ಚಿಕ್ಕಮಗಳೂರು: ಐದು ವರ್ಷ ಮುಖ್ಯಮಂತ್ರಿಯಾಗಿ ನಾನೇ ಇರ್ತಿನಿ ಅಂತ ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ನೀವು ಇದ್ದೀ ರೋ ಇಲ್ವೋ, ನಿಮ್ಮ ಪಂಚೆಯನ್ನು ಬೇರೆಯವರು ಎಳೆಯುತ್ತಿದ್ದಾರೋ ಗೊತ್ತಿಲ್ಲ, ಆ ಕೆಲಸ ಮಾಡುತ್ತಿರುವರು ನಿಮ್ಮವರೆ ಹೊರತು ನಾವಲ್ಲ, ಜನರನ್ನು ದಾರಿ ತಪ್ಪಿಸಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾಟಕ ಮಾಡುತ್ತಿದ್ದಾರೆ. ಇವರ ನಾಟಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೃಪಾಪೋಷಿತ ನಾಟಕ ಮಂಡಳಿಯಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಯಾಗಿ ಅವರನ್ನಾದರೂ ಮಾಡಿಕೊಳ್ಳಲಿ, ಇವರನ್ನಾದರೂ ಮಾಡಿಕೊಳ್ಳಲಿ ಮೊದಲು ರಾಜ್ಯದ ಜನಕ್ಕೆ ಒಳ್ಳೆಯದು ಮಾಡಲಿ ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ರಾಜ್ಯ ಸರ್ಕಾರವನ್ನು ಟೀಕಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಒಂದು ಕೆಲಸವಾದರೂ ನೆಪ್ಪು ನೇರಲಾಗಿ ನಡೆಯುತ್ತಿ ದೆಯೇ, ಇದರ ಬಗ್ಗೆ ಯೋಚನೆ ಮಾಡಿ, ಸಿದ್ದರಾಮಯ್ಯ ಸಾಹೇಬ್ರೆ ಕಳೆದೋಗಿದ್ದೀರಾ ಎಂದು ಹೇಳ್ತಿರ್ತಿನಿ, ಇವತ್ತು ಹೇಳ್ತೀನಿ, ನಿಮಗೆ ಯಾರು ತೊಂದರೆ ಮಾಡಿರುವುದು ನಾವ ಎಂದು ಪ್ರಶ್ನಿಸಿದ ಅವರು ನಿಮ್ಮ ಪಕ್ಷದವರೇ, ಮೊದಲು ಮಳೆಯಿಂದ ರಸ್ತೆಗಳೆಲ್ಲ ಗುಂಡಿ ಬಿದ್ದಿವೆ, ಗುಂಡಿ ಮುಚ್ಚಲು ಆಗಿಲ್ಲ, ಮತ್ತೊಂದು ಮಗದೊಂದಿಲ್ಲ, ಅವರ ಬಗ್ಗೆ ನೋಡಿ ಎಂದ ಅವರು ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಕ್ಕಟ್ಟು ಬಿಕ್ಕಟ್ಟು ಏನೂ ಇಲ್ಲ, ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ನನಗೆ ಮೋದಿ ಯವರು ಕೆಲಸ ಕೊಟ್ಟಿದ್ದಾರೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರು ಆದ ಮೇಲೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ದೇಶಕ್ಕಾಗಿ ನಮ್ಮ ನಾಯಕರು ತಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.
ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಸ್ಥಾನದ ಹುದ್ದೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಣ್ಣ ಸಿ.ಟಿ.ರವಿಗೆ ಕೆಲಸ ವಿಲ್ಲ ಮತ್ತೊಂದಿಷ್ಟು ಜಾಸ್ತಿಯಾದರೂ ನಮಗೇನು ತೊಂದರೆ ಇಲ್ಲ. ಅಪ್ಪಾ.. ಒಂದು ನಿಮಿಷನಪ್ಪಾ… ಯಾಕಪ್ಪಾ ಹೀಗೆ ಮಾಡ್ತೀರಾ ತಂದೆ.. ಅವನೇನೋ ನನ್ನ ಜತೆ ಚೆನ್ನಾಗಿದ್ದನೆ. ನಾಳೆಯಿಂದ ಅವನು ಬರದಂತಾಗುತ್ತಾನೆ. ನನ್ನ ಕಿರಿಯ ತಮ್ಮ ಆತ್ಮೀಯತೆಯಿಂದ ಹೋಗಪ್ಪಾ ಬಾರಪ್ಪ ಅಂತೀವಿ. ನಮಗೆ ಪಾರ್ಟಿ ದೊಡ್ಡದು ಪಾರ್ಟಿಗಿಂತ ಪಕ್ಷದೊಡ್ಡದು ಎಂದು ರಾಜ್ಯಾಧ್ಯಕ್ಷದ ಸ್ಥಾನದ ಕುರಿತು ಹೇಳಿದರು.
D.K. Shivakumar-Siddaramaiah drama to mislead people
Leave a comment