Home namma chikmagalur chikamagalur ಮಾ. 5ರಂದು ಗುತ್ತಿಗೆದಾರಿಂದ ಬೆಂಗಳೂರಿನಲ್ಲಿ ಸಾಂಕೇತಿಕ ಧರಣಿ
chikamagalurHomeLatest Newsnamma chikmagalur

ಮಾ. 5ರಂದು ಗುತ್ತಿಗೆದಾರಿಂದ ಬೆಂಗಳೂರಿನಲ್ಲಿ ಸಾಂಕೇತಿಕ ಧರಣಿ

Share
Share

ಚಿಕ್ಕಮಗಳೂರು: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜೊತೆಗೆ ಬಾಕಿ ಇರುವ ೩೭ ಸಾವಿರ ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಾ. ೫ರಂದು ಬೆಂಗಳೂರಿನಲ್ಲಿ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.

ನಗರದ ಜಿಲ್ಲಾ ಗುತ್ತಿಗೆದಾರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಕಿ ಹಣ ಬಿಡುಗಡೆ ಮಾಡುವಂತೆ ಹಲವು ಬಾರಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಮನವಿಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಹೀಗಾಗಿ ಮಾ. ೫ರಂದು ಬೆಂಗಳೂರಿನಲ್ಲಿ ಕನಿಷ್ಟ ೩೦ ಸಾವಿರ ಗುತ್ತಿಗೆದಾರರು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಅಂದು ರಾಜ್ಯಾದ್ಯಂತ ಎಲ್ಲ ಕಾಮಗಾರಿ ಸ್ಥಗಿತಗೊಳಿಸುತ್ತೇವೆ. ಆದರೂ ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಮಾಹಿತಿ ನೀಡಿ ಗುತ್ತಿಗೆದಾರರ ನಿಯೋಗ ತೆರಳಿದಾಗ ಸಿಎಂ ಭೇಟಿ ಮಾಡಿ ಹಾಗೆಯೇ ಕಳಿಸುತ್ತಾರೆ. ಇದುವರೆಗೆ ೮ ಸಚಿವರು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಗುತ್ತಿಗೆದಾರರ ಸಭೆಯನ್ನು ಅಧಿಕೃತವಾಗಿ ಕರೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರಿಗೆ ಕೇವಲ ಬಾಕಿ ಹಣ ಬಿಡುಗಡೆ ಮಾಡುವುದು ಮಾತ್ರವಲ್ಲದೆ, ಇನ್ನು ಹಲವು ಬೇಡಿಕೆಗಳಿವೆ. ಈ ಬಗ್ಗೆಯೂ ಸಿಎಂ ಸೇರಿದಂತೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಕಾಮಗಾರಿ ನಡೆಸಲು ನಮ್ಮ ಆಸ್ತಿ ಆಭರಣ ಅಡಮಾನ ಇಟ್ಟಿದ್ದೇವೆ. ಸಂಬಂಧಿಕರ ಬಳಿಯೂ ಸಾಲ ಪಡೆದಿದ್ದು, ಅದನ್ನು ತೀರಿಸಲು ಸಾಧ್ಯವಾಗದೆ ಅವರಿಂದಲೂ ದೂರವಾಗುವ ಪರಿಸ್ಥಿತಿ ಎದುರಾಗಿದೆ. ನಾವು ಸರ್ಕಾರದ ಬಳಿ ಯಾವುದೇ ಸವಲತ್ತು ಕೇಳುತ್ತಿಲ್ಲ. ಬದಲಿಗೆ ನಮ್ಮ ಹಣ ನಮಗೆ ನೀಡಿ ಎನ್ನುವ ಬೇಡಿಕೆಯನ್ನಷ್ಟೇ ಇಟ್ಟಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಶಾಂತೇಗೌಡ, ಗುತ್ತಿಗೆದಾರರ ಸಂಘದ ಪ್ರಮುಖರಾದ ದಿನೇಶ್, ಗುರುಸಿದ್ದಪ್ಪ, ಮಂಜುನಾಥ್, ಗುರುರಾಜ್, ರವಿ ಚನ್ನಪ್ಪ, ರಂಗಸ್ವಾಮಿ, ಹೇಮಂತ್ ಕುಮಾರ್, ಸುಬ್ರಹ್ಮಣ್ಯ ಮತ್ತಿತರರಿದ್ದರು.

Symbolic protest by contractor in Bengaluru on 5th March

Share

Leave a comment

Leave a Reply

Your email address will not be published. Required fields are marked *

Don't Miss

ಹೇಮಾವತಿ ನದಿಯಲ್ಲಿ ಬಳಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಮೂಡಿಗೆರೆ: ಹೇಮಾವತಿ ನದಿಯಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿಗಂಡಿ ಬಳಿ ನಡೆದಿದೆ. ನದಿ ತೀರದಲ್ಲಿ ತುಂಡಾಗಿ ಬಿದ್ದಿದ್ದ ಸಜೀವ ವಿದ್ಯುತ್...

ಜಿಲ್ಲೆಯಲ್ಲಿ “ಅಡ್ಜಸ್ಟ ಮೆಂಟ್ ಜನಪ್ರತಿನಿಧಿಗಳು. ಜಿಲ್ಲೆ ದೋಚುತ್ತಿರುವ ಖದೀಮರು ?

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಿತ್ಯ ದರೋಡೆ ನಡಯುತ್ತಿವೆ.ಜೊತೆಗೆ ಡ್ರಗ್ಸ್ ಮಾಫಿಯಾ ಕೂಡ ಎಂಟ್ರಿ ಕೊಟ್ಟಿದೆ. ಜಿಲ್ಲೆಯ ಸಮಸ್ಯೆಗಳ ವಿಷಯಗಳ ಮೇಲೆ ನಿಗಾ ವಹಿಸದೆ ಇರುವುದರಿಂದ ರಾಜ್ಯದ ವಿವಿಧ ಭಾಗದಿಂದ ಮತ್ತು...

Related Articles

ನಗರಸಭೆಯಿಂದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬೀಗ

ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್...

ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು...

ಕಬಡ್ಡಿ-ಖೋಖೋ ಗ್ರಾಮೀಣ ಸೊಗಡಿನ ಕ್ರೀಡೆಗಳು

ಚಿಕ್ಕಮಗಳೂರು: ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಗ್ರಾಮೀಣ ಸೊಗಡಿನ ಅ ಮೂಲ್ಯವಾದ ಕ್ರೀಡೆಗಳು. ಇವುಗಳನ್ನು ಮುಂದಿನ...

ಗುತ್ತಿಗೆದಾರರ ಬಾಕಿ ಹಣ ಮರುಪಾವತಿಗಾಗಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿರೂ. ಹಣ ಮರುಪಾವತಿಗೆ ಒತ್ತಾಯಿಸಿ ಮಾರ್ಚ್ ೦೫...