ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್13 ರಂದು ನಡೆಯಲಿದ್ದು ಬಹುತೇಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವ ವಾತಾವರಣ ಇದೆ.ಆದರೆ ಇತರೆ ಸಹಕಾರ ಸಂಘಗಳ ನಿರ್ದೇಶಕ ಸ್ಥಾನ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಹತ್ತು ವರ್ಷಗಳಿಂದ ನಿರ್ದೇಶಕರಾಗಿರುವ ಟಿ.ಎಲ್.ರಮೇಶ್ ಮತ್ತೊಮ್ಮೆ ನಿರ್ದೇಶಕರಾಗಲು ಪ್ರಯತ್ನ ನಡೆಸಿದ್ದಾರೆ.ಆದರೆ ಬಿಜೆಪಿಯಲ್ಲಿ ಅಪಸ್ವರ ಮತ್ತು ಗೊಂದಲ ಇರುವುದು ನೋಡಿದರೆ ರಮೇಶ್ ಗೆ ಕಷ್ಟ ಅದರೆ ರಮೇಶ್ ಎಲ್ಲಾ ಮುಖಂಡರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ.
ರಮೇಶ್, ಲೋಕಪ್ಪಗೌಡ,ಈಶ್ವರಹಳ್ಳಿ ಮಹೇಶ್ ,ಮಂಜುನಾಥ್ ಜೋಷಿ,ಕಡೂರು ರವಿ,ತರೀಕೆರೆ ಶಶಾಂಕ್ ಮತ್ತಿತರರು ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿ ಇದ್ದಾರೆ. ಕ್ಯೂ ನಿಂತಿರುವವರಲ್ಲಿ ಬಹುತೇಕ ಬಿಜೆಪಿಯವರಾಗಿರುವುದು ಮುಖಂಡರಿಗೆ ತಲೆ ಬಿಸಿಯಾಗಿದೆ.ಬಹುತೇಕ ಬಿಜೆಪಿಯವರು ಹೊಸಬರಿಗೆ ಅವಕಾಶ ನೀಡ ಬೇಕು ಅದರಲ್ಲೂ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹೆಚ್ಚು ಸಂಘಗಳು ಇರುವುದರಿಂದ ಚಿಕ್ಕಮಗಳೂರು ಅಭ್ಯರ್ಥಿಗೆ ಅವಕಾಶ ಹೆಚ್ಚಾಗಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಸುವ ನಿರ್ದೇಶಕ ಸ್ಥಾನಕ್ಕೆ ಸೋನಾಲ್ ಮತ್ತು ಕಡೂರು ತಾಲ್ಲೂಕು ಬಿದರೆಯ ಜಗದೀಶ್ ಮಧ್ಯೆ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.ಜಗದೀಶ್ ಮನವೊಲಿಸುವ ಪ್ರಯತ್ನದ ಜೊತೆಗೆ ಒತ್ತಡ ತರುತ್ತಿದ್ದಾರೆ.ಹೆಚ್.ಡಿ.ರೇವಣ್ಣ ಸೂಪರ್ ವೈಜರ್ ಗಳ ಮೂಲಕ ತಂತ್ರಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಜಗದೀಶ್ ಇದಕ್ಕೆ ಬಗ್ಗದೆ ಹಟ ಹಿಡಿದಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ಹಾಲಿ ನಿರ್ದೇಶಕರಾಗಿರುವ ನಿರಂಜನ್ ಮತ್ತು ಸತೀಶ್ ಬದಲಿಗೆ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ಸ್ಪರ್ಧೆ ಮಾಡಿದರೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.ಇದರ ಬಗ್ಗೆ ಸಿ.ಟಿ.ರವಿಯವರ ತೀರ್ಮಾನ ದ ಮೇಲೆ ನಿಂತಿದೆ.ಚುನಾವಣೆ ವಿಚಾರವಾಗಿ ಕಾಂಗ್ರೆಸ್ ಮೌನವಾಗಿರುವುದು ನೋಡಿದರೆ ಅನುಮಾನ ಉಂಟಾಗುತ್ತಿದೆ .
DCC Bank Election Fight for the seats of other cooperative societies
Leave a comment