Home Latest News Coffee pulper water:ಅರೆನೂರು ಸಮೀಪದ ಆನೆಹಳ್ಳಕ್ಕೆ ಕಾಫಿಪಲ್ಪರ್ ನೀರು….?
Latest NewsHomenamma chikmagalur

Coffee pulper water:ಅರೆನೂರು ಸಮೀಪದ ಆನೆಹಳ್ಳಕ್ಕೆ ಕಾಫಿಪಲ್ಪರ್ ನೀರು….?

Share
ಅರೆನೂರು ಸಮೀಪದ ಆನೆಹಳ್ಳಕ್ಕೆ ಕಾಫಿಪಲ್ಪರ್ ನೀರು
ಅರೆನೂರು ಸಮೀಪದ ಆನೆಹಳ್ಳಕ್ಕೆ ಕಾಫಿಪಲ್ಪರ್ ನೀರು
Share

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗ ಹಳ್ಳದ ನೀರು ಕಲುಷಿತಗೊಳ್ಳುತ್ತಿದ್ದು ನೀರಿನ ಬಣ್ಣವೇ ಬದಲಾವಣೆ ಆಗುತ್ತಿದೆ. ಕುಡಿಯುವ ನೀರಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ಮನುಷ್ಯರ ಆರೋಗ್ಯದ ಜೊತೆಗೆ  ಜಲಚರ ಪ್ರಾಣಿಗಳ ಜೀವಕ್ಕೂ  ಕಂಟಕ ಎದುರಾಗಿದೆ.

ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕೆಲ ಕಾಫಿಬೆಳೆಗಾರರು  ಕುಡಿಯುವ ನೀರಿಗೆ ಕಾಫಿ ಪಲ್ಪರ್ ನೀರು ಬಿಡುವುದರ ಮೂಲಕ ಕಲುಷಿತಗೊಳಿಸುತ್ತಿರುವ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪವಿರೋ ಆನೆ ಹಳ್ಳಕ್ಕೆ ಕಾಫಿ ಪಲ್ಪರ್ ನೀರು ಬಿಡಲಾಗುತ್ತಿದೆ

ಆನೆ ಹಳ್ಳದ ನೀರು  ಅರೇನೂರು ಗ್ರಾಮ ಸೇರಿದಂತೆ ಐದು ಹೆಚ್ಚು ಗ್ರಾಮಗಳ ಜನರ ಕುಡಿಯುವ ನೀರಿನ ಮೂಲವಾಗಿದೆ. ಎಸ್ಟೇಟ್ ನ  ಮಾಲೀಕರು ಕಾಫಿ ಪಲ್ಪರ್ ನೀರು ಬಿಡುವುದರ ಮೂಲಕ ಕಲುಷಿತಗೊಳಿಸುತ್ತಿದ್ದಾರೆ. ಇದರಿಂದ ಮನುಷ್ಯರ ರೋಗದ ಮೇಲೆ ಕಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೊತೆಗೆ ಹಳ್ಳದಲ್ಲಿರುವ ಮೀನು ಸೇರಿದಂತೆ ಜಲಚರ ಪ್ರಾಣಿಗಳ ಜೀವಕ್ಕೂ ಕಂಟಕ ಎದುರಾಗಿದೆ.

ಈ ಭಾಗದ ಕಾಫಿಬೆಳೆಗಾರರು ಕಾಫಿಯನ್ನ ಪಲ್ಪರಿಂಗ್ ಮಾಡಿ ಪಲ್ಪರಿಂಗ್ನ ವೇಸ್ಟ್ ನೀರನ್ನ ಹಳ್ಳದ ಒಡಲಿಗೆ ಬಿಡುತ್ತಿದ್ದಾರೆ. ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹೋದ್ರೆ, ಬೇಸಿಗೆಯಲ್ಲಿ ನೀರಿಗೆ ಬಣ್ಣವಿಲ್ಲದಿದ್ದರೂ ಶುಭ್ರವಾಗಿ ಹರಿಯುತ್ತೇದೆ. ಆದರೆ, ಕಾಫಿತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನ ನೇರವಾಗಿ ಹಳ್ಳಕ್ಕೆ ಸೇರಿಸುತ್ತಿರೋದ್ರಿಂದ ಸ್ವಚ್ಛವಾಗಿ ಹರಿಯುವ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.

ಇದರಿಂದ ನೀರು ಕೂಡ ದುರ್ವಾಸನೆ ಬೀರುತ್ತಿದೆ. ಇದು ಸ್ಥಳಿಯರು ಆಕ್ರೋಶಕ್ಕೂ ಕಾರಣವಾಗಿದೆ. ಕಾಫಿ ಪಲ್ಪರ್ ಮಾಡಿದ ನೀರನ್ನ ಇಂಗು ಗುಂಡಿ ಮೂಲಕ ಇಂಗಿಸಬೇಕು. ಅಧಿಕಾರಿಗಳು ಇತ್ತ ಸೂಕ್ತ ಗಮನ ಹರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. ಒಟ್ಟಾರೆ ಕೆಲ ಬೆಳೆಗಾರರ ಬೇಜವಾಬ್ದಾರಿ ವರ್ತನೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಿದೆ. ಇಲ್ಲವಾದರೆ, ನಾಡಿನ ಜೀವಜಲ ಜನ-ಜಾನುವಾರುಗಳ ಪಾಲಿಗೆ ವಿಷಜಲವಾಗೋದು ಗ್ಯಾರಂಟಿ.

Coffee pulper water for the elephant pit near Arenuro

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...