Home namma chikmagalur ರೋಟರಿ ಕಾಫಿ ಲ್ಯಾಂಡ್ ನಿಂದ ಡ್ರೈವ್ ಸೇಫ್ಟಿ-ಪೂನಾ ಡ್ರೈವ್ -2025
namma chikmagalurchikamagalurHomeLatest News

ರೋಟರಿ ಕಾಫಿ ಲ್ಯಾಂಡ್ ನಿಂದ ಡ್ರೈವ್ ಸೇಫ್ಟಿ-ಪೂನಾ ಡ್ರೈವ್ -2025

Share
Share

ಚಿಕ್ಕಮಗಳೂರು: ರೋಟರಿ ಜಿಲ್ಲಾ ಯೋಜನೆಗಳಲ್ಲಿ ಒಂದಾದ ಸುರಕ್ಷಿತಾ ವಾಹನ ಚಾಲನೆಯ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಲು ಡ್ರೈವ್ ಸೇಪ್ಟಿ-ಪೂನಾ ಡ್ರೈವ್ -2025 ಸೆಪ್ಟೆಂಬರ್ ೩ ರಿಂದ ಸೆ.೭ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ರೋ. ನಾಗೇಶ್ ಕೆಂಜಿಗೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಟರಿ ಕಾಫಿ ಲ್ಯಾಂಡ್ ಕ್ಲಬ್ ೨೫ ವರ್ಷðಗಳನ್ನು ಪೂರೈಸಿದ್ದು, ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರೋಟರಿ ರಸ್ತೆ ಸುರಕ್ಷತಾ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುಮಾರು ೨೫೦೦ ಕಿ.ಮೀ ಪೂರ್ಣಗೊಳಿಸಲು ಕ್ಲಬ್‌ನ ೨೫ ಸದಸ್ಯರು ೬ ವಾಹನಗಳಲ್ಲಿ ಸೆ.೩ ರಂದು ಚಿಕ್ಕಮಗಳೂರಿನಿಂದ ಹೊರಟು ಚಿತ್ರದುರ್ಗ, ಹೊಸಪೇಟೆ, ವಿಜಯಪುರ ಮಾರ್ಗವಾಗಿ ಶಿರಡಿ, ಪೂನಾ ತಲುಪಿ ಸತಾರಾ, ಬೆಳಗಾವಿ ಮಾರ್ಗವಾಗಿ ಚಿಕ್ಕಮಗಳೂರನ್ನು ಸೆ.೭ ರಂದು ಸಂಜೆ ತಲುಪಲಿದೆ ಎಂದರು.

ಈ ಮಾರ್ಗದಲ್ಲಿ ಬರುವ ಎಲ್ಲಾ ರೋಟರಿ ಕ್ಲಬ್‌ಗಳ ಜೊತೆ ಯೋಜನೆಯ ಉದ್ದೇಶಗಳನ್ನು ವಿನಿಮಯ ಮಾಡಿಕೊಳ್ಳುವುದು ಅಲ್ಲದೆ ಸಾರ್ವಜನಿಕರಿಗೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಚಾರ ವಿನಿಮಯ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ರೋಟರಿ ಜಿಲ್ಲೆಯ ಮತ್ತೊಂದು ಕಾರ್ಯಕ್ರಮವಾದ ಪರಿಸರ ರಕ್ಷಣೆಯ ಜಾಗೃತಿಗಾಗಿ ವಿವಿಧ ಅರಣ್ಯ ಜಾತಿಯ ಬೀಜಗಳನ್ನು ಸೀಡ್ ಬೀಜಗಳಾಗಿ ಪರಿವರ್ತಿಸಿ, ಸಾರ್ವಜನಿಕರೊಂದಿಗೆ ವಿವಿಧ ರೋಟರಿ ಕ್ಲಬ್ ಸದಸ್ಯರೊಂದಿಗೆ ಆಯಾಕಟ್ಟಿನ ಜಾಗಗಳಲ್ಲಿ ಬಿತ್ತಿರಿಸಲಾಗುವುದು. ಸಾರ್ವಜನಿಕರಿಗೆ ಪರಿಸರ ರಕ್ಷಣೆಯ ಮಹತ್ವವನ್ನು ಕುರಿತು ವಿಚಾರಗೋಷ್ಠಿಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಸೆ.೨ ರಂದು ಸಂಜೆ ೪-೩೦ ಕ್ಕೆ ನಗರದ ಎಂ.ಎಲ್.ವಿ ರೋಟರಿ ಹಾಲ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ವಿಕ್ರಮ ಅಮಟೆ, ಜಿಲ್ಲಾ ರಾಜ್ಯಪಾಲ ಕೆ.ಪಾಲಾಕ್ಷ, ಸಹಾಯಕ ಗೌವರ್ನರ್ ಟಿ.ಎಂ.ಪ್ರವೀಣ್ ನಹರ್, ವಲಯ ಸೇನಾನಿ ಹೆಚ್.ಕೆ.ಮಂಜುನಾಥ್ ಸಮ್ಮುಖದಲ್ಲಿ ಸಾಂಕೇತಿಕವಾಗಿ ಕಡಿಮೆ ದರದಲ್ಲಿ ಹೆಲ್ಮೆಟ್‌ಗಳನ್ನು ಆಜಾದ್ ಪಾರ್ಕ್ನಲ್ಲಿ ವಿತರಿಸುವುದರೊಂದಿಗೆ ಉದ್ಘಾಟಿಸಲಾಗುವುದು ಎಂದರು.

ಸುಮಾರು ೨೫ ವಾಹನಗಳು ನಗರದ ಎಂ.ಎಲ್.ವಿ ರೋಟರಿ ಹಾಲ್‌ನಿಂದ ಪ್ರಾರಂಭಗೊAಡು ಆಜಾದ್ ಪಾರ್ಕ್, ಐ.ಜಿ ರಸ್ತೆ ಮೂಲಕ ಎಂ.ಜಿ ರಸ್ತೆ ಮಾರ್ಗವಾಗಿ ಸಂಚರಿಸಿ ಸಾರ್ವಜನಿಕರಿಗೆ ವಾಹನ ಚಾಲನೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕಾಳಿ ಲ್ಯಾಂಡ್ ಯೋಜನಾ ನಿರ್ದೇಶಕ ಪಿ.ತನೋಜ್ ಕುಮಾರ್, ಡ್ರೆöÊವ್‌ನ ನಿರ್ದೇಶಕ ನಾಸೀರ್ ಹುಸೇನ್, ಕಾರ್ಯದರ್ಶಿ ಎಂ.ಆನAದ್ ಉಪಸ್ಥಿತರಿದ್ದರು.

Drive Safety-Puna Drive-2025 from Rotary Coffee Land

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...