ಚಿಕ್ಕಮಗಳೂರು: ಅಕ್ರಮ ಗಾಂಜಾ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವ ಪೊಲೀಸರು ವಶಪಡಿಸಿಕೊಂಡಿದ್ದಾರೆ.
೨ ಲಕ್ಷ ರೂ. ಮೌಲ್ಯದ ೧೦ ಕೆ.ಜಿ. ೪ ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟಿಯೊಂದಿಗೆ ಮೊಬೈಲ್ವೊಂದನ್ನು ವಶ ಪಡಿಸಿಕೊಂಡಿರುವ ಜಿಲ್ಲಾ ಸಿ.ಇ.ಎನ್.ಅಪರಾಧ ಪೊಲೀಸ್ ಠಾಣಾ ಪಿ.ಎಸ್.ಐ. ಅಬ್ದುಲ್ಖಾದರ್ ಅವರಿಗೆ ಬಂದ ಮಾಹಿತಿ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ನಗರದ ದೀಪಾ ನರ್ಸಿಂಗ್ ಹೋಂ ನಿಂದ ಬೈಪಾಸ್ ರಸ್ತೆಗೆ ಹೋಗುವ ರಸ್ತೆಯಲ್ಲಿ ದಂಟರಮಕ್ಕಿ ಕಡೆಗೆ ಹೋಗುವ ರಸ್ತೆಯ ಕ್ರಾಸ್ನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಬರುತ್ತಿದ್ದರು.
ಹೆಚ್ಚಿನ ಗಾಂಜಾ ಸಂಗ್ರಹಣೆ ಮಾಡಿರಬಹುದೆಂಬ ಅವರುಗಳು ವಾಸವಾಗಿದ್ದ ಮನೆಯ ಮೇಲೆ ಏಕಕಾಲದಲ್ಲಿ ಪರಿಶೀಲಿಸಲಾಗಿದೆ.
ದಾಳಿಯಲ್ಲಿ ಪಿಎಸ್ಐ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಇಮ್ರಾನ್ಖಾನ್, ಜಿ.ಕೆ. ಶಶಿಧರ, ಡಿ.ಬಿ.ಮಂಜುನಾಥ್, ಅನ್ವರ್ ಪಾಷಾ, ಹರೀಶ, ಮಹೇಂದ್ರ, ರಮೇಶ, ಹರಿಪ್ರಸಾದ್ ಮತ್ತು ಮಾನಸ ಪಾಲ್ಗೊಂಡಿದ್ದರು.
Illegal transportation of marijuana-10 kg. marijuana seized
Leave a comment