ಚಿಕ್ಕಮಗಳೂರು:- ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣದ ಹೋರಾಟವನ್ನು ತಪ್ಪಿಸುತ್ತಿರುವ ಇತ್ತೀಚಿನ ಷಡ್ಯಂತ್ರವನ್ನು ಖಂಡಿಸಲಾಗುವುದು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗೀರಸ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಮಂಜುನಾಥಸ್ವಾಮಿ ಮತ್ತು ಅಣ್ಣಪ್ಪಸ್ವಾಮಿಯ ಪಾವಿತ್ರö್ಯದ ಹೆಸರಿನಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ರಕ್ಷಣೆಗೆ ನಿಂತಿರುವುದು ಬ್ರಿಟಿಷರ ವಿರುದ್ಧದ ಸ್ವಾತಂತ್ರö್ಯ ಚಳುವಳಿಯಲ್ಲೂ ಸಹ ಈ ರೀತಿಯ ಒಗ್ಗಟ್ಟು ಕಂಡಿರಲು ಅಸಾಧ್ಯ ಘಟನೆಯಾಗಿದೆ ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣ ವಿರೇಂದ್ರ ಹೆಗಡೆ ಅವರ ಸುತ್ತ ಗಿರಕಿ ಹೊಡೆಯುತ್ತಿದ್ದು, ಶ್ರೀಯುತರು ಧರ್ಮಾಧಿಕಾರಿಯಲ್ಲದೇ ಜವಾಬ್ದಾರಿಯುತ ಜನಪ್ರತಿನಿಧಿಯಾಗಿರುವುದರಿಂದ ತಮ್ಮ ಇದುವರೆಗಿನ ಮೌನ ಮುರಿದು ತಮ್ಮ ಹಾಗೂ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ದ ಪತ್ರಿಕಾಗೋಷ್ಠಿ ಕರೆದು ದೇಶಕ್ಕೆ ತಿಳಿಸುವ ಕೆಲಸ ಮಾಡುವುದರ ಮೂಲಕ ಎದ್ದಿರುವ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಆಗ್ರಹಿಸಿದರು.
ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸುವ ಸರ್ಕಾರಿ ಕೃಪಾಪೋಷಿತ ಎಸ್.ಐ.ಟಿ ರಚನೆಯಾಗಿದ್ದು, ಸಂತ್ರಸ್ಥೆಯ ತಾಯಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮುಂದೆ ತನ್ನ ಸೆರಗೊಡ್ಡಿ ಮಗಳ ಸಾವಿಗೆ ನ್ಯಾಯ ಕೇಳುವಂತಾದರೆ ಮಾತ್ರ ಸತ್ಯಾಂಶ ಹೊರಬಲ್ಲದು. ೩೫ ವರ್ಷಗಳ ಹಿಂದಿನ ಕಾಶ್ಮೀರದ ನರ್ಸ್ ಸರಳಾ ಭಟ್ ಅತ್ಯಾಚಾರ ಕೊಲೆ ಪ್ರಕರಣ ಮರು ತನಿಖೆಗೊಳಪಡುತ್ತದೆಂದಾದರೆ ೧೩ ವರ್ಷದ ಹಿಂದಿನ ಸೌಜನ್ಯ ಪ್ರಕರಣವನ್ನು ಏಕೆ ಮರು ತನಿಖೆಗೆ ಒಳಪಡಿಸಲಾಗುತ್ತಿಲ್ಲ ಎಂಬ ತಾಂತ್ರಿಕ ಅಂಶವನ್ನು ಸೌಜನ್ಯ ಪರ ಹೋರಾಟಗಾರರು ಚಿಂತಿಸಬೇಕು ಎಂದರು.
ಅನ್ಯಾಯದ ವಿರುದ್ಧದ ಹೋರಾಟದಲ್ಲಿ ತಾತ್ವಿಕತೆ ವಾಸ್ತವಿಕತೆಯ ಗಟ್ಟಿತನವಿರಬೇಕೆ ಹೊರತು ಅಲ್ಲಿ ದೇವರು, ಧರ್ಮ ಭ್ರಮೆಗಳಿರಬಾರದು ಹಾಗಾಗಿ ಸೌಜನ್ಯ ಹೋರಾಟಗಾರರ ಒಗ್ಗುಡುವಿಕೆ ಈಗ ಅತಿ ಮುಖ್ಯ. ಬಿಜೆಪಿ. ಕಾಂಗ್ರೆಸ್, ಜೆಡಿಎಸ್ ಎನ್ನದೇ ಇಡೀ ಪ್ರಕರಣದಲ್ಲಿ ಸಂಘ ಪರಿವಾರ ಮತ್ತು ವಿರೇಂದ್ರ ಹೆಗಡೆಯವರ ಕುಟುಂಬವೂ ಸೇರಿ ಸಮಾಜದ ಎದುರು ಎಲ್ಲರೂ ನಗೆಪಾಟಲಿಗೆ ಈಡಾಗುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.
ಬಲಿಪಶುಗಳಾಗುತ್ತಿರುವ ಸಂತೋಷ್ ರಾವ್ ಅವರಂತಹ ಹತ್ತಾರು ಅಮಾಯಕರಿಗೂ ನ್ಯಾಯ ದೊರಕುತ್ತದೆ. ನಮ್ಮ ಸಂಘಟನೆಯು ಸೌಜನ್ಯ ಹೋರಾಟಗಾರರನ್ನು ಪೂರ್ಣ ಬೆಂಬಲಿಸುತ್ತದೆ. ಚಳುವಳಿಗಾರರ ಪ್ರಾಮಾಣಿಕತೆಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ನಾವು ಖಂಡಿಸುತ್ತೇವೆ ಎಂದರು.
The Dharmasthala courtesy case needs a logical conclusion.
Leave a comment