Home Latest News ಹೈಕೋರ್ಟ್ V/S ಸುಪ್ರೀಂ ಕೋರ್ಟ್ ವಿಧಾನ ಪರಿಷತ್ ನ ತಕರಾರು !
Latest NewschikamagalurHomenamma chikmagalur

ಹೈಕೋರ್ಟ್ V/S ಸುಪ್ರೀಂ ಕೋರ್ಟ್ ವಿಧಾನ ಪರಿಷತ್ ನ ತಕರಾರು !

Share
Share

ವಿಧಾನ ಪರಿಷತ್ ನ ಸದಸ್ಯ ಪ್ರಾಣೇಶ್ ರವರ ಅಯ್ಕೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಪ್ರಾಣೇಶ್ ಮನೆಗೆ ವಿಧಾನಸೌಧಕ್ಕೆ ಗಾಯಿತ್ರಕ್ಕ ಎಂದು ಘೋಷಣೆ ಮೊಳಗಿತು ಪಟಾಕಿ ಸದ್ದು ಗುಡುಗಿತು ಆದರೆ ಮೂರು ತಿಂಗಳಿಂದ ಮೌನಚಾರಣೆಯೇ ಬಾಕಿ ಎನ್ನುವಂತಾಗಿದೆ.

ಹೈಕೋರ್ಟ್ ನ ಆದೇಶದಲ್ಲಿ ಮರು ಎಣಿಕೆ ನಡೆದು ಫಲಿತಾಂಶ ಗೌಪ್ಯವಾಗಿ ಇಡಲಾಗಿದೆ.ಆದರೆ ಎಣಿಕೆಗೆ ಹೋದ ಎರಡು ಪಕ್ಷದವರು ಕಿವಿಯಲ್ಲಿ ಪಿಸುಗುಟ್ಟಿದ್ದು ಪಟಾಕಿ ಸೌಂಡ್‌ ಗೆ ಗಾಯಿತ್ರಿ ಗೆದ್ದಾಯಿತು ಎಂಬುದು ಎಲ್ಲರಿಗೂ ತಿಳಿದು ಹೋಯಿತು.

ಕಮ್ಯುನಿಸ್ಟ್ ಮುಖಂಡರು ಕಾಂಗ್ರೆಸ್ ನ ಅನಧಿಕೃತ ವಕ್ತಾರರಾದ ರೇಣುಕ ಅರಾಧ್ಯರು ಮಾತ್ರ ಒಂದು ವಾರಗಳ ಕಾಲ ಮನೆ,ಮನೆಗೆ ಹೋಗಿ ಕಾಂಗ್ರೆಸ್ ಗೆದ್ದಾಯಿತು ಬಿಜೆಪಿ ಸೋತಾಯಿತು ಎಂದು ಹೊಸ ಗೆಟಪ್ನಲ್ಲಿ ಓಡಾಡಿದ್ದು ಬಾಕಿ ಆಯಿತು.

ಹೈಕೋರ್ಟ್ ತನಿಖೆ ಮಾಡುವಾಗಲೇ ಪ್ರಾಣೇಶ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು ಸುಪ್ರೀಂ ಕೋರ್ಟ್ ಹೈಕೋರ್ಟ್ ನಲ್ಲಿ ತನಿಖೆ ನಡೆಯಲಿ ನೋಡುವ ಎಂಬ ಸೂಚನೆ ನೀಡಿತ್ತು.ಇದರಿಂದಾಗಿ ಸುಪ್ರೀಂ ಅಂಗಳ ತಲುಪಿದ ಹೈಕೋರ್ಟ್ ಆದೇಶಕ್ಕೆ ಈಗ ಬರೀ ಡೆಟ್ ನೀಡುತ್ತಿರುವುದು ನೋಡಿದರೆ ಸದ್ಯಕ್ಕೆ ಆದೇಶ ಬರುವ ನಿರೀಕ್ಷೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ನವರು ಗೊಣಗುತ್ತಿದ್ದಾರೆ.

ಬಿಜೆಪಿಯವರು ಕೋರ್ಟ್ ಇದೆ ಸಾರ್ ಎನ್ನುತ್ತಿದ್ದಾರೆ.ಎರಡು ಕಡೆ ಘಾಟಾನುಘಟಿ ವಕೀಲರನ್ನುಇಟ್ಟುಕೊಂಡಿರುವುದು ಮೂಗಿಗಿಂತ ಮೂಗುತಿ ಬಲು ಭಾರ ಎನ್ನುತ್ತಿದ್ದಾರೆ.ಕುಣಿದು ಕುಪ್ಪಳಿಸಿದವರು ಮುಖ ಇಳೆಬಿಟ್ಟರೆ ಕೋರ್ಟ್ಗೆ ಹೋಗಿಬರುತ್ತಿರುವವರ ಕಾಲುನೋವಿನ ಜೊತೆಗೆ ಜೇಬು ಕಿತ್ತೇಸೆಯುತ್ತಿದ್ದಾರೆ ಎಂದು ಜನ ನಗುತ್ತಿದ್ದಾರೆ.

Dispute of High Court V/S Supreme Court Vidhan Parishad!

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ವಿದ್ಯುತ್ ದೀಪಗಳಿಗೆ ಚಾಲನೆ

ಚಿಕ್ಕಮಗಳೂರು: ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳನ್ನು ಸುಮಾರು ೧೨.೫ ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ಕ್ರಮ ವಹಿಸುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು. ಅವರು ೧೫ನೇ ಹಣಕಾಸು...

ಅಕ್ರಮ ಮನೆ ಮಂಜೂರು: ಬಿಲ್ ಕಲೆಕ್ಟರ್-ಪಿಡಿಒಗೆ ಒಂದು ವರ್ಷ ಸಜೆ

ಚಿಕ್ಕಮಗಳೂರು: ಅಕ್ರಮವಾಗಿ ತನ್ನ ತಾಯಿಯ ಹೆಸರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಿಕೊಂಡಿದ್ದ ಬಿಲ್ ಕಲೆಕ್ಟರ್ ಹಾಗೂ ಪಿಡಿಒಗೆ ತಲಾ ಒಂದು ವರ್ಷ ಸಜೆ ಹಾಗೂ ೧೫ ಸಾವಿರ ರೂ....

Related Articles

ಡಿ.ಡಿ.ಪಿ.ಐ.ಕಡ್ಡಾಯ ರಜೆ ಏಕೆ ಇಲ್ಲ ? ಒತ್ತಡಕ್ಕೆ ಮಣಿದರಾ ವ್ಯವಹಾರವೋ ?

ಸರ್ಕಾರಿ ಆದೇಶಕ್ಕೆ ಬೆಲೆ ಇಲ್ಲವೇ….? ಚಿಕ್ಕಮಗಳೂರು: ಜಿಲ್ಲಾ ಶಿಕ್ಷಣ ಅಧಿಕಾರಿ ಜಿ.ಕೆ.ಪುಟ್ಟರಾಜು ಕಡ್ಡಾಯ ರಜೆ ಮೇಲೆ...

ಕರ್ತಿಕೆರೆ ಪಂಚಾಯತಿ ಅಕ್ರಮ ವಿರುದ್ಧ ಲೋಕಾಯುಕ್ತಕ್ಕೆ ದೂರು

ಚಿಕ್ಕಮಗಳೂರು:  ಇಲ್ಲಿನ ಕರ್ತಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಅವ್ಯವಹಾರಗಳು ನಡೆದಿರುವುದನ್ನು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ...

ರಸಗೊಬ್ಬರ ದಾಸ್ತಾನು ಮಾಡದ ರೈತ ವಿರೋಧಿ ಸರ್ಕಾರ

ಚಿಕ್ಕಮಗಳೂರು: ರಾಜ್ಯಸರ್ಕಾರ ರೈತರ ಬೇಡಿಕೆಗನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡುವಲ್ಲಿ ವಿಫಲವಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಗೂಬೆ...

ಬಾಳೆಹೊನ್ನೂರಿನ ಪುಂಡಾನೆಗಳ ಸೆರೆಗೆ ಸಚಿವರ ಆದೇಶ

ಚಿಕ್ಕಮಗಳೂರು:  ಹೊಸ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ನೆರೆ ಜಿಲ್ಲೆಯ ಆನೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯ ನೆರವು...