ಕಡೂರು: ಸಖರಾಯಪಟ್ಟಣದಲ್ಲಿ ಗಣೇಶನ ಕೊಲೆಯಾಗಿ ಒಂದು ವರೆ ತಿಂಗಳಾಯಿತು ಅದರೂ ಗಣೇಶನ ಬಗ್ಗೆ ಹೊಸ,ಹೊಸ ವಿಷಯಗಳು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವುದು ಹಲವು ವಿಚಾರಗಳು ಹರಿದಾಡುತ್ತಿರುವುದು ಏಕೆ ?
ಗಣೇಶನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಇನ್ನೂ ಕೂಡ ತನಿಖೆ ಮುಂದುವರೆದಿದೆ .ಇಪ್ಪತ್ತಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಿ ತನಿಖೆ ಮಾಡಿದ್ದಾರೆ.ಆದರೆ ಕೊಲೆ ಪ್ರಯತ್ನದಡಿ ಕತ್ತೆ ಸಂದೀಪ್ ಮತ್ತಿತರನ್ನು ಬಂಧಿಸದಿರುವುದು ಏಕೆ ?
ಗಣೇಶನ ಹೈ ಪೋನ್ ತೆರೆಯಲು ಗಣೇಶ ತನ್ನ ಕಣ್ಣ ರೆಪ್ಪೆ ಬಳಸುತ್ತಿದ್ದ ಹೀಗಾಗಿ ಹೈ ಪೋನ್ ತೆರೆಯಲು ಎಫ್ಎಸ್,ಎಲ್ ಗೆ ಕಳುಹಿಸಲಾಗಿತ್ತು ಆತನ ಸಂಪೂರ್ಣ ವಿಚಾರ ಪೊಲೀಸರಿಗೆ ತಿಳಿದಿದೆ.ಆದರೆ ಕೊಲೆಗೂ ಮೊಬೈಲ್ ನಲ್ಲಿ ಇರುವ ಮಾಹಿತಿಗೂ ಸಂಬಂಧ ವಿಲ್ಲ ಎಂದು ತಿಳಿದುಬಂದಿದೆ.
ಗಣೇಶನ ಮೊಬೈಲ್ ನಲ್ಲಿ ಹಲವು ಪ್ರತಿಷ್ಠಿತರ ಸೆಕ್ಸ್ ಚಿತ್ರಗಳಿವೆ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಹಲವರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಹಲವರು ಇವನ ಕಿರುಕುಳಕ್ಕೆ ಹೆದರಿದ್ದರು ಜೊತೆಗೆ ಲ್ಯಾಂಡ್ ಡೀಲಿಂಗ್ ನಲ್ಲಿ ಲಕ್ಷಂತರ ರೂಗಳು ಬಂದಿವೆ.ಕೊಲೆಗೆ ಲ್ಯಾಂಡ್ ನ ವ್ಯವಹಾರ ಹಂಚಿಕೆಯ ವ್ಯತ್ಯಾಸ ಕೂಡ ಕಾರಣ ಎಂಬುದು ಪ್ರಮುಖ ಸಂಗತಿ.
ಗಣೇಶನ ಪ್ರತಿಯೊಂದು ವ್ಯವಹಾರ, ಚಲನವಲನಗಳು ವಿಡಿಯೋ ತೆಗೆದಿರುವ ಸಂಪೂರ್ಣ ಮಾಹಿತಿ ಕತ್ತೆ ಸಂದೀಪ್ ಗೆ ಗೊತ್ತಿದೆ ಎಂಬುದು ಬಹಿರಂಗ ಸತ್ಯ. ಕೊಲೆಯಾದ ದಿನ ಕೂಡ ಗಣೇಶನ ಜೊತೆಯಲ್ಲಿ ಇದ್ದ ಸಂದೀಪ್ ನಿಗೆ ಸಣ್ಣ ಪೆಟ್ಟು ಕೂಡ ಬಿದ್ದಿಲ್ಲ ಎಂಬುದು ಹಲವು ಸಂಶಯವನ್ನು ಉಂಟುಮಾಡುತ್ತಿದೆ.ಅಂದು ಊರು ಬಿಟ್ಟವನು ಇಂದಿಗೂ ಊರಿಗೆ ಬಂದಿಲ್ಲ. ಗಣೇಶನ ಹತ್ತಿರ ಹಣ ಮತ್ತು ಬಂಗಾರ ಪಡೆದಿರುವ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.ದೂರಿನಲ್ಲಿ ಪ್ರಥಮ ಆರೋಪಿ ಆದರೂ ಬಂಧನವಾಗಿಲ್ಲ ಎಂದರೆ ಸಂಶಯ ಸಹಜವಾಗಿಯೇ ಬರುತ್ತದೆ.
ಕತ್ತೆ ಸಂದೀಪ್ ತರೀಕೆರೆಯ ನೆಂಟರ ಮನೆಯಲ್ಲಿ ಇರುವ ಗುಮಾನಿ ಇದೆ.ಹೀಗಾಗಿ ಗಣೇಶನ ಮುಗಿಸಲು ಕೈ ಜೋಡಿಸಿರ ಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಈತನಿಂದ ಹಲವು ಮಾಹಿತಿಗಳು ಹೊರಬರುವುದು ಖಚಿತವಾಗಿದ್ದರೂ ಪೊಲೀಸ್ ರ ಮೇಲೆ ಒತ್ತಡ ಇರಬಹುದು ಎಂದು ವಿಶ್ಲೇಷಣೆ ನಡೆಯುತ್ತಿದೆ.
ಗಣೇಶನ ಕೊಲೆ ಮಾಡಿದ ಮೇಲೆ ಸಖರಾಯಪಟ್ಟಣದಲ್ಲಿ ಜನ ಸಂಜೆ ಆರು ಗಂಟೆಗೆ ಮನೆ ಸೇರಿಕೊಳ್ಳುತ್ತಿರುವ ಬಗ್ಗೆ ಹಿರಿಯ ಮುಖಂಡ ಮಂಜುನಾಥ್ ಹಂಚಿಕೊಂಡಿದ್ದಾರೆ.ಇಪ್ಪತ್ತೈದಕ್ಕೂ ಹೆಚ್ಚು ಜನ ಡ್ರಗ್ ದಾಸರಾಗಿದ್ದು ಯಾವಾಗ ಏನೋ ಎಂಬ ಆತಂಕ ಇರುವುದರ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.
“Sex CDs” are giving a “twist” to Ganesh’s murder case!
Leave a comment