ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಇದರಿಂದಾಗಿ ರಸ್ತೆಗಳು ಗುಂಡಿಗಳಾಗಿ ಜನ ತಿರುಗಾಡಲು ಕಷ್ಟವಾಗಿದೆ.ರೈತರು ದಿಕ್ಕೆಟ್ಟು ಕುತಿದ್ದಾರೆ ತರಕಾರಿ ಬೆಳೆಗಳು ಕೊಳೆತರೆ ಕಾಫಿ,ಅಡಿಕೆ ತೋಟಗಳು ಕರಗುತ್ತಿವೆ.
ಹಲವಾರು ಮನೆಗಳು ಕುಸಿದು ಜನ ಬೀದಿಯಲ್ಲಿ ಇರುವಂತಹ ಪರಿಸ್ಥಿತಿ ನೋಡಿದರೆ ಎಂತವರು ಆಯ್ಯೋ ಎನ್ನುತ್ತಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನಾಪತ್ತೆಯಾಗಿರುವುದು ಸ್ವತಃ ಕಾಂಗ್ರೆಸ್ ನವರಿಗೆ ಬೇಸರ ತಂದಿದೆ.
ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸೌಜನ್ಯ ತೋರಿಸದ ತುರ್ತಾಗಿ ಮಾಡಬೇಕಾದ ಕಾಮಗಾರಿಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡದೆ ಐಷಾರಾಮಿ ಮಂತ್ರಿ ಜಾರ್ಜ್ ಸಾವಿರಾರು ಎಕರೆ ಕಾಫಿ ತೋಟ ನೋಡಲು ಮತ್ತು ಶ್ರೀಮಂತರ ಮನೆಯ ಮದುವೆಗಳಿಗೆ ಬಂದು ಹೋಗುತ್ತಾರೆ ಎಂದು ಜನ ದೂರುತ್ತಾರೆ.
ಜಿಲ್ಲೆಯ ಯಾವ ಇಲಾಖೆಯ ಮೇಲೂ ಹಿಡಿತ ಸಾಧಿಸದ ಜಾರ್ಜ್ ಕಾಟಚಾರದ ಕೆ.ಡಿ.ಪಿ ಸಭೆ ನೆಡೆಸುವುದು ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬಿಟ್ಟರೆ ಗಂಭೀರ ಸಮಸ್ಯೆಗಳಾದ ಡೀಮ್ಡ್ ಫಾರೆಸ್ಟ್ ನಿಂದ ಜನ ಬೀದಿಗೆ ಬೀಳುವಂತಹ ಸ್ಥಿತಿ ಕಾಡು ಪ್ರಾಣಿಗಳ ಉಪಟಾಳ ಬೇರೆ ಇದರ ಬಗ್ಗೆ ಕನಿಷ್ಟ ಸೌಜನ್ಯಕಾದರು ಸಭೆ ಕರೆಯದ ಸಚಿವ ಜಾರ್ಜ್ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದೆ.
ಯಾವ ವಿಷಯವನ್ನು ಕೇಳಿಸಿಕೊಳ್ಳದ ನೋಡದ ಸಚಿವರು ನಮ್ಮ ಜಿಲ್ಲೆಗೆ ಬೇಕಾ ಎನ್ನುತ್ತಿದ್ದಾರೆ ಜನ.
ಜಿಲ್ಲೆಯ ಶಾಸಕರಿಗೆ ಈ ಬಗ್ಗೆ ಕೇಳಿದರೆ ಒಳ್ಳೆಯ ಮನುಷ್ಯ ಎಂದು ತಿಪ್ಪೇ ಸಾರಿಸುತ್ತಾರೆ.ವಿರೋಧ ಪಕ್ಷಗಳು ಕಾಟಚಾರಕ್ಕೆ ಪತ್ರಿಕಾ ಹೇಳಿಕೆ ನೀಡುವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದು ಒಳ್ಳೆಯದು.
The people of the district are in distress. Is Minister K.J. George missing?
Leave a comment