ಚಿಕ್ಕಮಗಳೂರು: ಆಸ್ಪತ್ರೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರುಗಳಾದ ಶಶಿಧರ ಕೋಸಂಬೆ ಹಾಗೂ ಡಾ.ತಿಪ್ಪೆಸ್ವಾಮಿ ಕೆ.ಟಿ. ನೇತ್ರತ್ವದ ತಂಡ ಅಪೌಷ್ಟಿಕ ಮಕ್ಕಳ ಪುನಃಶ್ಚೇತನ ಘಟಕ, ವಿಶೇಷ ನವಜಾತ ಶಿಶುಗಳ ಆರೈಕೆ ಘಟಕ ಕಾಂಗರೂ ಮದರ ಕೇರ್,ಮಕ್ಕಳ ವಾರ್ಡ್, ಹೆರಿಗೆ ವಾರ್ಡ್, ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 45 ಇದ್ದಾರೆ. ಮತ್ತೆ ಹತ್ತು ಹಾಸಿಗೆಯ ಸಾಮರ್ಥ್ಯವುಳ್ಳ ಅಪೌಷ್ಟಿಕ ಮಕ್ಕಳ ಪುನಃಶ್ಚೇತನ ಆರೈಕೆ ಘಟಕದ ಇದೆ. ಆದರೆ ಬರೀ ಒಂದು ಮಗು ಮಾತ್ರ ದಾಖಲಾಗಿತ್ತು, ಅದು ಸಹ ಹೋರ ರೋಗಿ ವಿಭಾಗಕ್ಕೆ ಬಂದ ಮಗು ಇದನ್ನು ಕಂಡ ಆಯೋಗ ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದವರು ಎನು ಮಾಡ್ತಾ ಇದ್ದಾರೆ ಎಂದು ಸ್ಥಳದಲ್ಲಿದ್ದ ಡಿಹೆಚ್ಚ್ಓ ಪ್ರಶ್ನಿಸುವ ಅಸಮಾಧಾನ ವ್ಯಕ್ತಪಡಿಸಿ, ಅಡುಗೆ ಮನೆ ಪ್ರವೇಶಿಸಿದ ಸದಸ್ಯರು ಅಲ್ಲಿನ ಅವ್ಯವಸ್ಥೆಯ ನೋಡಿ ದಂಗಾದರು.ಮಕ್ಕಳ ಆರೈಕೆ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ವಿಶೇಷ ನವಜಾತ ಶಿಶುಗಳ ಆರೈಕೆ ಘಟಕ ಭೇಟಿ ನೀಡಿ, ಇನ್ ಬರ್ನ ನವಜಾತ ಶಿಶುಗಳಿಗೆ ಮಾತ್ರ ಉತ್ತಮವಾಗಿ ಆರೈಕೆ ಮಾಡುತ್ತಿರುವ ವೈದ್ಯರು ಔಟ್ ಬರ್ನ ನವಜಾತ ಶಿಶುಗಳಿಗೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡುತ್ತಿರುವ ಕ್ರಮವನ್ನು ಕಂಡು ಗರಂ ಆದ ಸದಸ್ಯರು ಯಾಕೆ ರೀತಿಯ ತಾರತಮ್ಯ ಇದು ಸರಿಯಾದ ಕ್ರಮವಲ್ಲ ಈ ಭೂಮಿಯ ಮೇಲೆ ಜನಿಸುವ ಪ್ರತಿಯೊಂದು ಮಗುವಿನ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು, ಹೀಗಾಗಿ ಇದನ್ನು ಕೂಡಲೇ ಸರಿಪಡಿಸಿ ಎಂದು ಡಿಎಸ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಕಾಂಗರೂ ಮದರ ಕೇರ್ ಗೆ ಎಂಟ್ರಿ ಕೊಟ್ಟ ಆಯೋಗ ಅಲ್ಲಿ ರಿವೈಂಡಿಗ್ ಕಾಟ್ ಗಳು ಇಲ್ಲಿದಿರುವನ್ನು ಕಂಡು ಒಂದು ವಾರದಲ್ಲಿ ರಿವೈಂಡಿಗ್ ಕಾಟ್ ಗಳ ವ್ಯವಸ್ಥೆ ಮಾಡಿ, ಆಯೋಗಕ್ಕೆ ವರದಿ ನೀಡಲು ಸೂಚನೆ ನೀಡಿ ನಂತರ ಸುಖಿ ಒನ್ ಸ್ಟಾಪ್ ಸೆಂಟರ್ ಗೆ ಗಮನಿಸಿ, ಸಂಕಷ್ಟದಲ್ಲಿ ಬಂದಂತಹ ಮಕ್ಕಳಿಗೆ ಸಕಾಲದಲ್ಲಿ ಸೇವೆ ಒದಗಿಸುವಂತೆ ಸಲಹೆ ನೀಡಿದರು.
ಸ್ಕ್ಯಾನಿಂಗ್ ಸೆಂಟರ್ ಭೇಟಿ: ಲಕ್ಷ್ಮಿ ನರ್ಸಿಂಗ್ ಹೋಂ ಮತ್ತು ಪ್ರಶಾಂತಿ ನರ್ಸಿಂಗ್ ಹೋಂ ಗಳ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ ಆಯೋಗ ಪರಿಶೀಲನೆ ನಡೆಸಿದ ಆಯೋಗ ಪಿಸಿಪಿಎನ್ಡಿಟಿ ಕಾಯ್ದೆ ಪ್ರಕಾರ ಸ್ಕ್ಯಾನಿಂಗ್ ಸೆಂಟರ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ, ಆದರೆ ನೋಡಲ್ ಅಧಿಕಾರಿ ಇದೆಲ್ಲ ಗಮನಿಸಿದೆ ಇರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ, ಡಿಎಚ್ಒ, ಜಿಲ್ಲಾ ಸರ್ಜನ್ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗು ಹಾಜರಿದ್ದರು
A team of commission members made a surprise visit to the district hospital.
Leave a comment