ಚಿಕ್ಕಮಗಳೂರು : ಚಿಕ್ಕಮಗಳೂರು ನಗರಸಭೆಯ ಮಹತ್ವದ ಬೆಳವಣಿಗೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಜಾತಾ ಶಿವಕುಮಾರ ರಾಜೀನಾಮೆ ನೀಡಿದ್ದಾರೆ.
ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರು ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡದೆ ಪಕ್ಷದಿಂದಲೇ ಉಚ್ಚಾಟನೆಗೊಂಡು ಭಾರೀ ಮುಖಭಂಗ ಅನುಭವಿಸಿದ್ದ ಬಿಜೆಪಿ ಈ ಬಾರಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಜೆಡಿಎಸ್ ಜೊತೆ ಮೈತ್ರಿ ಒಪ್ಪಂದದಂತೆ ಕೊಟ್ಟ ಮಾತಿಗೂ ತಪ್ಪದಂತೆ ಕೇವಲ ಇಬ್ಬರೇ ಸದಸ್ಯರಿರುವ ಜೆಡಿಎಸ್ ಗೆ ಬಿಟ್ಟು ಕೊಡಲು ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ಪ್ರಸ್ತುತ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಮತ್ತೊಮ್ಮೆ ಕುರ್ಚಿಗಾಗಿ ಪೈಪೋಟಿ ಎದುರಾಗುವ ಸಾಧ್ಯತೆ ಇದ್ದು, ಈ ಎಲ್ಲಾ ಬೆಳವಣಿಗೆಗಳನ್ನು ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.
ಬಿಜೆಪಿ ಜೆಡಿಎಸ್ ನಡುವಿನ ಒಪ್ಪಂದ ಮತ್ತು ಅಧಿಕಾರದ ಹೊಂದಾಣಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಮುಂದುವರೆಯುವ ಸಾಧ್ಯತೆ ಇದೆ. ಎರಡು ದಿನ ಹಿಂದಷ್ಟೇ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದು ರಾಜೀನಾಮೆ ಅಂಗೀಕಾರಗೊಳ್ಳಲು ಹತ್ತು ದಿನಗಳ ಕಾಲಾವಕಾಶ ಇದೆ.
ಇದರ ನಡುವೆ ಮತ್ತೆನಾದರು ಬೆಳವಣಿಗೆಗಳು ನಡೆಯಲಿವೆಯೇ ಎಂಬ ಕುತೂಹಲ ಕೂಡ ಪಕ್ಷದ ಸದಸ್ಯರಲ್ಲಿ ಮನೆ ಮಾಡಿದೆ. ಇದರ ನಡುವೆ ಪಕ್ಷೇತರ ನಗರಸಭೆ ಸದಸ್ಯೆ ಶೀಲಾದಿನೇಶ್ ಮುಂದಿನ ಅಧ್ಯಕ್ಷೆ ಎಂದು ಬಿಂಬಿಸಲಾಗುತ್ತಿದ್ದು.
ಇದಕ್ಕೆ ಕಾಂಗ್ರೆಸ್ ಸದಸ್ಯರು ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ರಾಜೀನಾಮೆ ಅಂಗೀಕಾರವಾದ ಬಳಿಕ ಜಿಲ್ಲಾಧಿಕಾರಿಗಳು ಚುನಾವಣೆ ನಿಗದಿ ಪಡಿಸಬೇಕಿದೆ.
Sujatha Shivakumar resigns as Chikkamagaluru Municipal Council President
Leave a comment