು ರೈತರ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ಹಾಗೂ...

ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ

ಚಿಕ್ಕಮಗಳೂರು: ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ : ಡಾ.ಮಾತೆ ಗಂಗಾದೇವಿನಾಡಿನ ವೀರಶೈವ-ಲಿಂಗಾಯಿತ ಜನಾಂಗವನ್ನು ಬಸವದಳ ಸೂತ್ರದಡಿ...

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ...