ಚಿಕ್ಕಮಗಳೂರು: ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪವನ್ ನಜ್ಜೂರ್ ಅವರ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸಮೃದಿ ಕರುನಾಡು ರಕ್ಷಣಾ ವೇದಿಕೆ ಜಿಲ್ಲಾ ಮುಖಂಡರುಗಳು ನಗರದ ಚಂದ್ರಶೇಖರ್ ಆಜಾದ್‌ವೃತ್ತದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎ.ಮಂಜುನಾಥ್ ಬಳ್ಳಾರಿ ಎಸ್ಪಿ ಅಧಿಕಾರ ವಹಿಸಿ ಕೊಂಡು ಕೇವಲ ೨೪ ಗಂಟೆಯಲ್ಲಿ ದುರ್ಘಟನೆ ನಡೆದಿದೆ. ಈ ಹೊಣೆ ಎಸ್ಪಿಯವರ ತಲೆಗೆ ಕಟ್ಟುವ ಮೂ ಲಕ ರಾಜ್ಯಸರ್ಕಾರ ಅಮಾನತ್ತು ಮಾಡಿರುವುದು ಖಂಡನೀಯ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾ ಎಸ್ಪಿ ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಪೊಲೀಸ್ ಠಾಣೆಗಳ ಬಗ್ಗೆ ಕೆಲವು ಚಟು ವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕನಿಷ್ಟ ಎರಡ್ಮೂರು ತಿಂಗಳು ಅಗತ್ಯ. ಈ ನಡುವೆ ಹೊಸ ವರ್ಷ ದಂದು ನಡೆದ ಘಟನೆಗೆ ರಾಜ್ಯಸರ್ಕಾರ ಎಸ್ಪಿ ಪವನ್ ನಜ್ಜೂರ್ ಅವರನ್ನು ಅಮಾನತಿಸಿ ಪೊಲೀಸ್ ಇಲಾ ಖೆಗೆ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದು ದೂರಿದರು.
ಈಗಾಗಲೇ ಕಳೆದ ಎರಡು ವರ್ಷಗಳಿಂದ ಮಾಧ್ಯಮಗಳಲ್ಲಿ ಕೊಲೆ, ಸುಲಿಗೆ, ಹಲ್ಲೆ, ಕಳ್ಳತನ, ರಾಬರಿ ಪ್ರಕರಣಗಳು ಭಿತ್ತರಗೊಳ್ಳುತ್ತಿದ್ದು ಈ ಬಗ್ಗೆ ಗೃಹ ಇಲಾಖೆ ಮತ್ತು ಮುಖ್ಯಮಂತ್ರಿಗಳು ಘಟನೆಗಳು ಮರು ಕಳುಹಿಸದಂತೆ ಕ್ರಮ ಕೈಗೊಳ್ಳಬೇಕು. ಈ ಘಟನೆಗಳಿಗೆ ಉತ್ತೇಜನ ನೀಡುವುದರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೂಡಲೇ ರಾಜ್ಯಸರ್ಕಾರ ತಪ್ಪಿತಸ್ಥರ ವಿರುದ್ಧ ಸಮಗ್ರ ತನಿಖೆ ನಡೆಸಿ ಆರೋಪಿಗಳ ಮೇಲೆ ಕೈಗೊಳ್ಳ ಬೇಕು. ಅಲ್ಲದೇ ಯಾವುದೇ ತಪ್ಪಿಗೆ ಕಾರಣವಾಗದ ಬಳ್ಳಾರಿ ಎಸ್ಪಿಯ ಆದೇಶವನ್ನು ತಕ್ಷಣವೇ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಳ್ಳಾರಿ ಎಸ್ಪಿ ಅಮಾನತ್ತು ಹಿಂಪಡೆಯಬೇಕು ಎಂದು ಜಿಲ್ಲಾ ಎಸ್ಪಿ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮುಖಂಡರುಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಡಿ.ಓ. ಅಶ್ವಿನ್, ಪ್ರಧಾನ ಕಾರ್ಯದರ್ಶಿ ಜಿ.ಟಿ.ರೇಣುಕಾ, ಕಾರ್ಯದರ್ಶಿ ಜಿ.ಎಲ್.ದರ್ಶನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಿ.ಕೆ.ಶೃತಿ, ಅಜ್ಜಂಪುರ ತಾಲ್ಲೂಕು ಅಧ್ಯಕ್ಷ ಮಧುಸೂದನ್ ಹಾಜರಿದ್ದರು.
Protest demanding the lifting of the suspension order of Bellary SP
Leave a comment