Home namma chikmagalur chikamagalur ವಿಕಲಚೇತನ ಮಕ್ಕಳ ಸೇವೆ-ದೇವರ ಸೇವೆಯಂತೆ
chikamagalurHomeLatest Newsnamma chikmagalur

ವಿಕಲಚೇತನ ಮಕ್ಕಳ ಸೇವೆ-ದೇವರ ಸೇವೆಯಂತೆ

Share
Share

ಚಿಕ್ಕಮಗಳೂರು:  ವಿಕಲಚೇತನ ಮಕ್ಕಳ ಸೇವೆ ಮಾಡಿದರೆ ದೇವರ ಸೇವೆ ಮಾಡಿದ ಷ್ಟೇ ಪುಣ್ಯ ಲಭಿಸಲಿದೆ. ಪ್ರಪಂಚದ ಅರಿವಿಲ್ಲದ ಮಕ್ಕಳಿಗೆ ವಸಡಿನ ಸಮಸ್ಯೆ ಕಂಡುಬಂದಲ್ಲಿ ಪರಿಹರಿಸಲು ಸದಾಕಾಲ ಜೊತೆಗಿರುತ್ತೇವೆ ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ದೊಡ್ಡಯ್ಯ ಹೇಳಿದರು.

ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಯುರೇಕಾ ಅಕಾಡೆಮಿ ಮತ್ತು ಆಶ್ರಯ ಪೌಂಡೇ ಷನ್ ವತಿಯಿಂದ ಶನಿವಾರ ಆಯೋಜಿಸಿದ್ಧ ವಿಕಲಚೇತನ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾ ಟಿಸಿ ಅವರು ಮಾತನಾಡಿ ಜಗತ್ತಿನಾದ್ಯಂತ ಅನೇಕ ಮಕ್ಕಳು ಅಂಗಾಂಗಗಳು ಬಲಿಷ್ಟವಾಗಿದ್ದರೂ ಜೀವನದ ಸಾಧನೆಯಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೆ ಆಶಾಕಿರಣ ಮಕ್ಕಳು ಅಂಗಾಂಗಳ ವೈಫಲ್ಯತೆ ನಡುವೆಯು ವಿಶಿಷ್ಟ ಶಕ್ತಿಯಿಂದಲೇ ದೇ ಶ-ವಿದೇಶಗಳಲ್ಲಿ ಮನ್ನಣೆ ಗಳಿಸುವಂಥ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಒಲಂಪಿಕ್ಸ್‌ನಲ್ಲಿ ಆಶಾಕಿರಣ ಶಾಲೆಯ ರಕ್ಷಿತಾರಾಜು ಹಾಗೂ ಶವಾಜ್ ಎಂಬ ದೊಡ್ಡಸಾಹಿತಿ ವಿಶ್ವ ಕಪ್ ಕ್ರಿಕೇಟ್‌ನಲ್ಲಿ ಅವಕಾಶ ಲಭಿಸಿದೆ. ವಿಶೇಷವಾಗಿ ಈ ಸಾಧನೆಯಲ್ಲಿ ಆಶಾಕಿರಣ ಪಾಠಶಾಲೆ ಮಕ್ಕಳ ಕೊ ಡುಗೆ ಬಹಳಷ್ಟಿದೆ. ಹಾಗಾಗಿ ಜಿಲ್ಲೆಯ ಆಶಾಕಿರಣ ಶಾಲೆಯು ಭವ್ಯ ಮಂದಿರ ಎಂದು ತಿಳಿಸಿದರು.

ಮಕ್ಕಳು ಸೇರಿದಂತೆ ದೊಡ್ಡವರಿಗೆ ಹಲ್ಲಿನ ಕಾಳಜಿ ಅತಿಮುಖ್ಯ. ಜೀವನಕ್ಕೆ ಆಹಾರ ಮುಖ್ಯ, ಆಹಾರ ಚೆನ್ನಾಗಿ ಜಗಿಯಲು ಹಲ್ಲುಗಳು ಬಲಿಷ್ಟವಾಗಿರಬೇಕು. ಆಹಾರ ಜೀರ್ಣಕ್ರಿಯೆ ಆರೋಗ್ಯದಿಂದ ಕೂಡಿರಲು ಮನುಷ್ಯನಿಗೆ ಹಲ್ಲು ಕಾರ್ಯ ಬಹಳಷ್ಟಿದೆ. ಹೀಗಾಗಿ ಹಲ್ಲಿನ ಸಮಸ್ಯೆಗಳಿದ್ದಲ್ಲಿ ಶೀಘ್ರವೇ ಬಗೆಹರಿಸಿಕೊಳ್ಳಬೇ ಕು ಎಂದು ಹೇಳಿದರು.

ವಿಶೇಷವಾಗಿ ವಿಕಲಚೇತನ ಮಕ್ಕಳ ದೇವಾಲಯದಲ್ಲಿ ಸಂಪೂರ್ಣ ತಜ್ಞ ವೈದ್ಯರನ್ನು ಕರೆಸಿ ಉಚಿತವಾಗಿ ಮಕ್ಕಳ ಹಲ್ಲಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗಿದೆ. ಮಕ್ಕಳಿಗೆ ಹಲ್ಲುಗಳ ಆರೋಗ್ಯಕ್ಕಾಗಿ ಪೇಸ್ಟ್, ಬ್ರೆಶ್ ಸೇರಿದಂತೆ ಸಲಕರಣೆಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಗಿದೆ ಎಂದರು.

ಖ್ಯಾತ ಮಕ್ಕಳ ತಜ್ಞ ಡಾ|| ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವನ ಶರೀರಿದಲ್ಲಿ ಅನೇಕ ಮೂಳೆಗಳಿವೆ, ಇದರಲ್ಲಿ ಅತ್ಯಂತ ಶಕ್ತಿಯುತ ಹಲ್ಲು ಮೂಳೆ. ಇದಕ್ಕಿಂತ ಗಟ್ಟಿಯಾದ ಮೂಳೆ ದೇಹ ದಲ್ಲಿಲ್ಲ. ಮಕ್ಕಳು ಹಲ್ಲಿನ ಸುರಕ್ಷತೆ ಕಾಪಾಡಲು ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಲಿನ್ಸ್ ಇವೆಂಟ್ಸ್ ಉಪಾಧ್ಯಕ್ಷೆ ಪ್ರಿಯಾಂಕ ಭರತ್ ಮಾತನಾಡಿ ಹಲ್ಲುಗಳು ಸೌಂದರ್ಯ ಮತ್ತು ಆರೋ ಗ್ಯದ ಪ್ರತೀಕ. ಹೀಗಾಗಿ ಹಲ್ಲುಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಎಲ್ಲಾ ಮಕ್ಕಳು ಈ ಉಚಿತ ದಂತ ಚಿಕಿ ತ್ಸಾ ಶಿಬಿರದ ಪ್ರಯೋಜನ ಸಂಪೂರ್ಣವಾಗಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ದಂತ ಚಿಕಿತ್ಸಾ ಶಿಬಿರದಲ್ಲಿ ಸುಮಾರು ೫೦ ಮಕ್ಕಳು ಭಾಗವಹಿಸಿ ತಪಾಸಣೆಗೆ ಒಳಗಾದ ರು. ಕಾರ್ಯಕ್ರಮದಲ್ಲಿ ದಂತ ವೈದ್ಯೆ ಡಾ|| ಭೂಮಿಕಾ ಶೇಖರ್, ಆಶ್ರಯ ಫೌಂಡೇಷನ್ ಅಧ್ಯಕ್ಷೆ ಡಾ|| ವರ್ಷ , ಜಿಲ್ಲಾ ಆರೋಗ್ಯ ಇಲಾಖೆ ವ್ಯವಸ್ಥಾಪಕ ವಿ.ವಿನಯ್, ರಂಗನಿರ್ದೇಶಕಿ ಪ್ರತಿಭಾ ನಂದಕುಮಾರ್, ಪ್ರಭಾರಿ ಮುಖ್ಯೋಪಾಧ್ಯಾಯ ಲಕ್ಷ್ಮೇಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ದಯಾನಂದ್, ನಗರಾಧ್ಯಕ್ಷ ಸಚಿನ್‌ಸಿಂಗ್ ಉಪಸ್ಥಿತರಿದ್ದರು.

Serving disabled children is like serving God.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...