Home ಕಾಲಾನುಸಾರ ಮಹಿಳೆಯರಿಗೆ ಆರೋಗ್ಯ ತಪಾಸಣೆ ಅಗತ್ಯ
HomechikamagalurLatest Newsnamma chikmagalur

ಕಾಲಾನುಸಾರ ಮಹಿಳೆಯರಿಗೆ ಆರೋಗ್ಯ ತಪಾಸಣೆ ಅಗತ್ಯ

Share
Share

ಚಿಕ್ಕಮಗಳೂರು:  ಮಹಿಳೆಯರು ಶಾರೀರಿಕ ಆರೋಗ್ಯ ಸಮಸ್ಯೆಗಳಲ್ಲಿ ಏರುಪೇರುಗಳು ಕಂ ಡುಬಂದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಪಡಿಸುವುದು ಅತ್ಯಗತ್ಯ ಎಂದು ಹೋ ಲಿಕ್ರಾಸ್ ಆಸ್ಪತ್ರೆ ವೈದ್ಯ ಡಾ|| ಶೀಲಾ ಹೇಳಿದರು.

ನಗರದ ಹೌಸಿಂಗ್ ಬೋರ್ಡ್ ಸಮೀಪದ ಆಶ್ರಯಮನೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಎನ್‌ಐಎಂಎ ಮತ್ತು ಹೋಲಿಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಉಚಿತ ಕಣ್ಣಿನ ಮತ್ತು ಸ್ತ್ರೀರೋಗ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.

ಇತ್ತೀಚೆಗೆ ಹೆಣ್ಣುಮಕ್ಕಳಲ್ಲಿ ಮುಟ್ಟು, ಗರ್ಭಕೋಶ, ಸ್ತನಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್, ಬಂಜೆತನ ಕಾಡು ತ್ತಿವೆ. ಈ ಕಾಯಿಲೆಗಳನ್ನು ಸಮತಟ್ಟಾಗಿರಿಸಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಅನುಸರಿಸು ವುದು ಮುಖ್ಯವಾಗಿದ್ದು ಮಹಿಳೆಯರು ಪಾಲಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ದೈನಂದಿನ ಆಹಾರ ಪದ್ಧತಿಯಲ್ಲಿ ಉಪ್ಪು, ಕಾರ ನಿಯಮಿತ, ದಿನದ ಒಂದು ತಾಸು ವ್ಯಾಯಾಮಕ್ಕಾಗಿ ಮುಡಿಪಿಟ್ಟು ಬದುಕಿನ ಒಂದು ಭಾಗವಾಗಿಸಬೇಕು. ಪೌಷ್ಠಿಕಾಂಶಯುಳ್ಳ ಆಹಾರ ಸೇವನೆ, ಆಯಾ ಕಾಲಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವಿಸಬೇಕು ಎಂದ ಅವರು ಸ್ತ್ರೀರೋಗ ಬಳಲುವವರು ಇಷ್ಟೆಲ್ಲಾ ಅಂಶಗಳನ್ನು ಅಳ ವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ|| ಅನೀತ್‌ಕುಮಾರ್ ಮಾತನಾಡಿ ಶರೀರದ ಅತ್ಯಂತ ಸೂಕ್ಷ್ಮ ಅ ಂಗ ಕಣ್ಣನ್ನು ಕಾಲಾನುಸಾರ ತಪಾಸಣೆಗೊಳಿಸಬೇಕು. ಹೆಚ್ಚಿನ ಮಟ್ಟದಲ್ಲಿ ವೃದ್ದಾಪ್ಯದಲ್ಲಿ ಕಣ್ಣಿನ ಸಮಸ್ಯೆ ಕಾ ಡುತ್ತಿರುವ ಹಿನ್ನೆಲೆ ನಿರ್ಲಕ್ಷ್ಯವಹಿಸದೇ ಅಲ್ಲಲ್ಲಿ ನಡೆಯುವ ಉಚಿತ ಶಿಬಿರಗಳಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಗಾಗಬೇಕು ಎಂದರು.

ಮಾನವ ಅಂಗಾಂಗಳಲ್ಲಿ ಕಣ್ಣು ಮಾತ್ರ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರಕೃತಿಯ ಸಿರಿಸಂಪತ್ತನ್ನು ಕ ಣ್ತುಂಬಿಕೊಳ್ಳುವ ದೃಷ್ಟಿಯನ್ನು ರಕ್ಷಿಸುವ ಕಾರ್ಯದಲ್ಲಿ ಮನುಷ್ಯ ತಾನಾಗಿಯೇ ಜವಾಬ್ದಾರಿ ಹೊರದಿದ್ದಲ್ಲಿ ಶಾಶ್ವತವಾಗಿ ಅಂಧತ್ವಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಇದೇ ವೇಳೆ ೫೦ಕ್ಕೂ ಹೆಚ್ಚು ಮಹಿಳೆಯರು ತಪಾಸಣೆಗೊಳಗಾದರು. ಕಣ್ಣಿನ ತಪಾಸಣೆಯಲ್ಲಿ ೫೫ ಮಂ ದಿ ತಪಾಸಣೆ ನಡೆಸಿ ಈ ಪೈಕಿ ಆರು ಮಂದಿಗೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆಗೆ ನೋಂದಣಿ ಮಾಡಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನೇತ್ರಾಧಿಕಾರಿ ವಿನಯ್, ಹೋಲಿಕ್ರಾಸ್ ಆಸ್ಪತ್ರೆ ಮಾರ್ಕೇಂಟಿಗ್ ಮ್ಯಾನೇಜರ್ ಗರ್ವಿನ್, ಸ್ಥಳೀಯರಾದ ಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.

Women need periodic health check-ups

Share

Leave a comment

Leave a Reply

Your email address will not be published. Required fields are marked *

Don't Miss

ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರ ನಿದ್ದೆಗೆಡಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಭಾನುವಾರ ಬೆಳಿಗ್ಗೆ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಭೀಕರವಾಗಿ ಕೊಂದ...

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ನಗರದ ಪುನೀತ್‌...

Related Articles

ಖಂಡ್ರೆ ಸಭೆಯಿಂದ ಕಾಡು ಪ್ರಾಣಿಗಳ “ಅನಾಹುತ” ನಿಲ್ಲಿಸಲು ಸಾಧ್ಯವೇ ?

ಅರಣ್ಯ ಸಚಿವ ಖಂಡ್ರೆ(ಕಂಡರೆ) ಆನೆ,ಹುಲಿ.ಸಿಂಹ,ಇಲಿ,ಪಲ್ಲಿಗಳು ನಡುಗುತ್ತವೆ ಎಂಬ ಭ್ರಮೆ ಯಲ್ಲಿ ಬಾಳೆ ಹೊನ್ನೂರಲ್ಲಿ ರೈತರು,ಬೆಳೆಗಾರರು ಮತ್ತು...

ಭೀಕರ ಕೊಲೆ ಆರೋಪಿಗೆ ಜೈಲು ಶಿಕ್ಷೆ-ದಂಡ

ಮೂಡಿಗೆರೆ: ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಆರೋಪಿಗೆ ಚಿಕ್ಕಮಗಳೂರಿನ ಜಿಲ್ಲಾ ಮತ್ತು...

ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಎಸ್.ಎಲ್.ಭೋಜೇಗೌಡ

ಚಿಕ್ಕಮಗಳೂರು: ದುಬೈ ವಿಮಾನ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಿಲುಕಿದ್ದಾರೆ. ದುಬೈ ವಿಮಾನ ನಿಲ್ದಾಣದಿಂದ...

ಬಾಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲಿ ಅರಣ್ಯ ಸಚಿವರ ಭಾಷಣಕ್ಕೆ ಅಡ್ಡಿ

ಎನ್.ಆರ್ ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ...