ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕೆಎಂ ರಸ್ತೆಯ ಪುಷ್ಪಗಿರಿ ಪೇಪರ್ ಮಾರ್ಟ್ ಬಳಿ ನಗರ ಠಾಣೆಯ ಪಿಎಸ್ಐ ಶಂಭುಲಿಂಗನಗೌಡ ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಈ ಕಾರ್ಯಾಚರಣೆ ನಡೆದಿದೆ.
ಪವಿತ್ರವನ ಕಡೆಯಿಂದ ಬಂದ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಯಾವುದೇ ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ತುಂಬಿರುವುದು ಪತ್ತೆಯಾಗಿದೆ.
ವಾಹನದಲ್ಲಿದ್ದ ಅಂದಾಜು 10 ಸಾವಿರ ಮೌಲ್ಯದ ಒಂದು ಎಮ್ಮೆ ಹಾಗೂ 80 ಸಾವಿರ ಮೌಲ್ಯದ ಎರಡು ಎತ್ತುಗಳನ್ನು ರಕ್ಷಿಸಲಾಗಿದೆ. ಚಾಲಕ ಮತ್ತಾವರ ಮೂಲದ ಅಖಿಲ್ ಎಂ.ಎನ್ (32) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹಾಗೂ ವಾಹನದ ಪರ್ಮಿಟ್ ಉಲ್ಲಂಘಿಸಿ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Vehicle illegally transporting cattle seized
Leave a comment