ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ಸಂಭವಿಸಿದ ದುರ್ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ದೇವಾಲಯದ ದರ್ಶನಕ್ಕಾಗಿ ಬಂದಿದ್ದ ದಂಪತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾವತಿ ತಾಲೂಕಿನ ಶಂಕರಪುರ ಗ್ರಾಮದ ವಿಠಲ್ (48) ಹಾಗೂ ಗಂಗಮ್ಮ (40) ಎಂಬ ದಂಪತಿ, ಲಕ್ಕವಳ್ಳಿ ಜಗದಾಂಬಾ ದೇವಾಲಯದ ದರ್ಶನಕ್ಕೆ ಬಂದಿದ್ದರು.
ಆದರೆ ಬಳಿಕ ಇವರಿಬ್ಬರು ಹತ್ತಿರದಲ್ಲೇ ಹರಿಯುವ ನಾಲೆಗೆ ಹಾರಿ ಕಾಣೆಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.
ಘಟನೆಯ ನಂತರ ಗಂಗಮ್ಮ ಅವರ ಮೃತದೇಹ ಪತ್ತೆಯಾಗಿದ್ದು, ವಿಠಲ್ ಅವರ ಮೃತದೇಹಕ್ಕೆ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣ ಕುರಿತು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
Couple suspected of committing suicide by jumping into canal…?
Leave a comment