ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯಿದೆಯಿಂದ ಬೆಳೆಗಾರರು ಮತ್ತು ರೈತರು ದಯಾ ಮರಣ ಕ್ಕೆ ಪತ್ರ ಬರೆಯುತ್ತಿದ್ದು ಮೂಡಿಗೆರೆಯ ವಿಜಯ್ ಮತ್ತು ಅವರ ಪತ್ನಿ ಪಾರ್ವತಿ ದಯಾ ಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ವಿಜಯ್ ಅವರು 7,39 ಎಕರೆ ತೋಟದ ಮೇಲೆ 29.29 ಲಕ್ಷ ರೂಪಾಯಿ ಸಾಲ ಪಡೆದಿದ್ದು 5 ಲಕ್ಷಕ್ಕೂ ಹೆಚ್ಚಿನ ಹಣ ಮರು ಪಾವತಿ ಮಾಡಿದ್ದಾರೆ. ಆದರೂ ಸಕಾಲದಲ್ಲಿ ಹಣ ಪಾವತಿ ಮಾಡಿಲ್ಲ ಎಂದು ಮೂರು ಕೋಟಿಗೂ ಹೆಚ್ಚು ಬೆಲೆ ಬಾಳುವ ಜಮೀನನ್ನು ಅನ್ ಲೈನ್ ಮೂಲಕ ಕೇವಲ 89.50 ಲಕ್ಷ ರೂಪಾಯಿಗಳಿಗೆ ಹರಾಜು ಹಾಕಲಾಗಿದೆ.ಇದರಿಂದಾಗಿ ದಿಕ್ಕೂ ತೋಚದ ವಿಜಯ್ ಪತ್ನಿ ಜೊತೆಗೆ ದಯಾ ಮರಣ ಕೋರಿದ್ದಾರೆ.ಇದೇ ರೀತಿಯಲ್ಲಿ ಮತ್ತಷ್ಟು ಬೆಳೆಗಾರರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿರುವವರು ದಯಾ ಮರಣ ಕೋರಬಹುದು ಇಲ್ಲ ಆತ್ಮಹತ್ಯೆ ದಾರಿ ಹಿಡಿಯಲು ಬಹುದು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 2700 ಕ್ಕೂ ಹೆಚ್ಚು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಯಾವಾಗ ನಮ್ಮ ಜಮೀನು ಹರಾಜು ಹಾಕುತ್ತಾರೆ ಎಂಬ ಅಂತಕದಲ್ಲಿ ಇದ್ದಾರೆ.ಅನ್ ಲೈನ್ ಹರಾಜು ಮಾಡುವುದರಿಂದ ಈ ವಿಚಾರಗಳು ತಿಳಿಯುವುದಿಲ್ಲ. ಇದರಲ್ಲಿ ಬ್ಯಾಂಕ್ ನ ಖದೀಮರು ಅಲಾಲ್ ಟೋಪಿ ದಲ್ಲಾಳಿಗಳ ಸಂಚು ಇದೆ.
ಸರ್ಫೇಸಿ ಕಾಯ್ದೆಗೆ ಕೇರಳ ಮತ್ತು ತಮಿಳುನಾಡು ಸರ್ಕಾರ ಗಳು ಅವಕಾಶ ಕೊಟ್ಟಿಲ್ಲ ಆದರೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಸರ್ಫೇಸಿ ಕಾಯ್ದೆ ಇದ್ದು ಈಗಾಗಲೇ ಪ್ರತಿಭಟನೆ ಸಹ ಮಾಡಲಾಗಿದೆ.
ಬಣ್ಣ, ಬಣ್ಣದ ಮಾತನಾಡುವ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಕಣ್ಣಿಗೆ ಪೊರೆ ಬಂದಿದೆಯೇ ಅಥವಾ ಕವಿ ಕೇಳದವರಂತೆ ನಟಿಸುತ್ತಿದ್ದಾರೆ ಎಂಬ ಅನುಮಾನ ಬಂದಿದೆ ಅಥವಾ ತಾವು ಕೂಡ ರಿಯಲ್ ಎಸ್ಟೇಟ್ ಧಂದೆಯ ಭಾಗವಾಗಿರುವುದರಿಂದ ಡಬಲ್ ಗೇಮ್ ಮಾಡುತ್ತಿರಲು ಬಹುದು ಹೀಗಾಗಿ ಗಟ್ಟಿಯಾಗಿ ಮಾತನಾಡುತ್ತಿಲ್ಲ.
ಹಣವಂತರು ಬ್ಯಾಂಕ್ ನವರ ಜೊತೆಗೆ ಡೀಲ್ ಮಾಡಿಕೊಂಡು ಕಮೀಷನ್ ಆಸೆಗಾಗಿ ಒಳ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಇದೆ.ಜೊತೆಗೆ ದೊಡ್ಡ ಮೀನು ಸಣ್ಣ ಮೀನುಗಳನ್ನು ತಿನ್ನುವಂತೆ ದೊಡ್ಡ,ದೊಡ್ಡ ಎಸ್ಟೇಟ್ ಕುಳಗಳು ಸುಮ್ಮನೆ ಇರಲು ಬಹುದು.
ದಯಾ ಮರಣದಿಂದ ಸಾಯುವ ಬದಲು ಬ್ಯಾಂಕ್ ಮುಚ್ಚಿಸಿದರು ಆಶ್ಚರ್ಯ ಪಡಬೇಕಾಗಿಲ್ಲ ಅಷ್ಟೊಂದು ಸಿಟ್ಟು ಆಕ್ರೋಶದಲ್ಲಿ ಬೆಳೆಗಾರರು ಇದ್ದಾರೆ.
ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಯವರು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ನವರು ಸರ್ಫೇಸಿ ಕಾಯಿದೆ ರದ್ದು ಮಾಡಲಿ.
Surfaceside Thorn Coffee Growers Letter to Daya Maran
Leave a comment