ಮೂಡಿಗೆರೆ: ತಾಲೂಕಿನ ಗೋಣಿಬೀಡು ಸಮೀಪ ರಂಗಸ್ವಾಮಿ ಅವರ ಕಾಫಿ ತೋಟದಲ್ಲಿ ಕಾಫಿ ಕಳ್ಳತನ ಮಾಡಿದ್ದ ೬ ಮಂದಿ ಆರೋಪಿಗಳನ್ನು ಗೋಣಿಬೀಡು ಪೊಲೀಸರು ಬಂಧಿಸಿ, ಸುಮಾರು ೩.೫೦ ಲಕ್ಷ ರೂ ಮೌಲ್ಯದ ಕಾಫಿ ಬೀಜ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ೨ ಕಾರುಗಳನ್ನು ವಶಪಡಿಸಿಕೊಂಡು ಸೋಮವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರಂಗಸ್ವಾಮಿ ಅವರ ತೋಟದಲ್ಲಿ ಕಳೆದ ಮೇ ತಿಂಗಳಲ್ಲಿ ಗೋಡಾನು ಬೀಗ ಮುರಿದು ಸುಮಾರು ೧.೪೦ ಲಕ್ಷ ರೂ ಮೌಲ್ಯದ ೧೦ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ ಮೂಟೆ ಕಳ್ಳತನವಾಗಿತ್ತು. ಅಲ್ಲದೇ ಕಳೆದ ನೆವೆಂಬರ್‌ನಲ್ಲಿ ೨.೮೦ ಲಕ್ಷ ರೂ ಮೌಲ್ಯದ ೧೮ ಮೂಟೆ ಅರೇಬಿಕಾ ಚೆರಿ ಕಾಫಿ ಕಳ್ಳತನವಾಗಿತ್ತು. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಮುಂದುವರೆಸಿದ್ದ ಪೊಲೀಸರು ೬ ಜನ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಕಳ್ಳತನ ಮಾಡಿದ್ದ ತಲಾ ೫೦ ಕೇಜಿಯ ೧೦ ಚೀಲ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ, ತಲಾ ೫೦ ಕೇಜಿಯ ೫ ಚೀಲ ಅರೆಬಿಕಾ ಚೆರಿ ಕಾಫಿ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ ೨ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಡಿವೈಎಸ್‌ಪಿ ಕೆ.ಆರ್.ನಾಗರಾಜ್ ರವರ ನೇತೃತ್ವದ ಪೊಲೀಸ್ ತಂಡದಲ್ಲಿ ಸಿಪಿಐ ಕೆ.ವಿ.ರಾಜಶೇಖರ್, ಗೋಣಿಬೀಡು ಪಿಎಸ್‌ಐ ಎಚ್.ಕೆ.ಹರ್ಷವರ್ಧನ್, ಹೇಮ ಸಿಬ್ಬಂದಿ ರಂಗೇಗೌಡ, ಸುನೀಲ್‌ನಾಯ್ಕ, ವಿ.ಎಸ್.ಸಚಿನ್, ಎಂ.ಸಿ.ಮಂಜುನಾಥ್ ಪಾಲ್ಗೊಂಡಿದ್ದರು.
Coffee theft: Accused arrested – 2 cars seized
Leave a comment