ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಹೈ ಡ್ರಾಮಾ ನೋಡಿದರೆ ಯಾವ ಕಡೆ ನಗಾಡ ಬೇಕೋ ತಿಳಿಯುತ್ತಿಲ್ಲಾ ಎಂದು ಹೇಳುತ್ತಿದ್ದಾರೆ.
13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.ಈಗಾಗಲೇ ತರೀಕೆರೆ ಪತ್ತಿನ ಸಹಕಾರ ಸಂಘಗಳಿಂದ ಮಾಜಿ ಶಾಸಕ ಹಾಲಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಮತ್ತು ಹಾಲಿ ನಿರ್ದೇಶಕ ಕೆ.ಆರ್.ಆನಂದಪ್ಪ ಅವಿರೋಧವಾಗಿ ಅಯ್ಕೆ ಆಗಿದ್ದಾರೆ. ಮೂಡಿಗೆರೆ ಹಳಸೆ ಶಿವಣ್ಣ,ಮತ್ತು ಎನ್.ಆರ್.ಪುರದ ಜಯಪಾಲ್ ಮತ್ತು ಅಪೆಕ್ಸ್ ಅಧ್ಯಕ್ಷರಾಗಿದ್ದ ಬೆಳ್ಳಿ ಪ್ರಕಾಶ್ ಮತ್ತು ಬಸವರಾಜಪ್ಪ ಹಾಗೂ ಸೋನಾಲ್ ಆಯ್ಕೆ ಆಗಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರದ ಸಹಕಾರ ಸಂಘಗಳಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಖಂಡರಾದ ಸಿ.ಟಿ.ರವಿ.ಮತ್ತು ಎಸ್.ಎಲ್.ಬೋಜೇಗೌಡರಿಗೆ ಟಾಂಗ್ ಕೊಡಲು ನಿರಂಜನ ಸ್ಪರ್ಧೆ ಮಾಡಿದ್ದಾರೆ.ಅವರನ್ನು ವಾಪಸ್ ತೆಗೆಸಲು ಬೆಳ್ಳಿ ಪ್ರಕಾಶ್ ಮತ್ತು ಡಿ.ಎಸ್.ಸುರೇಶ್ ಶತ ಪ್ರಯತ್ನ ನಡೆಸಿದ್ದು ಬಿಜೆಪಿ ರಾಜ್ಯ ಅಧ್ಯಕ್ಷ ವಿಜಿಯೇಂದ್ರ ಎಂಟ್ರಿಯಾದರೂ ಜಪ್ಪಯ್ಯ ಎಂದಿಲ್ಲ.
ಶೃಂಗೇರಿಯಲ್ಲಿ ಅವಿರೋಧ ಆಯ್ಕೆಯಾಗಿದೆ, ಕೊಪ್ಪದ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತವೆ. ಟಿ.ಎ.ಪಿ.ಸಿ.ಎಂ.ಎಸ್.ಕ್ಷೇತ್ರದಲ್ಲಿ ಕಡೂರು ಶಾಸಕ ಆನಂದ್ ಸ್ಪರ್ಧೆ ಮಾಡಿರುವುದು ಎಲ್ಲರಿಗೂ ಬಿಸಿ ತುಪ್ಪವಾಗಿದೆ.
ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಕಳೆದ ಹತ್ತು ವರ್ಷಗಳಿಂದ ಬ್ಯಾಂಕ್ ನಲ್ಲಿ ನಯಾ ಪೈಸೆ ಲೋಪವಾಗದಂತೆ ನೋಡಿಕೊಂಡಿರುವ ಟಿ.ಎಲ್.ರಮೇಶ್ ಮತ್ತೊಮ್ಮೆ ಬ್ಯಾಂಕ್ ಸ್ವಚ್ಛ ಮಾಡಲು ಭಾರೀ ಪ್ರಯತ್ನ ನಡೆಸಿದ್ದಾರೆ.ಬ್ಯಾಂಕ್ ನಲ್ಲಿ ನಡೆದಿರುವ ಲೋಪ ದೋಷಗಳು ಬಗ್ಗೆ ರಮೇಶ್ ಅರಿತು ಕುಡಿದಿರುವುದರಿಂದ ಬಿಜೆಪಿಯವರು ಮತ್ತು ಬ್ಯಾಂಕ್ ನ ಆಡಳಿತ ಮಂಡಳಿಯವರು ರಮೇಶ್ ಗೆ ಜೈ,ಜೈ,ಎನ್ನುತ್ತಿದ್ದಾರೆ.ಇವರಿಗೆ ಸೆಡ್ಡು ಹೊಡೆಯಲು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಣದಲ್ಲಿ ಇದ್ದಾರೆ.
ಟಿ.ಎ.ಪಿ.ಸಿ.ಎಂ.ಎಸ್.ಮತ್ತು ಇತರೆ ಸಹಕಾರ ಸಂಘಗಳ ಕ್ಷೇತ್ರದ ಚುನಾವಣೆ ಕುತೂಹಲ ಹುಟ್ಟಿಸಿದೆ. ಉಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನ್ಯಾಯಾಲಯದಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದವರಿಗೆ ಚುನಾವಣಾ ಕಣ ಯಾವ ಲೆಕ್ಕ ಆದರೂ ಅವರೀವರ ಮನವೊಲಿಸಲು ಕಸರತ್ತು ನಡೆಸುವುದು ನೋಡಿದರೆ ಎಷ್ಟು ಲಾಭ ವಿರಬಹುದು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.
DCC Bank election drama
Leave a comment