ತರೀಕೆರೆ: ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದಿಂದ ಹಲವಾರು ವರ್ಷಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಬಯಲ ಜಂಗೀ ಕುಸ್ತಿ ಸ್ಪರ್ಧೆಗಳು ಅಕ್ಟೋಬರ್3,4 ಮತ್ತು 5 ರಂದು ನಡೆಯಲಿವೆ ಎಂದು ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ತಿಳಿಸಿದ್ದಾರೆ.
ಮೈಸೂರು ದಸರಾ ಕುಸ್ತಿ ಸ್ಪರ್ಧೆಯಷ್ಟೆ ಹೆಸರು ತರೀಕೆರೆ ಕುಸ್ತಿ ಸ್ಪರ್ಧೆಗಳಿಗೆ ಇದೆ ಎಂದ ಅವರು ರಾಜ್ಯದ ಮೂಲೆ ಮೂಲೆಗಳಿಂದ ಕುಸ್ತಿ ಪಟುಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ದಾನಿಗಳು ನೀಡುವ ಫಲಕಗಳ ಜೊತೆಗೆ ಬೆಳ್ಳಿ ಗಧೆ ಕುಸ್ತಿ ವಿಶೇಷವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲಾ ಸಮಾಜದವರ ಸಹಕಾರದೊಂದಿಗೆ ಆಯೋಜಿಸುವ ಕುಸ್ತಿ ಸ್ಪರ್ಧೆಗಳು ಯಶಸ್ವಿಯಾಗಿ ನಡೆಸಲು ಮತ್ತು ಕುಸ್ತಿ ಪಟುಗಳನ್ನು ಸತ್ಕಾರ ಮಾಡುವುದಾಗಿ ತಿಳಿಸಿದ್ದಾರೆ.
ಕುಸ್ತಿ ಸಮಿತಿಯ ಗೌರವ ಅಧ್ಯಕ್ಷ ವಗ್ಗಪ್ಪರ ಮಂಜುನಾಥ್ ಸಮಿತಿಯ ಉಪಾಧ್ಯಕ್ಷರುಗಳಾದ ರವಿಕುಮಾರ್, ಪ್ರದಾನ ಕಾರ್ಯದರ್ಶಿ ಟಿ.ಕೆ.ಹರೀಶ್ ಖಜಾಂಚಿ ಸೋಮಶೇಖರ್ ಮತ್ತು ನಿರ್ದೇಶಕರುಗಳಾದ ಟಿ.ಜಿ.ಶಶಾಂಕ್,ಎಸ್.ರವಿಕುಮಾರ್, ಮಧು,ವಗ್ಗಪ್ಪರ ಚಂದ್ರಶೇಖರ್, ಸಲಹೆಗಾರರಾದ ಟಿ.ಆರ್.ಕೃಷ್ಣಮೂರ್ತಿ ಟಿ.ಸಿ.ದರ್ಶನ್ ಚಂದ್ರುಸ್ವಾಮಿ ಸೇರಿದಂತೆ ಹಲವರು ಇದ್ದರು.
State level Dasara wrestling competition in Tarikere
Leave a comment