ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೇರಳ ಪ್ರವಾಸಕ್ಕೆ ತೆರಳಿದ ಚಿಕ್ಕಮಗಳೂರಿನ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಮಾಗಡಿ ಗ್ರಾಮದ ದರ್ಶನ್ (24) ಮೃತ ದುರ್ದೈವಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ದರ್ಶನ್ ನಾಲ್ವರು ಸ್ನೇಹಿತರೊಂದಿಗೆ ಕೇರಳ ಪ್ರವಾಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ.
ದರ್ಶನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ವಿಚಾರವನ್ನು ಕೇರಳ ಪೊಲೀಸರು ನಿನ್ನೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರು ದುಃಖದ ಮಡುವಿನಲ್ಲೇ ಕೇರಳಕ್ಕೆ ತೆರಳಿದ್ದಾರೆ.
Youth from Chikkamagaluru dies after drowning in Kerala
Leave a comment