ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಲು ಬಂದು ಹೋದವರು ಇಂದು ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ 9 ಗಂಟೆಗೆ ಬಂದು 11ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ.
ಜಿಲ್ಲೆಯಲ್ಲಿ ಆನೇಕ ಸಮಸ್ಯೆಗಳಿವೆ ಅವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದಿಲ್ಲ ಕಾಂಗ್ರೆಸ್ ಮುಖಂಡರು ಹೇಳಲು ಹೋದರೆ ಅವರ ಮೇಲೆ ರೇಗುವುದರಿಂದ ಕಾಫಿ ತೋಟದ ಉಸ್ತುವಾರಿಗೆ ಬಂದಿರಬೇಕು ಎಂದು ಸುಮ್ಮನಾಗುತ್ತಾರೆ.
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಿನ್ನೆ ಇಂದಿನದಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳುದಿದ್ದರೆ ರೈತರು,ಕಾರ್ಮಿಕರು ಪ್ರಾಣ ಕಳೆದುಕೊಳ್ಳ ಬೇಕಾಗಿದೆ. ಕಾಡಾನೆ ಜೊತೆಗೆ ಕಾಡು ಕೋಣದ ಹಾವಳಿಯಿಂದ ಪ್ರಾಣ ಕಳೆದುಕೊಂಡರು ತಿರುಗಿ ನೋಡಲಿಲ್ಲ.
ಕಾಂಗ್ರೆಸ್ ಸರ್ಕಾರ ಬಂದು ಇಪ್ಪತ್ತು ತಿಂಗಳಾದರು ಜಿಲ್ಲೆಯ ಆಡಳಿತ ಬದಲಾಗಿಲ್ಲ ಎನ್ನುವುದಕ್ಕೆ ಅಕ್ರಮವಾಗಿ ಹಕ್ಕು ಪತ್ರ ನೀಡಿ ಕಾಸು ಮಾಡಿಕೊಂಡ ಒಂದಿಬ್ಬರನ್ನು ಬಿಟ್ಟರೆ ಅಯಾಕಟ್ಟಿನ ಜಾಗದಲ್ಲಿ 136 ಜನ ಠಾಳಯಿಸುತ್ತಿದ್ದಾರೆ ನಾವು ಕೊಡಬೇಕಾದವರಿಗೆ ಕೊಟ್ಟಿದ್ದೇವೆ ನಮ್ಮ ಮುಟ್ಟಲಿ ನೋಡುವ ಎನ್ನುತ್ತಾರೆ .ಬಿಜೆಪಿ ಆಡಳಿತದಲ್ಲಿ ಇದ್ದವರೆ ಮುಂದುವರೆಸಿರುವುದು ಜಾರ್ಜ್ ಹೆಸರಿನಲ್ಲಿ ಹಬ್ಬ ಮಾಡುತ್ತಿದ್ದಾರೆ.
ವಿದ್ಯುತ್ ಮಂತ್ರಿಯಾದರು ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ .ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಅಕ್ರಮವಾಗಿ ವಿದ್ಯುತ್ ಕದಿಯುವವರಿಗೆ ಇಲಾಖೆಯರು ಸಹಕರಿಸುತ್ತಿದ್ದಾರೆ ಎಂದು ರೈತ ಸಂಘಗಳ ದೂರು.
ಸಿ.ಟಿ.ರವಿ ಶಿಷ್ಯನಂತೆ ಜಿಲ್ಲಾ ಸರ್ಜನ್ ಆಗಿ ಬಂದ ಮೋಹನ್ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೆಂಟ ಎಂದೇಳುತ್ತ ಅಕ್ರಮವಾಗಿ ಕೇಸ್ ಸೀಟ್ ಮಾರುವುದು ಪರಿಕರ ಕೊಳ್ಳುವದರಲ್ಲಿ ಕಮೀಷನ್ ಪಡೆಯುವುದು ಕರೋನ ಸಮಯದಲ್ಲಿ ಮಾಡಿರುವ ಅವ್ಯವಹಾರ ಮುಚ್ಚಿ ಕೊಳ್ಳಲು ಬೇಕಾದ ದಾರಿ ಹುಡುಕಿಕೊಂಡಿದ್ದಾರೆ.
ಜಿಲ್ಲೆಗೂ ಜಾರ್ಜ್ ಗೆ ಏನೇನು ಸಂಬಂಧ ಇಲ್ಲದವರಂತೆ ಬಂದು ಹೋಗುವುದರಿಂದ ಜಿಲ್ಲಾಡಳಿತದ ಮೇಲೆ ಹಿಡಿತ ತಪ್ಪಿದೆ ಇದಕ್ಕೆ ವಯಸ್ಸು ಕೂಡ ಕಾರಣವಿರಬಹುದು.
District administration out of control by District In-charge Minister George
Leave a comment