Home Dr. Mohan Kumar:ಡಾ.ಮೋಹನ್ ಕುಮಾರ್ ರಂಗಿನಾಟ ಕೇಸ್ ಸೀಟ್ ಆಕ್ರಮ ಮಾರಾಟ ?
Home

Dr. Mohan Kumar:ಡಾ.ಮೋಹನ್ ಕುಮಾರ್ ರಂಗಿನಾಟ ಕೇಸ್ ಸೀಟ್ ಆಕ್ರಮ ಮಾರಾಟ ?

Share
ಡಾ.ಮೋಹನ್ ಕುಮಾರ್
ಡಾ.ಮೋಹನ್ ಕುಮಾರ್
Share

ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮೋಹನ್ ಕುಮಾರ್ ಕಳೆದ ಐದುವರೆ ವರ್ಷಗಳಿಂದ ರೆಸ್ಟ್ ಲೇಸ್ ಆಡಳಿತ ನಡೆಸುತ್ತಿದ್ದಾರೆ. ಮಳ್ಳ,ಮಳ್ಳ ಮಂಚಕ್ಕೆ ಎಷ್ಟು ಕಾಲು ಎಂದರೆ ನೇರವಾಗಿ ನಾಲ್ಕು ಎನ್ನುವ ಬದಲು ಮೂರು ಮತ್ತೊಂದು ಎಂದು ಹೇಳುತ್ತಾರೆ ಎಂದು ಸಿಬ್ಬಂದಿ ಹೇಳುತ್ತಾರೆ.ಮಾತು ಮಾತ್ರ ಮೃದು ಮಾಡುವ ಕೆಲಸ ಮಾತ್ರ ಯಾರಿಗೂ ಗೊತ್ತಾಗಲ್ಲ ಆಸ್ಪತ್ರೆ ಈಗ ವೈದ್ಯಕೀಯ ಕಾಲೇಜ್ ಗೆ ಸೇರ್ಪಡೆ ಆಗಿದ್ದು ಡೀನ್ ಮುಖ್ಯಸ್ಥರು ಆದರೂ ಮೋಹನ್ ಕುಮಾರ್ ಮಾತ್ರ ಜೇಬು ಭರ್ತಿ ಮಾಡಿಕೊಳ್ಳುವ ಕೈಚಳಕ ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ.

ಮೈತ್ರಿ ಎಂಬ ಹೊರಗುತ್ತಿಗೆ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಮೂಲ ದಾಖಲೆ ಕೊಡದೆ ಕೆಲಸ ಮಾಡುತ್ತಿರುವುದು ಸರ್ಜನ್ ಕೃಪೆಯಿಂದ ಎನ್ನುತ್ತಾರೆ .ಇತ್ತೀಚೆಗೆ ಡೀನ್ ಗಮನಕ್ಕೆ ತಂದ ಮೇಲೆ ನೋಟೀಸ್ ನೀಡಲಾಗಿದೆ.ಇದಕ್ಕೆ ಬೇಸರ ಮಾಡಿಕೊಂಡು ರಜಾ ಹಾಕಿದ್ದಾರೆ ಎಂದು ವೈದ್ಯರು ಗೇಲಿ ಮಾಡುತ್ತಿದ್ದಾರೆ.

ಜನವರಿ 7ನೇ ತಾರೀಖು ಒಂದು ಲಾರಿ ಲೋಡ್ ಕೇಸ್ ಸೀಟ್ (ವೈದ್ಯಕೀಯ ತಪಾಸಣಾ ವರದಿ) ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಸಿಬ್ಬಂದಿ ವರ್ಗದವರು ಮಾತನಾಡುತ್ತಿದ್ದಾರೆ. ವೈದ್ಯಕೀಯ ತಪಾಸಣಾ ವರದಿಯ ಪೇಪರ್ ಮಾರಲು ನಿಯಮಗಳಿವೆ.ಐದು ವರ್ಷಗಳ ಅವಧಿ ಮುಗಿದ ನಂತರ ಒಂದು ಸಮಿತಿಯಿದ್ದು ಅವರು ವರದಿ ನೀಡಬೇಕು ನಂತರ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಟೆಂಡರ್ ಕರೆಯಬೇಕು ಅತಿ ಹೆಚ್ಚು ಬೆಲೆಗೆ ಮಾರಾಟಮಾಡಬೇಕು ಈಗ ಈ ಅಧಿಕಾರವು ಮೋಹನ್ ಕುಮಾರ್ ಗೆ ಇಲ್ಲ ಈ ಬಗ್ಗೆ ಡೀನ್ ವಿಚಾರಿಸಿದರೆ ನನಗೆ ಗೊತ್ತಿಲ್ಲ ಎನ್ನುತ್ತಾರೆ

ದಂಟರಮಕ್ಕಿಯ ಚಾಂದ್ ಖರೀದಿ ಮಾಡಿದ್ದು ಮತ್ತು ರಮೇಶ್ ಎಂಬುವರಿಗೆ ಎಲ್ಲಾ ವಿಚಾರ ಗೊತ್ತಿದೆ. ಎಷ್ಟು ಸಾರಿ ಈ ರೀತಿ ಮಾರಾಟವಾಗಿರಬಹುದು ಈ ಬಗ್ಗೆ ಲೋಕಯುಕ್ತ ತನಿಖೆ ನಡೆಸಲು ದೂರು ನೀಡಲು ತಯಾರಿ ನಡೆದಿದೆ ಎಂದು ತಿಳಿದುಬಂದಿದೆ. ನನ್ನ ಹೆಂಡತಿಗೆ ಹುಷರಿಲ್ಲ ಎಂದು ರಾಗ ಎಳೆಯುತ್ತಲೇ ಶಾಸಕ ರಾಜೇಗೌಡ ಮತ್ತು ತಮ್ಮಯ್ಯರ ಬಳಿ ಕಾಡಿಬೇಡಿ ಇಲ್ಲಿ ಉಳಿದುಕೊಂಡಿದ್ದು ಸಿ.ಟಿ.ರವಿ ಗಾಡ್ ಫಾದರ್ ಕಾಂಗ್ರೆಸ್ ನವರು ಗಾಡ್ ಮದರ್‌ ಆಗಿರುವುದು ಮೋಹನ್ ಕುಮಾರ್ ಗೆ ಯಾರು ಹೇಳುವವರು ಕೇಳುವವರು ಇಲ್ಲದಂತೆ ಆಗಿದೆ.

ಮೋಹನ್ ಕುಮಾರ್ ಗೆ ಸಾಥ್ ನೀಡುವುದು ಕಿಂಗ್ ಪಿನ್ ನೂರ್ ಅಹಮದ್ ಇವನು ಕೆಲಸಕ್ಕೆ ಸೇರಿದಾಗಿನಿಂದ ಚಾಪೆ ಹಾಕಿಕೊಂಡು ತಿನ್ನಲು ಶುರು ಹಚ್ಚಿಕೊಂಡವನು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವ ಬಗ್ಗೆ ದೂರುಗಳಿವೆ ಇಂತವರಿಗೆ ಲೋಕಯುಕ್ತ ಆತ್ತೆ ಮನೆಯಂತೆ ಆಗಿದೆ ಇನ್ನಾದರೂ ಡೀನ್ ಎಚ್ಚತ್ತುಕೊಳ್ಳದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.

Dr. Mohan Kumar Ranginata

Share

Leave a comment

Leave a Reply

Your email address will not be published. Required fields are marked *

Don't Miss

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ ಪಟ್ಟಣದ ಗುಣವಂತೆ ಗ್ರಾಮದಲ್ಲಿರುವ ಕಸ ಹಾಗೂ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ ವಿಮೆಗೆ ನೋಂದಣಿ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು....

Related Articles

ESA ಕರಡು ಅಧಿಸೂಚನೆ: ಭೌತಿಕ ಸರ್ವೆ ಬಳಿಕವೇ ಅಂತಿಮ ಅಧಿಸೂಚನೆಗೆ ಒತ್ತಾಯ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತ 7ನೇ ಕರಡು ಅಧಿಸೂಚನೆಯಲ್ಲಿ ಚಿಕ್ಕಮಗಳೂರು...

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿ.ಪಿ.ಐ. ಪ್ರತಿಭಟನೆ

ಚಿಕ್ಕಮಗಳೂರು: ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸುವುದು, ಎಸ್‌ಐಆರ್‌ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವುದು...

ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ

ಕಡೂರು : ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ...

ಅಪಪ್ರಚಾರಕ್ಕೆ ನೊಂದ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಸಮೀಪ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು...