ಚಿಕ್ಕಮಗಳೂರು: ಸಹಕಾರಿ ಸಂಘವು ಅವಶ್ಯವಿರುವ ಸಂಘದ ಸದಸ್ಯರಿಗೆ ಸಾಲಸೌಲಭ್ಯ ಪೂರೈಸಲು ಮೊದಲ ಆದ್ಯತೆ ಕೊಡಬೇಕು. ಈ ಹೊರತಾಗಿ ಅವಶ್ಯವಿಲ್ಲದ ಸದಸ್ಯರಿಗೆ ಸಾಲ ನೀಡುವ ಕೆಲ ಸಕ್ಕೆ ಮುಂದಾಗದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಎಂ.ಜಿ.ರಸ್ತೆಯ ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿ ಜೀವನದಲ್ಲಿ ಸಂಕಷ್ಟದ ದಿನವನ್ನು ಕಳೆ ಯುತ್ತಿರುವ ಸದಸ್ಯರಿಗೆ ಸಾಲವನ್ನು ನೀಡಿದರೆ ನಿಗಧಿತ ಸಮಯಕ್ಕೆ ಹಿಂತಿರುಗಿಸುವ ಜವಾಬ್ದಾರಿ ಹೊರುತ್ತಾ ರೆ ಎಂದರು.
ಸಹಕಾರಿ ರಂಗದಲ್ಲಿ ಪರಿಶಿಷ್ಟರು, ಬಡವರು ಹಾಗೂ ಆರ್ಥಿಕ ಹಿಂದುಳಿದ ವರ್ಗಕ್ಕೆ ಸಾಲವನ್ನು ವಿತರಿ ಸುವ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇದನ್ನು ಹೊರತಾಗಿ ಆಡಳಿತ ಮಂಡಳಿಯೇ ಸದಸ್ಯರನ್ನು ಕರೆದು ಸಾಲ ವಿತರಿಸುವ ಪ್ರವೃತ್ತಿ ಬೆಳೆಸಬಾರದು. ಇದೀಗ ಶತಮಾನ ಪೂರೈಸುವ ಸೊಸೈಟಿ ಇನ್ನಷ್ಟು ಹೆಚ್ಚು ಪ್ರಗತಿ ಹೊಂ ದಲಿ ಎಂದು ಆಶಿಸಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಭಾರತೀಯರ ಪವಿತ್ರ ದಿನವಾದ ಶ್ರಾವಣ ಮಾಸದಲ್ಲಿ ಸೊ ಸೈಟಿ ನೂತನ ಕಟ್ಟಡಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿ. ನಗರದ ಹೃದಯ ಭಾಗದಲ್ಲಿ ಶತಮಾ ನ ಪೂರೈಸಿ ಉತ್ತಮ ಪ್ರಶಂಸೆಗೆ ಟೌನ್ ಕೋ ಸೊಸೈಟಿ ಪಾತ್ರರಾಗಲು ಹಿರಿಯರು ಹಾಕಿಕೊಟ್ಟ ಮಾರ್ಗದ ರ್ಶನವೇ ಕಾರಣವಾಗಿದೆ ಎಂದು ತಿಳಿಸಿದರು.
ಈ ಸೊಸೈಟಿಯು ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲಾ ಜನಾಂಗವು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ನಗರದ ಗಾಣಿಗಶೆಟ್ಟರು ಹಿಂದಿನ ಕಾಲದಲ್ಲೇ ಮನೆಗೊಬ್ಬ ಸದಸ್ಯರನ್ನಾಗಿ ಸಿ ಸೊಸೈಟಿಯ ಬೆಳವಣಿಗೆಗೆ ಬಹಳಷ್ಟು ಶ್ರಮಿಸಲು ಸಮಾಜ ಪ್ರಮುಖ ಪಾತ್ರ ವಹಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ೧೧೫ ವರ್ಷಗಳ ಇತಿಹಾಸವಿರುವ ಅತ್ಯಂತ ಹಳೆಯ ಟೌನ್ ಕೋ ಸೊಸೈಟಿಯಾಗಿದೆ. ಈ ಹಿಂದಿನ ಅವಧಿಯಲ್ಲೂ ಸೊಸೈಟಿ ಅಭಿವೃಧ್ದಿಗೆ ಸಾಕಷ್ಟು ನೆರವು ನೀಡಿ ದ್ದು ಮುಂದಿನ ದಿನಗಳಲ್ಲೂ ಸೊಸೈಟಿಯ ಜೊತೆ ಗಟ್ಟಿಯಾಗಿ ನಿಲ್ಲುವುದಾಗಿ ತಿಳಿಸಿದರು.
ಸಹಕಾರ ತತ್ವವು ಪ್ರಕೃತಿಯಲ್ಲಿದೆ. ಆ ಪ್ರಕೃತಿ ತತ್ವವನ್ನು ಮನುಷ್ಯ ಬದುಕಿನಲ್ಲಿ ಅಳವಡಿಸಿಕೊಂಡು ಪರ ಸ್ಪರ ನೆರವಿಗೆ ಧಾವಿಸಬೇಕು. ಅದರಲ್ಲೂ ಕೊರತೆಯಿದ್ದವರು ನೆರವಿಗೆ ಬಂದಲ್ಲಿ ಎಲ್ಲರೂ ಒಟ್ಟಾಗಿ ಇಡೀ ದೇಶವೇ ಒಂದಾಗಿ ಸಾಗುವುದೇ ಸಹಕಾರಿ ತತ್ವದ ಮೂಲ ಧ್ಯೇಯವಾಗಿದೆ ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಪ್ರಸ್ತುತ ಸೊಸೈಟಿಯು ಯಾವುದೇ ನಷ್ಟವಿ ಲ್ಲದೇ ಲಾಭಾಂಶದಲ್ಲಿ ನಡೆದುಕೊಂಡು ಸಾಗುತ್ತಿದೆ. ಇದೀಗ ಎಂ.ಜಿ.ರಸ್ತೆಯ ಅಭಿಮುಖವಾಗಿ ನೂತನ ಕಟ್ಟ ಡವನ್ನು ನಿರ್ಮಿಸಲು ಮುಂದಾಗಿದ್ದು ಇದರಿಂದ ಸಂಘವು ಆರ್ಥಿಕವಾಗಿ ಬೆಳವಣಿಗೆ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಬಿ.ಶೀಲಾ ದಿನೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಸೊಸೈಟಿ ಉಪಾ ಧ್ಯಕ್ಷೆ ಎಂ.ಎಂ.ಹಾಲಮ್ಮ, ನಿರ್ದೇಶಕರುಗಳಾದ ಸಿ.ವಿ.ಕುಮಾರ್, ಎಂ.ಶ್ರೀನಿವಾಸ್, ಸಿ.ಆರ್.ಕೇಶವಮೂರ್ತಿ, ಬಿ.ಎನ್.ರಾಜಣ್ಣಶೆಟ್ಟಿ, ಸಿ.ಆರ್.ಗಂಗಾಧರ್, ಬಿ.ಎಸ್.ಪ್ರಶಂತ್, ಸಿ.ಡಿ.ರಘು, ಎನ್.ಈಶ್ವರಪ್ಪ, ಅಂಬಿಕಾ, ಜ ಯಂತಿ, ಕೆ.ಪಿ.ಪರಮೇಶ್ವರ್ ಮತ್ತಿತರರು ಹಾಜರಿದ್ದರು.
Respond first to members who need credit facilities.
Leave a comment