Home Crime News The hawk hunting caseದಿನಕ್ಕೊಂದು ತಿರುವು ಪಡೆಯುತ್ತಿರುವ ಕಡವೆ ಬೇಟೆ ಪ್ರಕರಣ : ಇನ್ನೊಬ್ಬನ ಸೆರೆ
Crime Newsnamma chikmagalur

The hawk hunting caseದಿನಕ್ಕೊಂದು ತಿರುವು ಪಡೆಯುತ್ತಿರುವ ಕಡವೆ ಬೇಟೆ ಪ್ರಕರಣ : ಇನ್ನೊಬ್ಬನ ಸೆರೆ

Share
Share

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕಡವೆ ಬೇಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇನ್ನೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.ಕಳೆದ ಭಾನುವಾರ ಚಿಕ್ಕಮಗಳೂರು ತಾಲೂಕಿನ ತೋಗರಿಹಂಕಲ್ ಕೂತನಕುಲ್ ಎಸ್ಟೇಟ್ ನ ಮನೆಯ ಮೇಲೆ ದಾಳಿ ಮಾಡಿ ಕಡವೆ ಶಿಖಾರಿ ಮಾಡಿ , ಚರ್ಮ ಸುಲಿದು ಮಾಂಸ ತುಂಡು ಮಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿತ್ತು. 5 ಜನ ತಪ್ಪಿಸಿಕೊಂಡಿದ್ದು ಎಸ್ಟೇಟ್ ರೈಟಾರ್ ದೇವಯ್ಯ ನನ್ನು ಬಂಧಿಸಿದ್ದರು.

ಕಡವೆ ಚರ್ಮ, ಅಂದಾಜು 40 ಕೆ ಜಿ ಮಾಂಸ, ಶಿಖಾರಿಗೆ ಬಳಸುತ್ತಿದ್ದ 2 ಕೋವಿ, ಚೂರಿ, ಚಾಕುವನ್ನು ವಶಕ್ಕೆ ಪಡೆದು ಅರಣ್ಯ ಅಪರಾಧ ಪ್ರಕರಣವನ್ನು ದಾಖಲಿಸಿದ್ದರು. ದೇವಯ್ಯ ನನ್ನು ವಿಚಾರಣೆಗೆ ಮಾಡಿದಾಗ ಕೂಲಿ ಕಾರ್ಮಿಕ ನಾಗರಾಜ್ ಜೊತೆ ಸೇರಿ ಎಂಬ ಎಸ್ಟೇಟ್ ನಲ್ಲಿ ಕೂಲಿ ಮಾಡುತ್ತಿದ್ದ ವ್ಯಕ್ತಿ ಕಡವೆಗೆ ಗುಂಡು ಹೊಡೆದು ಮನೆಯ ಹಿಂಭಾಗದ ಶೆಡ್ ಗೆ ತಂದು ಹಂಚಿಕೊಳ್ಳುವ ತಯಾರಿ ಮಾಡುತ್ತಿದ್ದೆವು ಎಂದು ಹೇಳಿ ತಪ್ಪು ಒಪ್ಪಿಕೊಂಡಿದ್ದ.

ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ನಡೆದ ಸ್ಥಳ ಪರಿಶೀಲನೆಗೆ ಅರಣ್ಯ ಸಂಚಾರಿ ದಳದ ತಂಡ ತೆರಳಿದಾಗ ಅಲ್ಲಿ ಗಂಡು ಕಡವೆ ಒಂದರ ತಲೆ ಬಿದ್ದಿರುವುದು ಕಂಡು ಬಂದಿದೆ . ಎಸ್ಟೇಟ್ ವ್ಯವಸ್ಥಾಪಕನನ್ನು ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿ ಹೇಳಿಕೆ ಪಡೆದಾಗ, ದೇವಯ್ಯನೊಂದಿಗೆ ನಾಗರಾಜ್ ಮತ್ತು ಟಿಂಬರ್ ವ್ಯಾಪಾರಿ ಸುಭಾಷ್ ಶಾಮೀಲು ಆಗಿರುವುದು ಬೆಳಕಿಗೆಬಂದಿದೆ

ಹೊಸಪೇಟೆಯಿಂದ ಚಿಕ್ಕಮಗಳೂರು ಕಡೆಗೆ ಬಸ್ ನಲ್ಲಿ ಬರುತ್ತಿದ್ದ ನಾಗರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಟಿಂಬರ್ ವ್ಯಾಪಾರಿ ಸುಭಾಷ್ ಆಗಾಗ ಈ ಎಸ್ಟೇಟ್ ಗೆ ಬಂದು ಶಿಖಾರಿಗೆ ತೆರಳುತ್ತಿದ್ದ, ಅಂದು ಸಂಜೆ ಪಾಯಿಂಟ್ 30 ರೈಪಲ್ ನಿಂದ ಎಸ್ಟೇಟ್ ಸಮೀಪದ ಮೀಸಲು ಅರಣ್ಯದಲ್ಲಿ ಕಂಡು ಬಂದ ಕಡವೆಯನ್ನು ಗುಂಡು ಹೊಡೆದು ಅಕ್ರಮವಾಗಿ ಶಿಖಾರಿ ಮಾಡಿದ್ದಾನೆ ಎನ್ನುವ ಆಘಾತಕಾರಿ ಅಂಶ ಪತ್ತೆಯಾಗಿದೆ.

ಅತ್ತ ದೇವಯ್ಯ ಎಸ್ಟೇಟ್ ನ ಮಹಿಂದ್ರಾ ಪಿಕಪ್ ವಾಹನ ತೆಗೆದುಕೊಂಡು ಹೋಗಿ ಕಡವೆ ದೇಹವನ್ನು ಹಾಕಿಕೊಂಡು ಇಬ್ಬರೂ ಬಂದು ,ರಾತ್ರಿ ನಾಲ್ವರೊಡನೆ ಸೇರಿ ಕಡವೆಯ ಚರ್ಮ ಸುಲಿದು ಮಾಂಸ ಹಸನು ಮಾಡುತ್ತಿದ್ದಾಗ ದೇವಯ್ಯ ಸಿಕ್ಕಿಬಿದ್ದಿದ್ದಾನೆ. ಸುಭಾಷ್ ಕೊಡಗು ಜಿಲ್ಲೆಯಿಂದ ಆಗಾಗ ಬಂದು ದೇವಯ್ಯನ ಮನೆಯಲ್ಲಿ ಉಳಿದು, ವನ್ಯಜೀವಿಗಳನ್ನು ಶಿಖಾರಿ ಮಾಡಿ ಮಾಂಸವನ್ನು ಪ್ಯಾಕ್ ಮಾಡಿಕೊಂಡು ಮತ್ತೆ ಕೊಡಗಿಗೆ ಹಿಂದಿರುಗುತ್ತಾನೆ ಎಂದು ನಾಗರಾಜ್ ಬಾಯಿ ಬಿಟ್ಟಿದ್ದಾನೆ.

ಪ್ರಕರಣ ನಡೆದು 5 ದಿನ ಕಳೆದರೂ ಎಸ್ಟೇಟ್ ಮಾಲೀಕರು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳ ಮುಂದೆ ಬಾರದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ.

The hawk hunting case is taking a turn for the worse: Another person arrested

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...