ಚಿಕ್ಕಮಗಳೂರು: ತೇಗೂರು ಪಂಚಾಯತಿ ಅಧಿಕಾರಿ ಲಕ್ಷ್ಮಣ ಎಂಬಾತ ಅಕ್ರಮ ಖಾತೆ ಮಾಡಿದ್ದಲ್ಲದೆ ಹಣ ದುರುಪಯೋಗಗೊಳಿಸಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಕೀರ್ತನಾ ಅಮಾನತು ಗೊಳಿಸಿ ಆದೇಶ ಮಾಡಿದ್ದಾರೆ.
ಹರಿಹರದಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಭಾವಿ ರಾಜಕಾರಣೆಯೊಬ್ಬರ ಜಾಗ ಖಾತೆ ಮಾಡಿಕೊಡಲು ಸತಾಯಿಸಿದ್ದರ ಹಿನ್ನೆಲೆಯಲ್ಲಿ ಹರಿಹರದಹಳ್ಳಿಯಿಂದ ತೇಗೂರು ಗ್ರಾಮ ಪಂಚಾಯತಿಗೆ ನಿಯೋಜನೆಗೊಳಿಸಲಾಗಿದೆ .
ತೇಗೂರು ಗ್ರಾಮ ಪಂಚಾಯತಿಗೆ ಬಂದ ತಕ್ಷಣ ಹಿಂದೆ, ಮುಂದೆ ತಿನ್ನಲು ಶುರುಮಾಡಿದ ಲಕ್ಷ್ಮಣ ಅಕ್ರಮವಾಗಿ ಖಾತೆ ಮಾಡಿರುವುದಲ್ಲದೆ ಹಣ ದುರುಪಯೋಗ ಮಾಡಿ ಖಾಸಗಿ ವ್ಯಕ್ತಿಗೆ ಗ್ರಾಮಠಾಣ ಜಾಗ ಖಾತರ ಮಾಡಿಕೊಟ್ಟಿದ್ದನ್ನು ಪ್ರಶ್ನೆ ಮಾಡಿದ ಅಧ್ಯಕ್ಷ ಮತ್ತು ಸದಸ್ಯರಿಗೆ ವಾಮಾಚಾರದ ಪೋಟೋ ಕಳುಹಿಸಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.
Misappropriation of funds: Tegur Panchayat PDO suspended.
Leave a comment