ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ನಲ್ಲಿ ಸೆಟ್ ದೋಸೆಗಳೆಂದು ಮಾಜಿ ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್ ಕುಮಾರ್ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಮತ್ತು ಗ್ಯಾರಂಟಿ ಅಧ್ಯಕ್ಷ ಮತ್ತು ಶಾಶ್ವತ ಪ್ರದಾನ ಕಾರ್ಯದರ್ಶಿ ಶಿವಾನಂದ ಸ್ವಾಮಿರವರನ್ನು ಸೆಟ್ ದೋಸೆ ಗಳು ಎಂದು ಅವರ ವಿರೋಧಿ ಗಳು ಗೇಲಿ ಮಾಡುತ್ತಾರೆ.
ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಒಂದಲ್ಲೂಂದು ಸ್ಥಾನ ಪಡೆದಿರುವ ಇವರುಗಳಿಂದ ಕಾಂಗ್ರೆಸ್ ಗೆ ಲಾಭವಾಗಿಲ್ಲ. ವಿಜಯ್ ಕುಮಾರ್ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತವರು.ಸಂದೀಪ್ ಒಮ್ಮೆ ನಗರಸಭೆಯ ಸದಸ್ಯರಾದರೆ ಶಿವಾನಂದ ಸ್ವಾಮಿ ಮೂರು ವರ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಸ್ತುತ ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕವಾಗಿದ್ದಾರೆ.
ಸೆಟ್ ದೋಸೆ ಎಂದು ಏಕೆ ಕರೆಯುತ್ತಿರಿ ಎಂದು ಕೇಳಿದರೆ ಇವರು ಯಾವುದೇ ತೀರ್ಮಾನ ಕೈಗೊಳ್ಳುವ ನಿರ್ಧಾರ ಮತ್ತು ಹೊಂದಾಣಿಕೆ ಇರುತ್ತದೆ ಎನ್ನುತ್ತಾರೆ. ಬಿ.ಎಲ್.ಶಂಕರ್ ಕೃಪೆಯಿಂದ ಎರಡು ಬಾರಿ ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಕಾಲದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿಯಾಗಿ ಬೆಳೆಯಿತು ಒಮ್ಮೆ ತರೀಕೆರೆ ಮತ್ತೊಮ್ಮೆ ಶೃಂಗೇರಿಯಲ್ಲಿ ಶಾಸಕರು ಗೆದ್ದಿದ್ದು ಬಿಟ್ಟರೆ ಜಿ,ಪಂ ನಲ್ಲಿ ನೆಲಕಚ್ಚಿತು ಎನ್ನುತ್ತಾರೆ .
ಇನ್ನೂ ಸಂದೀಪ್ ಎರಡನೇ ಬಾರಿ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ಶಂಕರ್ ಬಲಗೈ ಎನ್ನುವಾಗಲೇ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದು ವಿಶೇಷ. ಇವರು ಒಮ್ಮೆ ನಗರಸಭೆಯ ಸದಸ್ಯರಾಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ .ಮಹಾರಾಷ್ಟ್ರ ದ ಉಸ್ತುವಾರಿ ಕಳೆದ ಬಾರಿ ಕಿಚುಡಿ ಸರ್ಕಾರ ರಚನೆಯಾದರು ಹೆಚ್ಚು ದಿನ ಉಳಿಯಲಿಲ್ಲ ಈ ಬಾರಿ ಕಾಂಗ್ರೆಸ್ ನೆಲಕಚ್ಚಿ ಹೋಯಿತು ಎಂದು ಗೇಲಿ ಮಾಡುತ್ತಾರೆ.
ಇನ್ನೂ ಶಿವಾನಂದ ಸ್ವಾಮಿ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಹತ್ತಾರು ವರ್ಷಗಳಿಂದ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಲವು ಸಂಘಗಳಿಗೆ ಪ್ರ,ಕಾ ಆಗಿದ್ದಾರೆ.ಮೃದು ಮಾತಲ್ಲೇ ಕೊಯ್ಯುವ ಬುದ್ದಿ ಇದೆ ಎಂದು ಕಾಂಗ್ರೆಸ್ ನಲ್ಲಿ ಇರುವ ಲಿಂಗಯಿತ ಮುಖಂಡರ ದೂರು ನಾವು ಕಷ್ಟಪಟ್ಟು ಯಾರಾದರೂ ಬಂದು ಸೇರಿಕೊಂಡರೆ ಎಂಬ ಭಯದ ಧೋರಣೆ ಇಟ್ಟು ಕೊಂಡಿರುವ ಇವರಿಗೆ ಯಾವುದು ಶಾಶ್ವತವಲ್ಲ ಎಂಬ ಬುದ್ದಿ ಬರಲಿ ಎನ್ನುತ್ತಾರೆ.
ಹೀಗಾಗಿ ಮೂರು ಜನರ ತೀರ್ಮಾನವನ್ನು ನೋಡಿ ಸೆಟ್ ದೋಸೆ ಎಂಬುದು ಮಾತ್ರ ನಿಜ ಎನ್ನಲೇ?
The set dosas in Congress!
Leave a comment