Home namma chikmagalur ದೇಶ ಸುಭದ್ರಗೊಳಿಸಲು ಯುವಕರು ಯೋಧರಾಗಿ
namma chikmagalurchikamagalurHomeLatest News

ದೇಶ ಸುಭದ್ರಗೊಳಿಸಲು ಯುವಕರು ಯೋಧರಾಗಿ

Share
Share

ಚಿಕ್ಕಮಗಳೂರು:  ಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ವಯಸ್ಸಿನಲ್ಲಿ ವ್ಯಸ ನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು ಸುಭದ್ರಗೊಳಿಸುವ ಯೋಧರಾಗಿ ಕಾರ್ಯನಿರ್ವಹಿಸಬೇಕು ಎಂ ದು ಬಸವನಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕೀರ್ತಿಕುಮಾರ್ ಕರೆ ನೀಡಿದರು.

ನಗರದ ಎಐಟಿ ಕಾಲೇಜಿನ ಸಿವಿಲ್ ಸೆಮಿನಾರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ಧ ೨೬ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಭಾರತಾಂಬೆಯ ಮಣ್ಣಿನ ಋಣ ಹಾಗೂ ತಾಯ್ನಡಿನ ಜೀವಸಂಕುಲವನ್ನು ಕಾಪಾಡುತ್ತಿರುವ ಸೈನಿಕರು ದೇಶದ ಹೆಮ್ಮೆಯ ಪುತ್ರರು. ಹೀಗಾಗಿ ಉತ್ಸಾಹಿ ಯುವಕರು ಜೀವನದಲ್ಲಿ ಸೈನ್ಯರಾಗಿ ಸೇವೆ ಸಲ್ಲಿಸಿದರೆ ಬ ದುಕಿನಲ್ಲಿ ಆತ್ಮಸ್ಥೆರ್ಯ ಹಾಗೂ ಶಿಸ್ತಿನ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ರಾಷ್ಟ್ರದ ಹಿತದೃಷ್ಟಿಯಿಂದ ಸೈನಿಕರು, ರೈತರು, ಪೌರಕಾರ್ಮಿಕರು ತಮ್ಮದೇ ಶೈಲಿಯಲ್ಲಿ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಈ ನಡುವೆ ಹಿಮಪರ್ವತದಲ್ಲಿ ಯಾವುದೇ ಕ್ಷಣದಲ್ಲೂ ಪ್ರಾಣದ ಪಕ್ಷಿ ಹಾರಿ ಹೋಗಲಿ ದೆ ಎಂಬ ಸತ್ಯ ಅರಿತಿದ್ದರೂ ಗಡಿಯಲ್ಲಿನ ಸೈನಿಕರ ಸೇವೆ ಎಲ್ಲರಿಗಿಂತ ಮಿಗಿಲಾದುದು ಎಂದು ಹೇಳಿದರು.

ಭಾರತೀಯರಾದ ನಾವುಗಳು ಯುವಸಮೂಹಕ್ಕೆ ಹೆಚ್ಚೆಚ್ಚು ಯೋಧರನ್ನಾಗಿಸಲು ಪ್ರೋತ್ಸಾಹಿಸಬೇಕು. ದೇಶಪ್ರೇಮವನ್ನು ಆಳವಾಗಿ ಮೈಗೂಡಿಸಿಕೊಳ್ಳಲು ಪಾಲಕರು ಮುಂದಾದರೆ ರಾಷ್ಟ್ರದ ಮಣ್ಣಿನ ಋಣ ತೀರಿ ಸಿದಂತಾಗಲಿದೆ ಎಂದ ಅವರು ಆ ನಿಟ್ಟಿನಲ್ಲಿ ಯುವಕರು ಸೈನಿಕರಾಗುವ ಆಶಯ ವ್ಯಕ್ತಪಡಿಸಬೇಕು ಎಂದರು

ರಾಷ್ಟ್ರದ ಮೇಲೆ ಅಭಿಮಾನ, ಪ್ರೀತಿ ಹಾಗೂ ಸಮಸ್ತ ಭಾರತೀಯರನ್ನು ರಕ್ಷಿಸುತ್ತೇನೆಂಬ ಕಿಚ್ಚಿನಿಂದ ಸೈ ನ್ಯಕ್ಕೆ ಸೇರಬೇಕಿದೆ ಹೊರತು, ಹೊಟ್ಟೆಪಾಡಿಗಲ್ಲ. ಶೃತುದೇಶದ ಎದುರಾಳಿಗಳ ಗುಂಡಿಗೆ ಸೀಳುವಂಥ ಆತ್ಮಸ್ಥೈ ರ್ಯ ತುಂಬಿರಬೇಕು. ಜೊತೆಗೆ ಕಾಶ್ಮೀರದ ಹಿಮಗಣಿವೆಯನ್ನು ಒಗ್ಗಿಸುವಂಥ ಶಾರೀರಿಕ ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸೈನಿಕ ಪ್ರಕಾಶ್‌ಶೆಟ್ಟಿ ಮಾತನಾಡಿ ೧೯೯೯ನೇ ಇಸವಿಯಲ್ಲಿ ಸತತ ಮೂರು ತಿಂಗಳಿನಿಂದ ಹೋ ರಾಡಿದ ಪರಿಣಾಮ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ವಿಜಯ ಸಾಧಿತು. ಈ ನಡುವಿಲ್ಲಿ ಅನೇಕರು ದೇಶಕ್ಕಾಗಿ ಮಡಿದರು, ಬಹುತೇಕರು ಅಂಗಾಂಗಗಳು ವೈಫಲ್ಯತೆ ಉಂಟಾಯಿತು. ಆ ಕಾರ್ಗಿಲ್ ಯುದ್ಧದಲ್ಲಿ ಮಡಿದವರ ನೆನಪಿಗಾಗಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಎಐಟಿ ಕಾಲೇಜು ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ್ ಮಾತನಾಡಿ ಭಾರತದಲ್ಲಿ ಇಂದು ಕೋಟ್ಯಾಂತರ ಕುಟುಂಬಗಳು ಸೌಖ್ಯವಾಗಿ ಬಾಳಲು, ಶುಭ ಸಮಾರಂಭ ಆಚರಣೆ ಹಾಗೂ ಸ್ನೇಹಿತರೊಂದಿಗೆ ಅನೋನ್ಯ ವಾಗಿರಲು ಗಡಿಯಲ್ಲಿನ ಯೋಧರು ಕಾರಣ ಎಂದ ಅವರು ಪ್ರತಿಯೊಬ್ಬ ಪ್ರಜೆಯು ಸೈನಿಕರನ್ನು ಗೌರವಿಸು ವ ಗುಣಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್, ಎಐಬಿಎಂ ಪ್ರಾಂಶು ಪಾಲ ಕೆ.ಎಸ್.ಪ್ರಕಾಶ್‌ರಾವ್, ಉಪಪ್ರಾಂಶುಪಾಲ ಡಾ|| ಪ್ರದೀಪ್ ಜಿ.ದೇಸಾಯಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Youth become warriors to secure the country

Share

Leave a comment

Leave a Reply

Your email address will not be published. Required fields are marked *

Don't Miss

ಅಕ್ರಮ ಮನೆ ಮಂಜೂರು: ಬಿಲ್ ಕಲೆಕ್ಟರ್-ಪಿಡಿಒಗೆ ಒಂದು ವರ್ಷ ಸಜೆ

ಚಿಕ್ಕಮಗಳೂರು: ಅಕ್ರಮವಾಗಿ ತನ್ನ ತಾಯಿಯ ಹೆಸರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಿಕೊಂಡಿದ್ದ ಬಿಲ್ ಕಲೆಕ್ಟರ್ ಹಾಗೂ ಪಿಡಿಒಗೆ ತಲಾ ಒಂದು ವರ್ಷ ಸಜೆ ಹಾಗೂ ೧೫ ಸಾವಿರ ರೂ....

ರೈತ ಸಂಘಟನೆ ದಾರಿ ಬಿಟ್ಟಿತು ? ಎಲ್ಲಿಗೆ ಪಯಣ ಯಾವುದೋ ದಾರಿ !

ಮಾಸದಿರಲಿ ಬದಲಾಯಿಸದಿರಲಿ ರೈತರ ಹೆಗಲ ಮೇಲೇರಿರುವ ಶಾಲಿನ ಹಸಿರು ಬಣ್ಣ. ದೇಶಕ್ಕೆ ಅನ್ನ ಕೊಡುವ ರೈತ ಇಂದಿಗೂ ಖಾಲಿ ಹೊಟ್ಟೆಯ ಬರಿಗೈ ಬಂಟ. ಇದು 45ನೇ ರೈತ ಹುತಾತ್ಮ ದಿನಾಚರಣೆ ಸಂದರ್ಭ....

Related Articles

ಕರ್ತಿಕೆರೆ ಪಂಚಾಯತಿ ಅಕ್ರಮ ವಿರುದ್ಧ ಲೋಕಾಯುಕ್ತಕ್ಕೆ ದೂರು

ಚಿಕ್ಕಮಗಳೂರು:  ಇಲ್ಲಿನ ಕರ್ತಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಅವ್ಯವಹಾರಗಳು ನಡೆದಿರುವುದನ್ನು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ...

ರಸಗೊಬ್ಬರ ದಾಸ್ತಾನು ಮಾಡದ ರೈತ ವಿರೋಧಿ ಸರ್ಕಾರ

ಚಿಕ್ಕಮಗಳೂರು: ರಾಜ್ಯಸರ್ಕಾರ ರೈತರ ಬೇಡಿಕೆಗನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡುವಲ್ಲಿ ವಿಫಲವಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಗೂಬೆ...

ಬಾಳೆಹೊನ್ನೂರಿನ ಪುಂಡಾನೆಗಳ ಸೆರೆಗೆ ಸಚಿವರ ಆದೇಶ

ಚಿಕ್ಕಮಗಳೂರು:  ಹೊಸ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ನೆರೆ ಜಿಲ್ಲೆಯ ಆನೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯ ನೆರವು...

ಭದ್ರಾ ನದಿಯಲ್ಲಿ ಪತ್ತೆ ಚಾಲಕ ಶಮಂತಾ ಮೃತದೇಹ ಪತ್ತೆ

ಕಳಸ: ಜೀಪ್ ಸಮೇತ ಚಾಲಕ ಭದ್ರಾ ನದಿಗೆ ಬಿದ್ದ ಪ್ರಕರಣದಲ್ಲಿ ಕೊಳಮಾಗೆಯಿಂದ ೧ ಕಿ.ಮೀ ದೂರದ...