Home namma chikmagalur ನಯನ ಮೋಟಮ್ಮ ಕೋಮುವಾದಿಗಳ ಜೊತೆ ವೇದಿಕೆ ಹಂಚಿಕೊಂಡಿರುವುದು ಕಾಂಗ್ರೇಸ್ ಪಕ್ಷಕ್ಕೆ ಮುಜುಗರ
namma chikmagalurchikamagalurHomeLatest News

ನಯನ ಮೋಟಮ್ಮ ಕೋಮುವಾದಿಗಳ ಜೊತೆ ವೇದಿಕೆ ಹಂಚಿಕೊಂಡಿರುವುದು ಕಾಂಗ್ರೇಸ್ ಪಕ್ಷಕ್ಕೆ ಮುಜುಗರ

Share
????????????????????????????????????
Share

ಚಿಕ್ಕಮಗಳೂರು: ಜಾತ್ಯಾತೀತ ಸಿದ್ಧಾಂತ ಪ್ರತಿಪಾದಿಸುವ ಕಾಂಗ್ರೇಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ನಯನ ಮೋಟಮ್ಮ ಅವರು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೋಮುವಾದಿಗಳೊಂದಿಗೆ ವೇದಿಕೆ ಹಂಚಿಕೊಂಡು ಕಾಂಗ್ರೇಸ್ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿರುವುದು ಖಂಡನೀಯ ಎಂದು ಕೆ.ಪಿ.ಸಿ.ಸಿ. ವಕ್ತಾರ ಎಚ್.ಎಚ್. ದೇವರಾಜ್ ತಿಳಿಸಿದ್ದಾರೆ.

ಅವರು ಮಾಧ್ಯಮ ಹೇಳಿಕೆ ನೀಡಿ ಈ ವಿಷಯ ತಿಳಿಸಿದ್ದು ಇತ್ತೀಚೆಗೆ ಮೂಡಿಗೆರೆಂi ಅಡ್ಯಂತಾಯ ಬಯಲು ರಂಗ ಮಂದಿರದಲ್ಲಿ ಹಿಂದೂ ಮಹಾಗಣಪತಿ ಉತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಕೋಮು ವಾದಿಗಳಾಗಿ ಅನ್ಯ ಧರ್ಮಗಳ ವಿರುದ ದ್ವೇಷ ಕಾರುವ ಹಾಗೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರಮೋದ್‌ಮುತಾಲಿಕ್ ಮತ್ತು ಸಂಘ ಪರಿವಾರದ ಮುಖಂಡರುಗಳೊಂದಿಗೆ ಸಾರ್ವಜನಿಕವಾಗಿ ವೇದಿಕೆ ಹಂಚಿ ಕೊಂಡಿರುವುದು ಕಾಂಗ್ರೇಸ್ ಸಿದ್ದಾಂತಕ್ಕೆ ವಿರುದ್ಧವಾದ ಆಕ್ಷಮ್ಯ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೇಸ್ ಪಕ್ಷ ಹಿಂದಿನಿಂದಲೂ ಡಾ. ಬಿ.ಆರ್.ಅಂಬೇಡ್ಕರ್ ಅವರು ಹಾಕಿ ಕೊಟ್ಟಿರುವ ಜಾತ್ಯಾತೀಯ ಸಮಾಜವಾದಿ ತತ್ವದಡಿಯಲ್ಲೇ ನಡೆದು ಕೊಂಡು ಬರುತ್ತಿದೆ ಇಂತಹ ಪಕ್ಷದಲ್ಲಿ ಆಯ್ಕೆಯಾಗಿರುವ ನಯನಾ ಮೋಟಮ್ಮ ಅವರು ಈ ರೀತಿ ಕೋಮುವಾದಿಗಳೊಂದಿಗೆ ಸಾರ್ವಜನಿಕವಾಗಿ ವೇದಿಕೆ ಹಂಚಿಕೊಳ್ಳುವುದು ಖಂಡನೀಯ ನಡವಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಅತ್ಯಂತ ಬಡತನದ ದಲಿತ ಕುಟುಂಬದ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬಂದ ನಯನಾ ಮೋಟಮ್ಮ ಅವರ ತಾಯಿ ಶ್ರೀಮತಿ ಮೋಟಮ್ಮನವರು ಶಾಸಕರಾಗಿ, ಸಚಿವರಾಗಿ ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ಉನ್ನತ ಮಟ್ಟದ ಕಾಂಗ್ರೇಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ದೇಶ ಕಂಡ ಮಹಾನ್ ನಾಯಕಿ ಅನೇಕ ಇಂದಿರಾಗಾಂಧಿಯವರಿಗೆ ಅತ್ಯಪ್ತರಾಗಿ ಕಾಂಗ್ರೇಸ್ ಪಕ್ಷದಲ್ಲಿ ಉತ್ತಮ ಹೆಸರು ಪಡೆದಿದ್ದು ಅವರ ಮಗಳಾದ ನಯನಾರವರ ಇಂತಹ ನಡವಳಿಕೆ ಯಿಂದ ಕಾಂಗ್ರೇಸ್ ಪಕ್ಷದ ಗೌರವಕ್ಕೆ ಧಕ್ಕೆ ಬರುವಂತಾಗಿದ್ದು ನಯನಾರವರ ಈ ನಡವಳಿಕೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರ ಗಮನಕ್ಕೆ ತರುವುದಾಗಿ ದೇವರಾಜ್ ಅವರು ತಿಳಿಸಿದ್ದಾರೆ.

ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದ ಅನೇಕ ಮುಖಂಡರುಗಳು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಹಿರಿಯ ಮುಖಂಡರುಗಳು ಆರ್.ಎಸ್.ಎಸ್. ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಸಮರ ಸಾರಿದ್ದಾರೆ ಈ ಮಧ್ಯೆ ನಯನಾ ಮೋಟಮ್ಮನವರು ಕೋಮುವಾದಿಗಳ ಜೊತೆ ಕೈ ಜೋಡಿಸುತ್ತಿರುವುದು ದುರಾದೃಷ್ಟಕರವೆಂದು ವಿಷಾಧ ವ್ಯಕ್ತ ಪಡಿಸಿದ್ದಾರೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅನೇಕ ಪ್ರಗತಿಪರ ಸಂಘಟನೆಗಳು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದವು ಯಾರೂ ಕೂಡ ನಯನಾ ಮೋಟಮ್ಮನವರ ಮುಖ ನೋಡಿ ಮತ ಹಾಕಿಲ್ಲ ಕಾಂಗ್ರೇಸ್ ಪಕ್ಷದ ಜಾತ್ಯಾತೀತ ಸಿದ್ದಾಂತಕ್ಕೆ ಮತ ಹಾಕಿದ್ದಾರೆ ಈಗ ನಯನಾ ಮೋಟಮ್ಮನವರು ಕೋಮುವಾದಿಗಳೊಂದಿಗೆ ಕೈ ಜೋಡಿಸುತ್ತಿರುವುದು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ ಪ್ರಗತಿ ಪರ ಸಂಘಟನೆಗಳು ಮತ್ತು ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಕೋಮುವಾದಿಗಳೊಂದಿಗೆ ವೇದಿಕೆ ಹಂಚಿಕೊಂಡಿ ದ್ದಲ್ಲದೆ ಪಕ್ಷಾಂತರದ ಮಾತುಗಳನ್ನಾಡಿರುವುದು ನಯನಾ ಮೋಟಮ್ಮ ರವರನ್ನು ಬೆಂಬಲಿಸಿದವರು ಪಶ್ಚಾತಾಪ ಪಡುವಂತಾಗಿದೆ ಈ ಬಗ್ಗೆ ನಯನಾ ಮೋಟಮ್ಮನವರು ಬಹಿರಂಗ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ನಗರದ ಗಾಂಧಿ ಪ್ರತಿಮೆ ಎದುರು ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಪ್ರಾಯಶ್ಚಿತ್ತ ಧರಣಿ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Embarrassment for the Congress party

Share

Leave a comment

Leave a Reply

Your email address will not be published. Required fields are marked *

Don't Miss

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಹಲವು...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು...

Related Articles

ವೀರಶೈವ ಲಿಂಗಾಯತ ಸಮಾರಂಭದಲ್ಲಿ “ಕುರ್ಚಿ” ತಿಕ್ಕಾಟ ಹಲವು ಸ್ವಾಮಿಜೀಗಳ ವಿರೋದ

ಚಿಕ್ಕಮಗಳೂರು: ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸ್ವಾಮಿಗಳ ಮಧ್ಯೆ ಕುರ್ಚಿಗಾಗಿ ಪ್ರತಿರೋಧ ಪ್ಯಕ್ತಪಡಿಸಿ ಹೊರ ನಡೆದ ಘಟನೆ...

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ...

ಜು.21ಕ್ಕೆ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ

ಚಿಕ್ಕಮಗಳೂರು : ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧...

ಅಕ್ರಮವಾಗಿ ಸಾಗಿಸುತ್ತಿ ಕಾಡುಜಾತಿಯ ಮರಗಳ ದಿಮ್ಮಿಗಳ ವಶ

ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ...