Home namma chikmagalur chikamagalur ವಿಬಿ-ಜಿ ರಾಮ್‌ಜೀ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಕುತಂತ್ರ
chikamagalurHomeLatest Newsnamma chikmagalur

ವಿಬಿ-ಜಿ ರಾಮ್‌ಜೀ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಕುತಂತ್ರ

Share
Share

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಪಕ್ಷ ಹ ಲವಾರು ಕುತಂತ್ರ ನಡೆಸಿ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಸತ್ಯ ದರ್ಶನ ಮಾಡಿಸಲು ರಾಜ್ಯಾ ದ್ಯಂತ ಜನಜಾಗೃತಿ ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ಧ ವಿಬಿ-ಜಿ ರಾಮ್‌ಜೀ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಗಾಂಧೀಜಿ ಅಪ್ಪಟ ಶ್ರೀರಾಮ ಭಕ್ತರಾಗಿದ್ದರು. ಅವರು ಜೀವಂ ತವಾಗಿದ್ದರೆ ಹೊಸ ಕಾಯ್ದೆಗೆ ವಿಬಿ-ಜಿರಾಮ್ ಜಿ ಹೆಸರಿಡಲು ಬಹಳಷ್ಟು ಹೆಮ್ಮೆಪಡುತ್ತಿದ್ದರು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಕಾಯ್ದೆಗೆ ೧೦೦ ದಿನಗಳ ಕೆಲಸವಿತ್ತು. ಹೊಸ ಕಾಯ್ದೆಯಲ್ಲಿ ೧೨೦ ದಿನಗಳ ಕೆಲ ಸವಿದೆ. ಹಿಂದೆ ಕಾಯ್ದೆಯಲ್ಲಿ ಕೋಟ್ಯಾಂತರ ರೂ.ಗಳ ಭಾರೀ ಭ್ರಷ್ಟಚಾರ ನಡೆಯುತ್ತಿತ್ತು. ಇದನ್ನು ತಡೆಗಟ್ಟ ಲು ಮೋದಿ ಸರ್ಕಾರ ಯಾವುದೇ ಬಲಾಡ್ಯ ನಾಯಕರ ಹೆಸರಿಡದೇ ರಾಮ್‌ಜಿ ಹೆಸರಿನಲ್ಲಿ ನಾಮಕರಣ ಗೊಳಿಸಲು ಮುಂದಾಗಿದ್ದಾರೆ ಎಂದರು.

ಗಾಂಧೀಜಿಯವರ ಬಗ್ಗೆ ಬಿಜೆಪಿಯಲ್ಲಿ ಬಹಳಷ್ಟು ಅಭಿಮಾನವಿದೆ. ದೇಶದ ಬಹುತೇಕ ಕಡೆಗಳಲ್ಲಿ ಗಾ ಂಧಿಜೀಯವರ ಹೆಸರಿನ ಯಾವುದೇ ಸಂಸ್ಥೆಗಳನ್ನು ಬದಲಿಸುತ್ತಿಲ್ಲ. ಹೊಸ ಸರ್ಕಾರ ರಚನೆಗೊಂಡಾಗ ಆಳ್ವಿ ಕೆ ನಡೆಸುವ ಸರ್ಕಾರ ಕಾಯ್ದೆಗೆ ಹೊಸ ಹೆಸರಿಡುವುದು ಸಾಮಾನ್ಯ. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಕಾಯ್ದೆಯನ್ನು ಬದಲಿಸಿ ಮರುಹೆಸರಿಟ್ಟಿದೆ ಎಂದು ಹೇಳಿದರು.

ಮನರೇಗಾ ಹೆಸರಿನಲ್ಲಿ ಹಿಂದೆ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸೇರಿದಂತೆ ಹಲವೆಡೆ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎಂಬುದು ಆಡಿಟ್ ವರದಿಯಲ್ಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನತೆಗೆ ದ್ರೋಹವಾಗದಂತೆ ಕೆಲವು ಲೋಪದೋಷಗಳನ್ನು ಸರಿಪಡಿಸಿ, ಭ್ರಷ್ಟಚಾರಕ್ಕೆ ಅವಕಾಶ ಕಲ್ಪಿಸಬಾರದೆಂಬ ದೃ ಷ್ಟಿಯಿಂಧ ಹೊಸ ಹೆಸರಿನಲ್ಲಿ ಅನುಮೋದನೆಗೆ ಮುಂದಾಗಿದೆ ಎಂದರು.

ವಿಬಿ-ಜಿರಾಮ್‌ಜಿ ವಿರುದ್ಧ ರಾಜ್ಯದ ಕಾಂಗ್ರೆಸ್ ಸರ್ಕಾರಗಳು ವಿಚಲೀತರಾಗಿದ್ದಾರೆ. ಕನಿಷ್ಟ ಮೆದುಳಿನ ಶಕ್ತಿಯಿಲ್ಲದಂತೆ ವರ್ತಿಸುತ್ತಿದ್ದಾರೆ. ಸಾರ್ವತ್ರಿಕವಾಗಿ ಅರ್ಥ ಮೂಡಿಸಲು ಭಾಜಪ ಕಾರ್ಯಕರ್ತರು ಒಟ್ಟಾಗಿ ಬೂತ್, ಮಂಡಲ ಹಾಗೂ ವಾರ್ಡ್‌ಗಳಲ್ಲಿ ಕಾಲ್ನಡಿಗೆ ಜಾಥಾ ಅಥವಾ ಸಭೆಗಳ ಮೂಲಕ ಕೇಂದ್ರದ ಹೊಸ ಕಾಯ್ದೆಯ ಸತ್ಯಾಂಶ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ನೂರಾರು ಗ್ರಾ.ಪಂ.ಗಳಿಗೆ ೧೦ ಲಕ್ಷದಂತೆ ಅನುದಾನ ಮೀಸಲಿಟ್ಟಿರುವ ರಾಜ್ಯ ಸರ್ಕಾರ. ಪಂ ಚಾಯಿತಿ ಉಪಯೋಗಿಸಿಕೊಳ್ಳದಂತೆ ಮಾಡುತ್ತಿದೆ. ಬಲಗೈನಲ್ಲಿ ಅನುದಾನ ಬಿಡುಗಡೆಗೊಳಿಸಿ, ಎಡಕೈಯ ನಲ್ಲಿ ತಾನೇ ಕಸಿದುಕೊಳ್ಳುವ ಕೆಲಸ ಮಾಡುವ ಮೂಲಕ ಗ್ರಾ.ಪಂ.ಗೆ ದ್ರೋಹವೆಸಗುತ್ತಿದೆ ಎಂದರು.

ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿರಾಮ್‌ಜಿ ಯೋಜನೆ ಬಗ್ಗೆ ಜಿಲ್ಲೆಯ ಪ್ರತಿ ಮಂಡಳಗಳಲ್ಲಿ ಸಭೆ ನಡೆಸಿ ಸತ್ಯ ಸಂಗತಿಗ ಳನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಸಲಹೆ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಂಗ್ರೆಸ್ ಅಪಪ್ರಚಾರ ವಿ ರುದ್ಧ ಜಿಲ್ಲಾ ಪದಾಧಿಕಾರಿಗಳು, ನಗರ ಅಧ್ಯಕ್ಷರು, ಗ್ರಾಮಾಂತರ ಮಂಡಲ ಮತ್ತು ಬೂತ್ ಅಧ್ಯಕ್ಷರು ಒಟ್ಟಾ ಗಿ ವಿಬಿ-ಜಿರಾಮ್‌ಜಿ ಬಗ್ಗೆ ಕಾಂಗ್ರೆಸ್ ಹಬ್ಬಿಸುತ್ತಿರುವ ಸುಳ್ಳು ವದಂತಿ ತಕ್ಕ ಉತ್ತರ ನೀಡಲು ಸಭೆ ನಡೆಸಿ ಜನರಿಗೆ ಮನವರಿಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ|| ನರೇಂದ್ರ, ಪುಣ್ಯಪಾಲ್, ಬೆಳವಾಡಿ ರವೀಂದ್ರ ಹಾಗೂ ಪಕ್ಷದ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.

VB-G Ramji: Congress’s ploy to sabotage new law

Share

Leave a comment

Leave a Reply

Your email address will not be published. Required fields are marked *

Don't Miss

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

Related Articles

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...