ಚಿಕ್ಕಮಗಳೂರು : ಇಡೀ ಪ್ರಪಂಚವೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾಗ ಭಾರತದ ಯಾವುದೇ ಬ್ಯಾಂಕ್ ಗಳು ಮುಚ್ಚದಂತೆ ಮಾಡಿದ್ದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಎಂದು ಕಡೂರು ಶಾಸಕ ಕೆ.ಎಸ್ ಆನಂದ್ ಸ್ಮರಿಸಿದ್ದಾರೆ.
ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅವರು ಸಿಂಗ್ ನಿಧನ ಕಾಂಗ್ರೆಸ್ ಪಕ್ಷಕ್ಕಷ್ಟೆ ಅಲ್ಲ ದೇಶದ ಎಲ್ಲಾ ಜನತೆಗೆ ದುಖಃಕರ ವಿಷಯವಾಗಿದ್ದು ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಡೀ ಪ್ರಪಂಚದ ಎಷ್ಟೋ ದೇಶಗಳು ಆರ್ಥಿಕ ಏರುಪೇರು ಎದುರಿಸುತ್ತಿದ್ದರೂ ಭಾರತದ ಯಾವುದೇ ಬ್ಯಾಂಕ್ ಮುಳುಗುವಂತಹ ಒಂದೇ ಒಂದು ಘಟನೆ ಅವರ ಆಡಳಿತದಲ್ಲಿ ನಡೆಯಲಿಲ್ಲ ಎಂದರು.
ಆರ್.ಬಿ ಐ ಗೌರ್ನರ್ ಆಗಿ ದೇಶಕ್ಕೆ ಕೊಡುಗೆ ಕೊಟ್ಟ ಕೀರ್ತಿಯೂ ಮನ ಮೋಹನ್ ಸಿಂಗ್ ರಿಗೆ ಸಲ್ಲಬೇಕು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ದ ಕನಸು ನನಸು ಮಾಡಿದ್ದು ನರೆಗಾ ದಂತ ಕಾರ್ಯಕ್ರಮ ಕೊಡುವ ಮೂಲಕ ಗ್ರಾಮ ಪಂಚಾಯತಿ ಗಳಿಗೆ ನೇರವಾಗಿ ಅನುದಾನ ಮಾಡಿದ್ದು ಸೇರಿದಂತೆ ಆಧಾರ್ ಆರ್ ಟಿ ಐ ನಂತಹ ಉತ್ತಮ ಯೋಜನೆಗಳನ್ನು ದೇಶಕ್ಕೆ ಕೊಟ್ಟಿದ್ದಾರೆ ಎಂದು ಕೆಎಸ್ ಆನಂದ್ ಹೇಳಿದರು.
Leave a comment