ಚಿಕ್ಕಮಗಳೂರು: ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಿಸಿಲು ಕೋಟೆ ತೋಟ ರವೀಂದ್ರ ಮತ್ತು ತೊಂಬಟ್ಟು ಲಕ್ಷ್ಮಿ ಎಂಬುವವರನ್ನು ಪತ್ತೆ ಹಚ್ಚ ಬೇಕಾಗಿತ್ತು.
ಅದು ಅಷ್ಟು ಸುಲಭವಾಗಿ ಇರಲಿಲ್ಲ ಕಾರಣ ರವೀಂದ್ರ ಪಶ್ಚಿಮ ಘಟ್ಟಗಳ ಕಾಡಿನ ಇಂಚು,ಇಂಚು ಮಾಹಿತಿ ಜೊತೆಗೆ ಪೊಲೀಸ್ ರಿಂದ ತಪ್ಪಿಸಿ ಕೊಳ್ಳುವ ಚಾಣಕ್ಯತೆ ಹೊಂದಿದ್ದ ಇದರಿಂದಾಗಿ ಪೊಲೀಸ್ ರು ಮಾರು ವೇಷಭದಲ್ಲಿ ಕಾಡು ಸುತ್ತಲೂ ಪ್ಲಾನ್ ಮಾಡಿಕೊಂಡಿದ್ದರು.
ಈ ವಿಚಾರ ಶಾಂತಿಗಾಗಿ ನಾಗರೀಕ ವೇದಿಕೆಯವರೆಗೆ ತಿಳಿದಿತ್ತು. ರವೀಂದ್ರ ಸಂಪರ್ಕ ಮಾಡಲು ಅಷ್ಟು ಸುಲಭವಿರಲಿಲ್ಲ ಏಕೆಂದರೆ ಕಾಡಿನ ಇಂಚು,ಇಂಚು ಜಾಗ ಮತ್ತು ಸ್ಥಳೀಯರ ಸಹಕಾರ ಪಡೆದಿದ್ದ
ಮುಂಡಗಾರು ಲತಾ ಟೀಮ್ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಅವರ ಗುಂಪು ಬಿಟ್ಟು ಹೊರನಡೆದಿದ್ದ ಹೀಗಾಗಿ ಇವನನ್ನು ಸಂಪರ್ಕ ಮಾಡಲು ಸಮಸ್ಯೆ ಆಗಿತ್ತು. ಆದ್ದರಿಂದ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ವೇದಿಕೆಯವರಿಗೂ ತಲೆ ಬಿಸಿಯಾಗಿತ್ತು.
ಇದರ ಮಧ್ಯೆ ಗುಪ್ತಚರ ಇಲಾಖೆಯ ರಮೇಶ್ ರಾವ್ ಎಂಬುವರು ಗಡ್ಡ ಬಿಟ್ಟು ಮಾಸಿದ ಶರ್ಟ್, ಪಂಚೆ ಉಟ್ಟರೆ ಗಿರೀಶ್ ಎಂಬುವರು ಟೋಪಿ,ಕನ್ನಡಕ ನೀಟಾದ ಡ್ರೆಸ್ ಏಕೆಂದರೆ ಇವರು ಬುದ್ಧಿಜೀವಿ ರೀತಿಯಲ್ಲಿ ಕಾಣಿಸುವಂತೆ ಇದ್ದರು.
ಕಳೆದ ಒಂದು ತಿಂಗಳಿಂದ ಸುತ್ತಿ ರವೀಂದ್ರರ ಮನೆ ಮತ್ತು ಸಂಭಂಧಿಕರನ್ನು ಸಂಪರ್ಕ ಮಾಡಿ ಕೆಲ ಮಾಹಿತಿ ಪತ್ತೇಹಚ್ಚಿದರು ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ಪುನರ್ ವಸತಿ ಸಮಿತಿಯವರು ಸಹಕಾರ ಮತ್ತು ಸಲಹೆಗಳು ಅಂತಿಮವಾಗಿದ್ದವು ಎನ್ನಲಾಗಿದೆ ಅಂತೂ ಇಂತೂ ನಕ್ಸಲ್ ಕೊನೆಯ ಕೊಂಡಿ ಕಳಚಿ ಜಿಲ್ಲಾಡಳಿತ ಮುಂದೆ ತರುವಲ್ಲಿ ಯಶಸ್ಸು ಸಾಧಿಸಿದರು.
Naxal Ravindra found by undercover police
Leave a comment