Home namma chikmagalur ಜಿಲ್ಲೆಯ 91 ಬಾಲಕಿಯರ ಹಾಸ್ಟೆಲ್‌ಗಳಿಗೆ ‘ಆರಕ್ಷಕ ಗೆಳತಿ’ ಭೇಟಿ
namma chikmagalurchikamagalurHomeLatest News

ಜಿಲ್ಲೆಯ 91 ಬಾಲಕಿಯರ ಹಾಸ್ಟೆಲ್‌ಗಳಿಗೆ ‘ಆರಕ್ಷಕ ಗೆಳತಿ’ ಭೇಟಿ

Share
Share

ಚಿಕ್ಕಮಗಳೂರು:  ಜಿಲ್ಲೆಯಲ್ಲಿರುವ 91 ಬಾಲಕಿಯರ ಹಾಸ್ಟೆಲ್‌ಗಳಿಗೆ ಮಹಿಳಾ ಪಿಎಸ್‌ಐಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು ತಿಂಗಳಲ್ಲಿ ಒಂದು ಬಾರಿ ಹಾಸ್ಟೆಲ್ ಗಳಿಗೆ ಭೇಟಿ ನೀಡು ‘ಆರಕ್ಷಕ ಗೆಳತಿ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿರುವ ಬಾಲಿಕಿಯರ ಹಾಸ್ಟೆಲ್‌ಗಳಿಗೆ ಮಹಿಳಾ ಪಿಎಸ್‌ಐ ದರ್ಜೆಯ ನೋಡೆಲ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಅಲ್ಲಿರುವ ಬಾಲಕಿಯರ ,ಅವರ ಪೋಷಕರು , ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರೊಡನೆ ಸಂವಾದ ನಡೆಸುವರು.
ಸಮಸ್ಯೆಗಳನ್ನು ಆಲಿಸಿ ಅವರಲ್ಲಿ ಪೋಕ್ಸೋ, ಚೈಲ್ಡ್ ರೈಟ್ಸ್, ಚೈಲ್ಡ್ ಮ್ಯಾರೇಜ್, ಸೈಬರ್ ಕ್ರೈಮ್ಸ್, ಟ್ರಾಫಿಕ್ ರೂಲ್ಸ್, ಡ್ರಗ್ಸ್ ಇತ್ಯಾದಿ ವಿಷಯಗಳಲ್ಲಿ ಕಾನೂನು ಅರಿವು ಮೂಡಿಸಿ ಮನೋಸ್ಥೆರ್ಯ ಹೆಚ್ಚಿಸಿದ್ದಾರೆ.

ಹಾಸ್ಟೆಲ್‌ಗಳ ಮೆಸ್, ಟೀಚಿಂಗ್ ರೂಂಗಳು, ಆವರಣ, ಕಟ್ಟಡಗಳ ಸ್ಥಿತಿಗತಿ, ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಣೆ ಬಗ್ಗೆ, ಕಾಂಪೌಂಡ್, ಸೆಕ್ಯೂರಿಟಿ ಗಾರ್ಡ್ಸ್ ಎಲ್ಲರನ್ನೂಳಗೊಂಡು ಭದ್ರತಾ ಹಿತ ದೃಷ್ಟಿಯಿಂದ ಪರಿಶೀಲಿಸಿದ್ದಾರೆ. ಊಟ ತಿಂಡಿ ವಿತರಣೆ, ವಸತಿ ಸೌಕರ್ಯ, ಶೌಚಾಲಯಗಳಲ್ಲಿ ಸ್ವಚ್ಛತೆ, ಪೋಲಿ ಹುಡುಗರಿಂದ ಏನಾದರೂ ಕಿರಿಕಿರಿ, ತೊಂದರೆ, ಹಾಸ್ಟೆಲ್ ಅಕ್ಕ ಪಕ್ಕದ ವಾತಾವರಣ, ಮಕ್ಕಳಿಗೆ ಅನಾರೋಗ್ಯದ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ, ಬಾಲಕಿಯರ ಜೊತೆ ಹಾಸ್ಟೆಲ್ ಸಿಬ್ಬಂದಿಯವರ ವರ್ತನೆ -ನಡತೆ ಕುರಿತು ವಿಚಾರಿಸಿದ್ದಾರೆ.

ಹಾಸ್ಟೆಲ್ ಮೇಲ್ವಿಚಾರಕರೊಂದಿಗೆ ಬಾಲಕಿಯರ ರೂಂಗಳನ್ನು ತಪಾಸಣೆ ಮಾಡಿ ಚಾಕುಗಳು, ಕತ್ತರಿಗಳು ಇತರೆ ಕಬ್ಬಿಣದ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು. ವೈದ್ಯರ ಸಲಹೆ ಹೊರತುಪಡಿಸಿ ಬೇರೆ ಯಾವುದಾದರೂ ಔಷದಿ ಮಾತ್ರೆಗಳು. ಸ್ವಂತವಾಗಿ ಕುಕ್ಕಿಂಗ್ ಮಾಡುತ್ತಿದ್ದರೆ. ಹೊರಗಡೆಯಿಂದ ಪಾರ್ಸಲ್‌ಗಳನ್ನು ತರಿಸುತ್ತಿದ್ದರೆ ಪರಿಶೀಲಿಸಿ ಪ್ರಿನ್ಸಿಪಾಲ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ

ಇಆರ್ ಎಸ್ಎಸ್- 112. ಸ್ಥಳೀಯ ಪೊಲೀಸ್ ಠಾಣೆ. ಪಿಎಸ್‌ಐ (ಕಾ&ಸು) ಮತ್ತು ಕಂಟ್ರೋಲ್ ರೂಂ- 9480805100 ಸಂಖ್ಯೆಗಳನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಸಂಬಂಧಪಟ್ಟ ಪ್ರಿನ್ಸಿಪಾಲ್ ರವರಿಗೆ ಪತ್ರ ವ್ಯವಹಾರ ನಡೆಸಿದ್ದಾರೆ.

‘Police girlfriend’ visits 91 girls’ hostels in the district

Share

Leave a comment

Leave a Reply

Your email address will not be published. Required fields are marked *

Don't Miss

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಚಿಕ್ಕಮಗಳೂರು: ರಾಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ ಮಣ್ಣು, ಅದಿರು ಸಾಗಾಣೆ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯೇತರ...

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಪಲ್ಟಿ

ಚಿಕ್ಕಮಗಳೂರು : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆ ಗ್ರಾಮದ ಬಳಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕೂದುವಳ್ಳಿಯ ಲಿಟಲ್...

Related Articles

A.C.F ಕೆ.ಎಸ್.ಮೋಹನ್ ನಿವಾಸದ ಮೇಲೆ ಲೋಕಾಯುಕ್ತಾ ದಾಳಿ

  ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅರಣ್ಯ ಅಧಿಕಾರಿ ಕೆ.ಎಸ್.ನಿವಾಸ ಮತ್ತು ಸಂಭಂದಿಸಿದ ಹಲವು...

ಸಿ.ಟಿ.ರವಿಗೆ ಶೋಷಿತ ವರ್ಗದ ಅಪ್ಪಂದಿರಿಂದ ತಕ್ಕ ಪಾಠ

ಚಿಕ್ಕಮಗಳೂರು : ಆರ್‌ಎಸ್‌ಎಸ್ ನೊಂದಣಿ ಮಾಡಿಸಲು ಅವನಪ್ಪನಿಂದಲೂ ಆಗಲಿಲ್ಲ ಎಂದು ಪ್ರಿಯಾಂಕ ಖರ್ಗೆ ಬಗ್ಗೆ ಹೇಳಿರುವ...

ವಿಳಾಸ ಕೇಳುವ ನೆಪದಲ್ಲಿ ಎಂಟು ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್‌ ಕಳವು

ಚಿಕ್ಕಮಗಳೂರು: ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಬರೋಬ್ಬರಿ ಎಂಟು ಲಕ್ಷ ರೂಪಾಯಿ ಹಣವಿದ್ದ...

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತರಾತುರಿಯಲ್ಲಿ ಮನೆಗೆ ಬೀಗ ಹಾಕದೆ ಹೊರಟ ದಂಪತಿಯ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ...