Home namma chikmagalur chikamagalur ಎಲ್ಲಾ ವರ್ಗದ ಬಡವರನ್ನು ಸಮಾಜದ ಮುನ್ನಲೆಗೆ ತರಲು ಸರ್ಕಾರ ಬದ್ಧ
chikamagalurHomeLatest Newsnamma chikmagalur

ಎಲ್ಲಾ ವರ್ಗದ ಬಡವರನ್ನು ಸಮಾಜದ ಮುನ್ನಲೆಗೆ ತರಲು ಸರ್ಕಾರ ಬದ್ಧ

Share
Share

ಚಿಕ್ಕಮಗಳೂರು: ಶೋಷಿತ ವರ್ಗದವರು ಸೇರಿದಂತೆ ಎಲ್ಲಾ ಜಾತಿ, ಜನಾಂಗದ ಬಡವರು ಸಮಾಜದ ಮುನ್ನಲೆಗೆ ಬರಬೇಕೆಂಬ ಉದ್ದೇಶದಿಂದ ರಾಜ್ಯಸರ್ಕಾರ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನಗೊಳಿಸಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಅವರು ಇಂದು ಕ್ಷೇತ್ರದ ಹಳೇ ಲಕ್ಯಾ ಗ್ರಾಮದಲ್ಲಿ ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನಲ್ಲಿ ೧.೭೫ ಕೋಟಿ ರೂ. ವೆಚ್ಚದಲ್ಲಿ ಪ್ರತಿ ಫಲಾನುಭವಿಗೆ ೩.೭೫ ಲಕ್ಷ ರೂಗಳಂತೆ ಒಟ್ಟು ೪೭ ಫಲಾನುಭವಿಗಳ ಭೂಮಿಯಲ್ಲಿ ಬೋರ್‌ವೆಲ್ ಕೊರೆಯಲು ಚಾಲನೆ ನೀಡಿ ಮಾತನಾಡಿದರು.

ರಾಜ್ಯಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆಮಾಡಿ ಬೋರ್‌ವೆಲ್ ಕೊರೆಸುವ ಯೋಜನೆಗೆ ಇಂದು ಪ್ರಾರಂಭೋತ್ಸವ ನಡೆಸಲಾಗಿದೆ ಎಂದು ಹೇಳಿದರು.

ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಫಲಾನುಭವಿಗೆ ೨.೫೦ ಲಕ್ಷ ರೂ ನೀಡುತ್ತಿದ್ದು, ಕೊಳವೆ ಬಾವಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿರುವುದರಿಂದ ರಾಜ್ಯಸರ್ಕಾರ ಇದನ್ನು ಮನಗಂಡು ೩.೭೫ ಲಕ್ಷ ರೂಗಳಿಗೆ ಹೆಚ್ಚಿಸಿದೆ ಎಂದು ಶ್ಲಾಘಿಸಿದರು.

ಫಲಾನುಭವಿಗಳು ಗಂಗಾ ಕಲ್ಯಾಣ ಯೋಜನೆಯ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕ ಸದೃಢರಾಗುವ ಜೊತೆಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.

ರಾಜ್ಯಸರ್ಕಾರ ಶಿಕ್ಷಣ, ಆರೋಗ್ಯ, ಬಡವರಿಗೆ ಬದುಕು ಕಟ್ಟಿಕೊಡಲು ಬದ್ಧವಾಗಿದೆ. ಇದಕ್ಕೆ ವಿದ್ಯಾರ್ಥಿ ಪೋಷಕರು ಹೆಚ್ಚು ಒತ್ತುನೀಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಸರ್ಕಾರದ ಯೋಜನೆ ಫಲಪ್ರದವಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಕೇಶ್ ಮಾತನಾಡಿ, ೨೦೨೩-೨೪, ೨೦೨೪-೨೫ ನೇ ಸಾಲಿನಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಒಟ್ಟು ೪೭ ಫಲಾನುಭವಿಗಳನ್ನು ಆಯ್ಕೆಮಾಡಲಾಗಿದ್ದು, ಇಂದು ಶಾಸಕರ ನೇತೃತ್ವದಲ್ಲಿ ಬೋರ್‌ವೆಲ್ ಕೊರೆಸಲು ಚಾಲನೆ ನೀಡಲಾಗಿದೆ ಎಂದರು.

೨೦೨೫-೨೬ನೇ ಸಾಲಿಗೆ ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದ್ದು, ಜೂ.೩೦ ಅಂತಿಮ ದಿನವಾಗಿದ್ದು, ಅಗತ್ಯ ಇರುವ ರೈತರು ಕೂಡಲೇ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಕ್ಯಾ ಗ್ರಾ.ಪಂ ಅಧ್ಯಕ್ಷ ಹನೀಫ್, ಮಾಜಿ ಅಧ್ಯಕ್ಷ ನಾಗಣ್ಣ, ಸಿದ್ದೇಶ್, ಪುಟ್ಟೇಗೌಡ, ಸಂತೋಷ್, ಶಶಿ, ಕಾಂತರಾಜ್, ಕೆಂಗೇಗೌಡ, ಮಧು, ಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

The government is committed to bringing all sections of the poor to the forefront of society.

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...