ಅಲ್ದೂರು: ವಿದ್ಯುತ್ ಸ್ಪರ್ಶದಿಂದ ಕೂದುವಳ್ಳಿ ಹೂವೇಗೌಡ ವಿಧಿವಶ, ಮುಗಿಲು ಮುಟ್ಟಿದ ಆಕ್ರಂದನ ಅಲ್ದೂರು ಸಮೀಪದ ಕೂದುವಳ್ಳಿ ಗ್ರಾಮದ ಕೃಷಿಕ ಕೆ. ಎಲ್. ಹೂವೇಗೌಡ ಇಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಅಸುನಿಗಿದ್ದಾರೆ.
ಕಾಫಿ ತೋಟದ ಮರಗಸಿ ಮಾಡಿಸಲು ಅಲ್ಯೂಮಿನಿಯಂ ಏಣಿಯನ್ನು ತೋಟದೊಳಗೆ ಹೊತ್ತು ಸಾಗುತ್ತಿದ್ದಾಗ, ತೋಟದ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಅಚಾನಕ್ಕಾಗಿ ಏಣಿ ತಗುಲಿ ಸ್ಥಳದಲ್ಲಿ ಸಾವನಪ್ಪಿದ್ದಾರೆ.
ಇತ್ತೀಚಿಗಷ್ಟೇ ತನ್ನ ಒಬ್ಬನೇ ಮಗನಾದ ಶಿವೇಗೌಡಗೆ ಟ್ಯಾಕ್ಟರ್ ಅಪಘಾತದದಿಂದ ಗಂಭೀರ ಗಾಯಗಳಾಗಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾನೆ. ಹೀಗೆ ತನ್ನ ಮಗ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿಯೇ 52ರ ವಯೋಮಾನದ ಹೂವೇಗೌಡ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಅಸುನಿಗಿರುವುದು ನೋವಿನ ಸಂಗತಿಯಾಗಿದೆ.
ಮಡದಿ, ಮಗ ಸೇರಿದಂತೆ ಅಪಾರವಾದ ಒಂದು ದೊಡ್ಡ ಕುಟುಂಬವನ್ನು ಬಿಟ್ಟು ಅಗಲಿದ್ದಾರೆ.
Kooduvallii Hoovegowda dies of electric shock
Leave a comment