ಚಿಕ್ಕಮಗಳೂರು: ಯಾರನ್ನು ನಂಬುವುದು ಯಾರನ್ನು ಬಿಡುವುದು ಸಂಬಂಧಿಕರು ಎಂದು ನಂಬಿದರೆ ಮುಗಿಯಿತು ಕತೆ.ಎಚ್ಚರವಹಿಸದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.
ಸಂಬಂಧದ ಹೆಸರಿನಲ್ಲಿ ಎಂತಹ ಹೀನ ಕೃತ್ಯಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಚಿಕ್ಕಮಗಳೂರಿನಲ್ಲಿ ನಡೆದಿರುವ ಘಟನೆಯೇ ಸಾಕ್ಷಿ. 10 ನೆಯ ತರಗತಿಯ ಬಾಲಕಿಗೆ ಗರ್ಭಿಣಿ ಮಾಡಿರುವ ದೂರದ ಸಂಬಂಧಿಯಿಂದ ಕುಟುಂಬವೇ ಕಣ್ಣೀರಿನಲ್ಲಿ ಮುಳುಗಿದೆ.
ಕೃತ್ಯ ನಡೆಸಿರುವ ಅಸಾಮಿ 54 ವರ್ಷದ ಇಲಿಯಾಜ್ ಈತ ಸಂಬಂಧಿ ಬೇರೆ, ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದು ಬಾಯಿ ಮುಚ್ಚಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಈ ವಿಷಯ ಯಾರಿಗದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತಂದೆ,ತಾಯಿಯನ್ನು ಮುಗಿಸುವೇ ಎಂದು ಹೆದರಿಸಿದ್ದರ ಹಿನ್ನೆಲೆ ಬಾಲಕಿ ಬಾಯಿ ಬಿಟ್ಟಿಲ್ಲ.
ಆದರೆ ಇತ್ತೀಚೆಗೆ ಸುಸ್ತಾಗಿದ್ದರಿಂದ ತಾಯಿ ಬಳಿ ಹೇಳಿದಾಗ ಸರ್ಕಾರಿ ಆಸ್ಪತ್ರೆಗೆ ಬಂದು ವೈದರ ಬಳಿ ತೋರಿಸಿದಾಗ ಕೃತ್ಯ ಹೊರಬಂದಿದೆ. ಇಲಿಯಾಜ್ ಗೆ ಇಬ್ಬರು ಪತ್ನಿಯರಿದ್ದು ಒಬ್ಬಳಿಗೆ ಇನ್ನೂ 23 ವರ್ಷ ಎಂದು ತಿಳಿದು ಬಂದಿದೆ. ವಿಷಯ ತಿಳಿದ ತಕ್ಷಣ ಆರೋಪಿ ಇಲಿಯಾಜ್ ಪರಾರಿಯಾಗಿದ್ದಾನೆ.
ಪತ್ನಿಯರಿಬ್ಬರು ರಾಜಿ ಮಾಡಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಸವನಹಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊ ನಂ 10/2025 ಕಲಂ 65(1) 64(2)(m)(I)(f)332(b) 351(2) bns 4(2).06 ದೂರು ದಾಖಲಾಗಿದೆ.
ದಾಖಲಾಗಿದೆ.
Rape of a 10th grade girl
Leave a comment