ಶಿವನಿ: ಬೆಂಗಳೂರಿನಿಂದ ಹೊಸಪೇಟೆಗೆ,ಹೊಸಪೇಟೆಯಿಂದ ಬೆಂಗಳೂರಿಗೆ ಸಂಚಾರ ಮಾಡುತ್ತಿದ್ದ ಹೊಸಪೇಟೆ ಎಕ್ಸ್‌ಪ್ರೆಸ್ ರೈಲು ಶಿವನಿ ರೈಲು ನಿಲ್ದಾಣದಲ್ಲಿ ಪ್ರತಿದಿನ ಪ್ರಯಾಣಿಕರ ಅನುಕೂಲಕ್ಕಾಗಿ ನಿಂತು ಹೊರಡುತ್ತದೆ ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ನಾಳೆ ಬೆಳಗ್ಗೆ 9,15 ಕ್ಕೆ ರೈಲು ನಿಲುಗಡೆ ಪ್ರಾರಂಭವಾಗಲಿದ್ದು.ಇಲ್ಲಿನ ಪ್ರಯಾಣಿಕರು ಸ್ವಾಗತ ಮಾಡಲಿದ್ದಾರೆ. ರೈಲ್ವೆ ಸಚಿವ ವಿ.ಸೋಮಣ್ಣ ಸಚಿವರಾದ ನಂತರ ಪ್ರಯಾಣಿಕರ ಅನುಕೂಲಕ್ಕೆ ಸಹಕಾರ ನೀಡಿರುವುದನ್ನು ಇಲ್ಲಿನ ಜನ ಹೃದಯ ತುಂಬಿ ಸ್ಮರಿಸುತ್ತಿದ್ದಾರೆ.
ಸೋಮಣ್ಣ ಎರಡು ತಿಂಗಳ ಹಿಂದೆ ವಾಸ್ಕೋ ಎಕ್ಸ್ ಪ್ರೆಸ್ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದ್ದು ರಸ್ತೆ ಅಭಿವೃದ್ಧಿ ಗೆ ಎರಡುವರೆಕೋಟಿ ಅನುದಾನ ನೀಡಿದ್ದಾರೆ.ಇಷ್ಟಕ್ಕೆಲ್ಲಾ ಬಿಜೆಪಿ ಮುಖಂಡ ಸಿ.ರಾಜಪ್ಪ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಬಿ.ಆನಂದಪ್ಪರ ಪ್ರಯತ್ನ ಕೂಡ ಇದೆ.
Express train stops at Shivani railway station
Leave a comment