ತರೀಕೆರೆ : ಕ್ಷೇತ್ರದ ನೋವು-ನಲಿವುಗಳನ್ನು ಅರ್ಥಮಾಡಿಕೊಂಡು ಎಲ್ಲಾ ವರ್ಗದವರ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿರುವ ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಅವರ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಅನಾವಶ್ಯಕವಾಗಿ ಅವರ ವರ್ಚಸ್ಸನ್ನು ತೇಜೋವಧೆ ಮಾಡುವ ಉದ್ದೇಶದಿಂದ ತಾಲ್ಲೂಕು ಬಿಜೆಪಿಯ ಕೆಲವು ಮುಖಂಡರು ಮಾಡಿರುವ ಆರೋಪ ಶುದ್ಧ ಸುಳ್ಳಿನಿಂದ ಕೂಡಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎನ್.ಜಿ. ರಮೇಶ್ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಆರೋಪ ಮಾಡಿರುವ ೭೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ನಮ್ಮ ಜಿಲ್ಲೆಗಳಲ್ಲಿ ಬರುವ ೩೬೭ ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ. ೫೦ ರಷ್ಟು ನೀರು ತುಂಬಿಸುವ ಸಮಗ್ರ ಪರಿಷ್ಕುತ ಯೋಜನಾ ವರದಿಗೆ ಸರ್ಕಾರವು ರೂ. ೧೨,೩೪೦ ಕೋಟಿ ಮೊತ್ತಕ್ಕೆ ದಿನಾಂಕ : ೦೬.೦೩.೨೦೧೫ ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ದಿನಾಂಕ ೦೫.೦೧.೨೦೧೮ ರಂದು ಅಜ್ಜಂಪುರದಲ್ಲಿ ಗುದ್ದಲಿ ಪೂಜೆ ನೇರವೇರಿಸಿ ಈ ಏತಾ ನೀರಾವರಿ ಯೋಜನೆಯನ್ನು ಎರಡು ಪ್ಯಾಕೇಜ್ಗಳಾಗಿ ವಿಂಗಡಿಸಿ, ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದರು.
ತರೀಕೆರೆ ಏತ ನೀರಾವರಿ ಯೋಜನೆ ಪ್ಯಾಕೇಜ್-೦೨ ರ ಕಾಮಗಾರಿಯನ್ನು ದಿನಾಂಕ : ೨೪.೦೮.೨೦೧೭ ರಂದು ಟೆಂಡರ್ ಆಹ್ವಾನಿಸಿ, ಟರ್ನ್ ಕೀ ಆಧಾರದ ಮೇಲೆ ಟೆಂಡರಿಗಿಟ್ಟ ಮೊತ್ತ ರೂ. ೪೮೧.೦೬ ಕೋಟಿಗಳಿಗೆ ಶೇ. ೯.೦೦ ರಷ್ಟು ಹೆಚ್ಚು ಅಂದರೆ ರೂ. ೫೨೪.೩೬ ಕೋಟಿಗಳಿಗೆ ಮೆಘಾ ಇಂಜಿನಿಯರಿಂಗ್-ನೆಟಾಫೀಮ್ ಇರಿಗೇ?ನ್ (ಜೆವಿ) ಬೆಂಗಳೂರು ಇವರಿಗೆ ವಿಭಾಗ ಕಛೇರಿ ಒಪ್ಪಂದ ಪತ್ರ ಸಂಖ್ಯೆ ೨೮/೨೦೧೭-೧೮, ದಿನಾಂಕ ೧೫.೦೩.೨೦೧೮ ರಂದು ಕಾಮಗಾರಿಯನ್ನು ವಹಿಸಿರುವುದು ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಎಂದರು.
ವಾಹನ ಸಂಚಾರವೇ ಮಾಡಲಾಗದೆ ಸಂಪೂರ್ಣ ಹದಗೆಟ್ಟಿದ್ದ ತರೀಕೆರೆ ಪಟ್ಟಣದ ರಾ.ಹೆ. ೨೦೬ ರ ರಸ್ತೆಯನ್ನು ಚತು?ಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಲೋಕೋಪಯೋಗಿ ಇಲಾಖೆ ಒಳಗೊಂಡಂತೆ ವಿವಿಧ ೬ ಮೂಲಗಳಿಂದ ಒಟ್ಟು ರೂ. ೫೧.೬೪ ಮಂಜೂರಿ ಮಾಡಿಸಿದ್ದು ಕಾಮಗಾರಿ ಪ್ರಗತಿಯಲ್ಲಿರುವುದು ಎಲ್ಲರಿಗೂ ತಿಳಿಸಿದ ವಿ?ಯ ಎಂದರು.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡಲು ರೂ. ೯.೦೦ ಕೋಟಿ, ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ರೂ. ೧೦.೦೦ ಕೋಟಿ., ತರೀಕೆರೆ ಪಟ್ಟಣದ ಅಭಿವೃದ್ಧಿಗೆ ರೂ. ೫.೦೦ ಕೋಟಿಯನ್ನು ಮುಖ್ಯಮಂತ್ರಿಗಳ ವಿಶೇ? ಅನುದಾನ, ಅಲ್ಪ ಸಂಖ್ಯಾತರ ಕಾಲೋನಿಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ರೂ. ೩.೦೦ ಕೋಟಿ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ರೂ. ೬೦ ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಸಕರ ಪತ್ನಿ ಮತ್ತು ಮಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿ?ಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವುದು ಸುಳ್ಳು. ಯಾವುದೇ ಕಾರ್ಯಕ್ರಮವಿದ್ದರೂ ಆಯಾ ಭಾಗದ ಜನಪ್ರತಿನಿಧಿಗಳಿಂದಲೇ ಕಾರ್ಯಕ್ರಮ ನಿರ್ವಹಿಸಿದ್ದಾರೆ. ಇವರು ಸಾರ್ವಜನಿಕರ ಜೊತೆ ಪಾಲ್ಗೊಳ್ಳುತ್ತಿದ್ದಾರೆ ವಿನಃ ಯಾವುದೇ ಸರ್ಕಾರಿ ಶಿ?ಚಾರಕ್ಕೆ ಧಕ್ಕೆ ತಂದಿರುವುದಿಲ್ಲ. ಕ್ಷೇತ್ರದ ಜನರ ಸೇವೆಗೆಂದೆ ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾಟ್ರಸ್ಟ್ ನಿಂದ ಹಲವಾರು ಜನಪರ ಸೇವೆಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಮಹಿಳಾ ಘಟಕದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀಬಾಯಿ ಹೇಳಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಕಳೆದ ಸಾಲಿನಲ್ಲಿಯೇ ಶಾಸಕ ಜಿ.ಎಚ್. ಶ್ರೀನಿವಾಸ್ ರವರು ಮೊದಲನೆ ಬಾರಿಗೆ ಕೆರೆಗಳಿಗೆ ಭದ್ರಾ ಚಾನಲ್ ನಿಂದ ತುಂಬಿಸಿದ್ದಾರೆ. ಕಳೆದ ತಿಂಗಳು ಭದ್ರಾ ಮೇಲ್ದಂಡೆ ಚಾನ?? ನಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ನೀರನ್ನು ಹಾಯಿಸಿದ್ದರು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿ ಮತ್ತು ಕೆಡಿಪಿ ಸದಸ್ಯ ಮೆಹಬೂಬ್ ಹೇಳಿದರು.
ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಶ್ರಮಿಸುವವರನ್ನು ಸಹ ಸದಸ್ಯರನ್ನಾಗಿ ಮಾಡುವಿದ್ದು, ಅದರಂತೆ ಶಾಸಕರ ಮಗಳು ಸದಸ್ಯರಾಗಿ ಶಾಲಾ-ಕಾಲೇಜುಗಳ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶ್ರೀಧರ್, ಸಂತೋ?ನಾಯ್ಕ, ಸಂತೋ? ಮಾರ್, ಹರೀಶ್, ಕುಡ್ಲೂರು ಶಿವು, ಪ್ರಸನ್ನ, ಮಹಾಂತೇಶ ಮೊದಲಾದವರಿದ್ದರು.
BJP alleges against MLA G.H. Srinivas
Leave a comment