ಚಿಕ್ಕಮಗಳೂರು: ನಗರದ ಜಿ.ಪಂ ಸಮೀಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಕೈಗಾರಿಕಾ ವಸಾಹತು ಹಿಂಭಾಗ-ಜ್ಯೋತಿನಗರ)ಯಲ್ಲಿ ಜನವರಿ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಬಿ.ಇ.,, ಡಿಪ್ಲೊಮೊ, ಪದವಿ, ಪಿ.ಯು.ಸಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಹಾಗೂ ಐ.ಟಿ.ಐ.ನ ವಿವಿಧ ವೃತ್ತಿಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಅಪ್ರೆಂಟಿಶಿಪ್ ಮೇಳದಲ್ಲಿ ತಮ್ಮ ಎಲ್ಲಾ ಮೂಲ ದಾಖಲಾತಿಗಳನ್ನು ಆಧಾರ್ ಸಂಖ್ಯೆ ಮತ್ತು ಇ-ಮೇಲ್ ಐಡಿಯೊಂದಿಗೆ ಹಾಜರಾಗಬಹುದು.
ಈ ಮೇಳದಲ್ಲಿ ವಿವಿಧ ಉದ್ದಿಮೆಗಳು ಪಾಲ್ಗೊಳ್ಳುತ್ತಿದ್ದು, ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳನ್ನು ಅಪ್ರೆಂಟಿಶಿಪ್ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಅಂತೆಯೇ ಜಿಲ್ಲೆಯ ಎಲ್ಲಾ ಉದ್ದಿಮೆಗಳು ಈ ಮೇಳದಲ್ಲಿ ಭಾಗವಹಿಸಿ ತಮ್ಮ ಉದ್ದಿಮೆಯನ್ನು ಅಪ್ರೆಂಟಿಶಿಪ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಲು ಮತ್ತು ಅಪ್ರೆಂಟಿಶಿಪ್ ತರಬೇತಿಗೆ ನೋಂದಣಿ ಮಾಡಿಸಿರುವ ಅಭ್ಯರ್ಥಿಗಳನ್ನು ತಮಗೆ ಅವಶ್ಯಕವಿರುವ ಖಾಲಿ ಸ್ಥಾನಗಳಿಗೆ ಭರ್ತಿಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಅಪ್ರೆಂಟಿಶಿಪ್ ಮೇಳಕ್ಕೆ ಮೇಲೆ ಸೂಚಿಸಿದ ವಿದ್ಯಾರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಹಾಗೂ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9611596629, 9964070245,9480489306 9886028437, 7411869736, 9972594567, 8553651973, 7019174607, 8792139703, ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Prime Minister’s National Apprenticeship Fair at Government ITI today
Leave a comment