ತರೀಕೆರೆ: ಕನ್ನಡ ಸಾಹಿತ್ಯ ಪರಿಷತ್ತು ಇಂದು ನಗೆಪಟಾಲಿಗೆ ಸಿಕ್ಕಿದೆ.ಬರೀ ಸಮ್ಮೇಳನ, ಹಾರ,ತುರಾಯಿ ಮತ್ತು ಬೇಕು ಬೇಡದವರಿಗೆ ಜಗಮಗಿಸುವ ಕನ್ನಡ ಕಸ್ತೂರಿ, ಚಿಂತಕ,ಮಂತಕ,ವಾಗ್ಮಿ, ಸಂಘಟನ ಚತುರ,ಮಾತಿನ ಮಲ್ಲಾ,ಸಾಹಿತ್ಯ ಅರಾಧಕ ಎಂಬ ಪ್ರಶಸ್ತಿ ಕೊಟ್ಟು ಡೋಲು ಬಾರಿಸಿದ್ದೆ ಹೆಚ್ಚು. ಅವರನ್ನು, ಇವರು,ಇವರನ್ನು, ಅವರು ಹೊಗಳಿ ಹೊಗಳಿ ಹೊಸ,ಹೊಸ ವೇಷದಲ್ಲಿ ಬರೀ ವಸೂಲಿ ಮಾಡಲು ಅಟ್ಟಕ್ಕೆ ಏರಿಸಿದ ಜಾತ್ರೆ ಕಾರ್ಯಕ್ರಮಗಳನ್ನು ನೋಡಿದ್ದೆ ಹೆಚ್ಚು.
ತರೀಕೆರೆ ತಾಲ್ಲೂಕು ಸಾಹಿತ್ಯ ಪರಿಷತ್ತು ಇದಕ್ಕೆ ಭಿನ್ನವಾಗಿ ಕಾರ್ಯಾಗಾರ ಆಯೋಜನೆ ಮಾಡುತ್ತಿರುವುದನ್ನು ಯಾರಾದರೂ ಮೆಚ್ಚ ಬೇಕು. ಇದೇ ತಿಂಗಳು29 ಮತ್ತು 30 ರಂದು ರಂಗೇನಹಳ್ಳಿಯಲ್ಲಿ ತರೀಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ವಿಚಾರವಂತರನ್ನು ಕರೆಯಿಸಿ ಎರಡು ದಿನಗಳ ಕಾರ್ಯಾಗಾರ ಮಾಡುತ್ತಿರುವುದನ್ನು ಶ್ಲಾಘಿಸ ಬೇಕು.
29 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಕೆ ಕುರಿತು ಪತ್ರಕರ್ತ ಬಿ.ಎಂ.ಹನೀಫ್ ಹಾಗೂ ಶಿಕ್ಷಣ ಮತ್ತು ಸಮಾಜ ಕುರಿತು ಭಾಷ ತಜ್ಞ ಮಲ್ಲಿಕಾರ್ಜುನ ಮೇಟಿ ದಲಿತ ಅಭಿವ್ಯಕ್ತಿ ಹೋರಾಟ ಕುರಿತು ರಂಗ ವಿಜ್ಞಾನಿ ಮತ್ತು ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಉಪನ್ಯಾಸ ನೀಡಲಿದ್ದಾರೆ.ಈ ಕಾರ್ಯಾಗಾರದ ಸಂಪನ್ಮೂಲ ನಿರ್ವಹಣೆಯನ್ನು ತುಂಬಳಿ ರಾಮಯ್ಯ ನಿರ್ವಹಣೆ ಮಾಡಲಿದ್ದಾರೆ.
30 ರಂದು ಕನ್ನಡ ವಿಷಯ ಕುರಿತು ಪ್ರಖ್ಯಾತ ಬರಹಗಾರರು ಚಿಂತಕರಾದ ಪ್ರೊಫೆಸರ್ ತರೀಕೆರೆ ರಹಮತ್ ಉಪನ್ಯಾಸ ನೀಡಲಿದ್ದಾರೆ , ಎಚ್ ಆರ್ ಸ್ವಾಮಿ ಕನ್ನಡ ಪರಂಪರೆಯಲ್ಲಿ ವೈಜ್ಞಾನಿಕ ಮನೋಭಾವದ ವಿಷಯ ಕುರಿತು ಮಾತನಾಡಲಿದ್ದಾರೆ.ಸಾಹಿತ್ಯ ಅಭಿವ್ಯಕ್ತಿಯಲ್ಲಿ ಕನ್ನಡ ಕುರಿತು ಉಪನ್ಯಾಸಕರು ಬರಹಗಾರರಾದ ಸವಿತಾ ಬನ್ನಾಡಿ ಉಪನ್ಯಾಸ ರಂಗ ಭೂಮಿಯಲ್ಲಿ ಕನ್ನಡ ವಿಷಯ ಕುರಿತು ಡಾ. ವೆಂಕಟೇಶ್ವರ ಉಪನ್ಯಾಸ ನೀಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮತ್ತು ಡಾ/ರಾಜಪ್ಪ ದಳವಾಯಿ ಮಾತನಾಡಲಿದ್ದಾರೆ. ಕಾರ್ಯಾಗಾರದಲ್ಲಿ ನಡೆಯುವ ಚಿಂತನ- ಮಂಥನ ದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು ಇಡೀ ಕಾರ್ಯಕ್ರಮ ಮತ್ತಷ್ಟು ಕನ್ನಡದ ಕೆಲಸಕ್ಕೆ ಸಾಕ್ಷಿ ಆಗಲಿದೆ.
ಕನ್ನಡದ ಕೆಲಸಕ್ಕೆ ಕನ್ನಡದ ಮನಸ್ಸುಗಳು ,ವಿದ್ಯಾರ್ಥಿಗಳು, ಸಾಹಿತ್ಯ ಆಸಕ್ತರು ಸ್ಪಂದಿಸುವುದರ ಮೂಲಕ ವಿಶೇಷ ಅಪರೂಪದ ಕಾರ್ಯಾಗಾರ ಯಶಸ್ವಿಯಾಗಲು ಸಹಕರಿಸ ಬೇಕು. ತರೀಕೆರೆ ಕನ್ನಡ ಸಾಹಿತ್ಯ ಪರಿಷತ್ತು ನಡೆ ಕಾರ್ಯಾಗಾರ ಮತ್ತು ವಿಶೇಷ ಅಭಿಯಾನಕ್ಕೆ ಮೆಚ್ಚುಗೆ ಮತ್ತು ಸದಾ ಅಭಿನಂದನೆ ಸಲ್ಲಬೇಕು.
Commendable workshop of Kannada Sahitya Parishat
Leave a comment