ತರೀಕೆರೆ: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕತ೯ ಅನಂತ ನಾಡಿಗ್ ಗೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ತರೀಕೆರೆ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು
ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘದ ಮಾಜಿ ಅಧ್ಯಕ್ಷ ಎನ್. ರಾಜು ಮಾತನಾಡಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಅನಂತನಾಡಿಗ್ ಭಾಜನರಾಗಿರುವುದು ಮಾಧ್ಯಮ ಕ್ಷೇತ್ರಕ್ಕೆ ಸಂಧ ಗೌರವವಾಗಿದೆ. ತಮ್ಮ ವೃತ್ತಿ ಪಾವಿತ್ರ್ಯತೆಯನ್ನು ಅನಂತ ನಾಡಿಗ್ ಕಾಪಾಡಿಕೊಂಡು ಬಂದಿದ್ದಾರೆ. ಅವರ ಕಾಯ೯ಕ್ಷಮತೆ ಉಳಿದವರಿಗೆ ಮಾದರಿಯಾಗಲಿ ಎಂದು ಹೇಳಿದರು
ಟಿ.ಎ. ಪಿ.ಸಿ ಎಂ. ಎಸ್. ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ ಇಂದು ಮಾಧ್ಯಮ ಕ್ಷೇತ್ರ ಕಲುಷಿತ ವಾಗಿರುವ ಸಂದರ್ಭದಲ್ಲಿ ಅನಂತನಾಡಿಗ್ ರಂತಹ ಪತ್ರಕತ೯ರು ವಿರಳರಾಗಿದ್ದಾರೆ. ಪ್ರಶಸ್ತಿಯ ಘನತೆ ಹೆಚ್ಚಿದೆ ಎಂದು ಹೇಳಿದರು
ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ವಮಾ೯ ಮಾತನಾಡಿ ಸಮಾಜದ ತಪ್ಪನ್ನು ತಿದ್ದುವ ಕೆಲಸ ಹಾಗೂ ಸಮಾಜಕ್ಕೆ ಉಪಯೋಗವಾಗುವ ಬರಹಗಳ ಮೂಲಕ ಅನಂತ ನಾಡಿಗ್ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು
ಪುರಸಭೆ ಮಾಜಿ ಅಧ್ಯಕ್ಷ ಟಿ. ಎಸ್. ಧಮ೯ರಾಜು ಮಾತನಾಡಿ ಅನಂತ ನಾಡಿಗ್ ಸೇವೆಯನ್ನು ಗೌರವಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ನೀಡಬೇಕು ಎಂದು ಹೇಳಿದರು
ಪುರಸಭೆ ಸದಸ್ಯ ಟಿ. ಎಂ. ಭೋಜರಾಜ್ ಮಾತನಾಡಿ ಕತ೯ವ್ಯ ಪ್ರಜ್ಙೆಗೆ ಹೆಸರಾಗಿರುವ ಅನಂತ ನಾಡಿಗ್ ತಾಲ್ಲೂಕಿನ ಇತಿಹಾಸವನ್ನು ತಿಳಿದವರು ಆಗಿದ್ದಾರೆ. ಅವರ ಮಾಧ್ಯಮ ಸೇವೆ ಸಾಥ೯ಕವಾಗಿದೆ ಎಂದು ಹೇಳಿದರು
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರಾದ ಟಿ.ಆರ್.ಶ್ರೀಧರ್ , ಮನಸುಳಿ ಮೋಹನ್ ಕುಮಾರ್, ಇಮ್ರಾನ್ ಅಹ್ಮದ್ ಬೇಗ್, ಹಷಿ೯ಣಿ. ಟಿ.ವಿ.ಶ್ರೀನಿವಾಸ್, ಆದಿಲ್ ಪಾಷಾ, ಅಬ್ಬಾಸ್, ಇಷಾ೯ದ್ , ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಜಶಿ೯ಗಳಾದ ಟಿ.ಜಿ.ಸದಾನಂದ, ಚೇತನ್ ಕುಮಾರ್, ಟಿ.ಎಸ್.ನಾಗರಾಜು. ಸತೀಶ್, ರಾಜು, ಮುಹೀಬ್ ಇತರರು ಅಭಿನಂದನೆ ಸಲ್ಲಿಸಿದರು
Congratulation ceremony for Media Academy Awardee Anantha Nadig
Leave a comment