ಚಿಕ್ಕಮಗಳೂರು : ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಹ ಶಿಕ್ಷಕ ಒಬ್ಬರನ್ನು ಬಂಧಿಸಿ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಶಾಲೆಯ ಸಹ ಶಿಕ್ಷಕ ಚಂದ್ರ ಶೆಟ್ಟಿ ಬಂಧಿತ ಶಿಕ್ಷಕನಾಗಿದ್ದು, ಈ ಹಿಂದೆಯೂ ಗುಬ್ಬಿಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಶಿಕ್ಷಕನಾಗಿದ್ದಾಗಲೂ ಇದೇ ರೀತಿಯ ಕಿರುಕುಳ ನೀಡಿದ ಆರೋಪ ಇದೇ ಶಿಕ್ಷಕನ ಮೇಲೆ ಕೇಳಿ ಬಂದಿತ್ತು.
ಗುಬ್ಬಿಹಳ್ಳಿಯಲ್ಲಿ ಪೋಷಕರು ಈತನ ಕೃತ್ಯದಿಂದಾಗಿ ಬೇಸತ್ತು ಧರ್ಮದೇಟು ನೀಡಿದ ಘಟನೆಯೂ ನಡೆದಿತ್ತು, ಆ ವೇಳೆ ದಂಡ ಕಟ್ಟಿ ಈ ಹಿಂದೆ ಬಚಾವಾಗಿದ್ದ ಈತ ಈ ಬಾರಿ ಬಂಧನಕ್ಕೆ ಒಳಗಾಗಿದ್ದಾನೆ.
ಹಿರೇಗೌಜ ಶಾಲೆಯ 13ಕ್ಕೂ ಹೆಚ್ಚು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆಯಲ್ಲಿ ಅವರೆಲ್ಲರೂ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಜೈಲಿನಲ್ಲಿರುವ ಶಿಕ್ಷಕ ಚಂದ್ರ ಶೆಟ್ಟಿಯನ್ನು ಶಿಕ್ಷಣ ಇಲಾಖೆ ಅಮಾನತ್ತು ಗೊಳಿಸಿದೆ. ಈ ನಡುವೆ ಇವನಿಗೆ ಎಂಎಲ್ಸಿ ಒಬ್ಬರ ಕೃಪ ಕಟಾಕ್ಷ ಇದೆ ಎಂದು ಹೇಳಲಾಗುತ್ತಿದೆ.
Leave a comment